ಚುನಾವಣಾ ರ‍್ಯಾಲಿ-ರೋಡ್‌ಶೋಗಳ ರದ್ದಿಗೆ ಸಲಹೆ
ನವದೆಹಲಿ, ಜ. ೬: ದೇಶದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ಚುನಾವಣಾ ರ‍್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಡೆಸಲು ಸಾಧ್ಯವಿಲ್ಲ ಮತ್ತು ಅಂತಹ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ನೀತಿ ಆಯೋಗದ ಸದಸ್ಯ ಹಾಗೂ ಭಾರತದ ಕೋವಿಡ್ ಟಾಸ್ಕ್ಫೋರ್ಸ್ ಮುಖ್ಯಸ್ಥ ವಿ.ಕೆ. ಪಾಲ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಇಂತಹ ದೊಡ್ಡ ಪ್ರಮಾಣದ ರ‍್ಯಾಲಿಗಳು ಮತ್ತು ರೋಡ್‌ಶೋಗಳನ್ನು ತಾವಾಗಿಯೇ ನಿಲ್ಲಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಮೂಲಕ ಅಂತಹ ದೊಡ್ಡ ಕಾರ್ಯಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ತಾನು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಸೂಚನೆ ರವಾನಿಸಿದೆ. ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧವಾಗಿದೆ. ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ವಾರ ನಿಗದಿಯಾಗಿದ್ದ ನಾಲ್ಕು ರ‍್ಯಾಲಿಗಳನ್ನು ಕಾಂಗ್ರೆಸ್ ರದ್ದುಗೊಳಿಸಿದೆ ಮತ್ತು ದೇಶದಲ್ಲಿ ಕೋವಿಡ್ ಸೋಂಕುಗಳ ಹಠಾತ್ ಏರಿಕೆಯ ಮಧ್ಯೆ ಮುಂದಿನ ೧೫ ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಯಾವುದೇ ದೊಡ್ಡ ರ‍್ಯಾಲಿಗಳನ್ನು ನಡೆಸದಿರಲು ನಿರ್ಧರಿಸಿದೆ.
ಭದ್ರತೆಯಲ್ಲಿ ಲೋಪ-ತನಿಖೆಗೆ ಪಿ.ಐ.ಎಲ್.
ನವದೆಹಲಿ, ಜ. ೬: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬAಧಿಸಿದAತೆ ಪಂಜಾಬ್ ಸರ್ಕಾರದಿಂದ ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ಸುಪ್ರೀಂ ಕೋರ್ಟ್ನಲ್ಲಿ ಪಂಜಾಬ್ ಸರ್ಕಾರದ ಸ್ಥಾಯಿ ವಕೀಲರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಲು ಲಾಯರ್ಸ್ ವಾಯ್ಸ್ಗೆ ತಿಳಿಸಿದ್ದು, ವಿಚಾರಣೆಗೆ ಬರಲಿದೆ. ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದ ನಂತರ ಸಿಜೆಐ ಈ ನಿರ್ದೇಶನ ನೀಡಿದ್ದಾರೆ. ಪಂಜಾಬ್‌ನಲ್ಲಿ ಪ್ರಧಾನ ಮಂತ್ರಿಯ ಭದ್ರತೆ ಯಲ್ಲಿ ಗಂಭೀರ ಲೋಪಕ್ಕೆ ಸಂಬAಧಿಸಿದAತೆ ತುರ್ತು ವಿಷಯ ಪ್ರಸ್ತಾಪಿ ಸುತ್ತಿದ್ದೇನೆ ಎಂದು ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. ಇದಕ್ಕೆ ಸಿಜೆಐ, ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ? ಎಂದು ಸಿಂಗ್ ಅವರನ್ನು ಪ್ರಶ್ನಿಸಿದರು. ಬಂದೋಬಸ್ತ್ ಕುರಿತು ವೃತ್ತಿಪರ ಮತ್ತು ಪರಿಣಾಮಕಾರಿ ತನಿಖೆಯ ಅಗತ್ಯವಿದೆ. ಪ್ರಧಾನಿ ಭೇಟಿ ವೇಳೆ ಪಂಜಾಬ್ ಪೊಲೀಸರ ಚಲನವಲನ ಮತ್ತು ನಿಯೋಜನೆಯ ಸಂಪೂರ್ಣ ದಾಖಲೆಗಳನ್ನು ಬಟಿಂಡಾದ ಜಿಲ್ಲಾ ನ್ಯಾಯಾಧೀಶರು ಕಸ್ಟಡಿಗೆ ತೆಗೆದುಕೊಳ್ಳಲು ನಿಮ್ಮ ಮೇಲ್ವಿಚಾರಣೆಯಲ್ಲಿ ಸೂಕ್ತವಾಗಿರುತ್ತದೆ ಎಂದು ಸಿಂಗ್ ಪೀಠವನ್ನು ಒತ್ತಾಯಿಸಿದರು. ಈ ವೇಳೆ ಸಿಜೆಐ ಅವರು ತಮ್ಮ ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಇಂದು ಈ ಅರ್ಜಿಯ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಈ ಪಿಐಎಲ್ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರ ಸರ್ಕಾರದ ಕಕ್ಷಿದಾರರನ್ನು ಪ್ರಕರಣಕ್ಕೆ ಒಳಪಡಿಸಿದೆ.
ಬಿ.ಜೆ.ಪಿ. ನಾಯಕರ ಪಿಸು ಮಾತು...
ತುಮಕೂರು, ಜ. ೬: ಸಚಿವ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಸಚಿವ ಹಾಗೂ ಸಂಸದರೊಬ್ಬರು ಆಡಿದ ಪಿಸುಮಾತು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತುಮಕೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಆರಂಭದಲ್ಲಿ ಸಂಸದ ಜಿ.ಎಸ್. ಬಸವರಾಜ್ ಮತ್ತು ಸಚಿವ ಭೈರತಿ ಬಸವರಾಜ್ ಗುಸುಗುಸು-ಪಿಸುಪಿಸು ಮಾತನಾಡಿದ್ದಾರೆ. ಸಂಸದ ಬಸವರಾಜ್ ಭೈರತಿ ಬಸವರಾಜ್ ಅವರ ಕಿವಿಯಲ್ಲಿ, ಒಂದು ಸೀಟ್ ಬರಲ್ಲ. ಈ ನನ್ ಮಗ ಮಾತು ಎತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯುಟಿವ್ ಇಂಜಿನಿಯರ್‌ಗೆ ಹೇಳುತ್ತಾನೆ. ಹೆಂಡತಿ ಸೀರೆ ಒಗೆಯುವುದಕ್ಕೆ ಇವನು ಲಾಯಕ್ ಅಂತಾ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೆöÊರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ ಎಂದು ಹೆಸÀರು ಹೇಳದೆ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.
ಭದ್ರತಾ ಲೋಪ ವಿಚಾರÀ ದೊಡ್ಡ ನಾಟಕ-ಪಂಜಾಬ್ ಸಿಎಂ
ಬರ್ನಾಲಾ, ಜ. ೬: ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರವನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಿರಾಕರಿಸಿದ್ದು, ಇದೊಂದು ದೊಡ್ಡ ನಾಟಕ ಎಂದು ಗುರುವಾರ ಕಿಡಿಕಾರಿದ್ದಾರೆ. ಬರ್ನಾಲಾದ ದನಾ ಮಂಡಿಯಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಸಿಧು, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಸತತ ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಗಡಿಯಲ್ಲಿ ಕಾಯುತ್ತಿದ್ದರು. ಆದರೆ ಅವರು ಯಾರೂ ಗಲಾಟೆ ಮಾಡಲಿಲ್ಲ ಎಂದು ಪ್ರಧಾನಿ ಮೋದಿಗೆ ನೆನಪಿಸಿದರು. ಪ್ರಧಾನಿ ಭದ್ರತಾ ಪಡೆ ಫಿರೋಜ್‌ಪುರಕ್ಕೆ ಹೋಗುವ ಮಾರ್ಗದಲ್ಲಿ ಬಟಿಂಡಾದ ಮೇಲ್ಸೇತುವೆಯೊಂದರಲ್ಲಿ ೧೫-೨೦ ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡಿತು ಅಷ್ಟೇ. ಇದು ಪ್ರಮುಖ ಭದ್ರತಾ ಲೋಪವಾಯಿತೇ? ಎಂದು ಪ್ರಶ್ನಿಸಿದ ಅವರು ಇದೊಂದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಪಂಜಾಬ್ ಮುಖ್ಯಮಂತ್ರಿ, ರಸ್ತೆ ಮಾರ್ಗವಾಗಿ ಫಿರೋಜ್‌ಪುರಕ್ಕೆ ಹೋಗುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿದ್ದಾರೆ.
ವಿಮಾನದಲ್ಲಿ ಭಾರಿ ಮೌಲ್ಯದ ಚಿನ್ನದ ನಾಣ್ಯ
ಬೆಂಗಳೂರು, ಜ. ೬: ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಸೀಟ್ ಕೆಳಗಡೆ ಬಚ್ಚಿಡಲಾಗಿದ್ದ ರೂ. ೧,೩೮,೬೦,೦೦೦ ಮೌಲ್ಯದ ೨.೮ ಕೆ.ಜಿ. ತೂಕದ ಚಿನ್ನದ ನಾಣ್ಯ ಅಥವಾ ಬಾರ್‌ಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣ ಬಂದು ತಲುಪಿದ ನಂಬರ್- ೬ಇ ೦೯೬ ವಿಮಾನದಲ್ಲಿ ಬೃಹತ್ ಪ್ರಮಾಣದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಮಾನದ ಸೀಟಿನ ಕೆಳಗಡೆ ಬಚ್ಚಿಡಲಾಗಿದ್ದ ೨೪ ಚಿನ್ನದ ಬಾರ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರು ವಿಮಾನದಿಂದ ಇಳಿದ ನಂತರ ಸಣ್ಣ ಸುಳಿವಿನ ಆಧಾರದ ಮೇಲೆ ತಪಾಸಣೆ ನಡೆಸಿದಾಗ ಬೂದು ಬಣ್ಣದ ಚೀಲವೊಂದರಲ್ಲಿ ಅವುಗಳನ್ನು ಸುತ್ತಿಡಲಾಗಿತ್ತು. ಇವುಗಳನ್ನು ಯಾರು ಸಾಗಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದರು.
೧೨೫ ವಿಮಾನ ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್
ನವದೆಹಲಿ, ಜ. ೬: ಮಿಲಾನ್-ಅಮೃತಸರಕ್ಕೆ ಚಾರ್ಟರ್ ವಿಮಾನದಲ್ಲಿ ಆಗಮಿಸಿದ್ದ ೧೨೫ ಪ್ರಯಾಣಿಕರಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದೆ. ಸರ್ಕಾರಿ ಅಧಿಕಾರಿಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದು, ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಈ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಬುಧವಾರ ಮಧ್ಯಾಹ್ನ ೧.೩೦ ಕ್ಕೆ ಅಮೃತಸರಕ್ಕೆ ಆಗಮಿಸಿದ ಚಾರ್ಟರ್ ವಿಮಾನ ವೈಯು ೬೬೧ ನಲ್ಲಿ ೧೭೯ ಪ್ರಯಾಣಿಕರು ಇದ್ದರು. ಕೋವಿಡ್-೧೯ಗೆ ಸಂಬAಧಿಸಿದAತೆ ಇಟಾಲಿ ಅತಿ ಹೆಚ್ಚು ಅಪಾಯದ ಪಟ್ಟಿಯಲ್ಲಿರುವ ರಾಷ್ಟçವಾಗಿರುವುದರಿಂದ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಎಲ್ಲಾ ೧೬೦ ಅರ್ಹ ಪ್ರಯಾಣಿಕರನ್ನೂ ಕೋವಿಡ್-೧೯ ಸೋಂಕು ಪತ್ತೆ ತಪಾಸಣೆಗೆ ಕಳಿಸಲಾಯಿತು ಹಾಗೂ ೧೨೫ ಮಂದಿ ಈ ಪೈಕಿ ಸೋಂಕು ಪೀಡಿತರಾಗಿದ್ದಾರೆ ಎಂದು ತಿಳಿದುಬಂದಿದೆ.