ನಾಪೋಕ್ಲು, ಜ. ೬ : ಸಮೀಪದ ಬೇತು ಗ್ರಾಮದಲ್ಲಿ ಕಾಡಾನೆಗಳು ಬುಧವಾರ ರಾತ್ರಿ ಸಮಯಲ್ಲಿ ದಾಳಿ ಇಟ್ಟು ಭತ್ತದ ಗದ್ದೆ, ಬಾಳೆ ತೋಟಗಳನ್ನು ದ್ವಂಸಗೊಳಿಸಿ ಅಪಾರ ನಷ್ಟವನ್ನುಂಟು ಮಾಡಿವೆ. ಗ್ರಾಮದ ಪಾತಂಡ ಕುಟುಂಬದ ಜಗದೀಶ, ಪಳಂಗಪ್ಪ, ಬೋಪಯ್ಯ, ಸೋಮಯ್ಯ, ಉತ್ತಪ್ಪ, ಉಮೇಶ ಇವರುಗಳಿಗೆ ಸೇರಿದ ಗದ್ದೆಯನ್ನು ದ್ವಂಸ ಗೊಳಿಸಿ ಬಾಳೆ ತೋಟಕ್ಕೂ ಲಗ್ಗೆ ಇಟ್ಟ ಕಾಡಾನೆಗಳು ಅಪಾರ ನಷ್ಟವನ್ನು ಉಂಟು ಮಾಡಿವೆೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಾಡಾನೆ ದಾಳಿಯಿಂದ ಈ ವಿಭಾಗದ ಜನರಿಗೆ ಅಪಾರ ನಷ್ಟವಾಗಿದ್ದು, ಕಾಡಾನೆ ಉಪಟಳದಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುತ್ತಿದ್ದಾರೆ. ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕು. ಬೆಳೆಗಾರರಿಗೆ ಕೂಡಲೇ ಪರಿಹಾರವನ್ನು ಒದಗಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. - ದುಗ್ಗಳ.