೧೯೭೧ರಲ್ಲಿ ಪಾಕಿಸ್ತಾನ ವಿಭಜನೆಗೊಂಡು ಬಾಂಗ್ಲಾ ದೇಶ ಉದಯವಾಗಲು ಭಾರತದ ಸೇನಾಪಡೆಗಳ ಕಾರ್ಯಾಚರಣೆಯಿಂದ ಮಾತ್ರ ಸಾಧ್ಯವಾಗಿತ್ತು. ಇಂದಿರಾಗಾAಧಿ ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ತೀರ್ಮಾನದಂತೆ ಭಾರತೀಯ ಸೇನೆ ಪಾಕಿಸ್ತಾನದ ಶತ್ರು ಸೈನಿಕರನ್ನು ಸದೆಬಡಿದು ಬಾಂಗ್ಲಾವನ್ನು ಮುಕ್ತಗೊಳಿಸಿ ನೂತನ ರಾಷ್ಟçವಾಗಲು ವೀರತನ ಪ್ರದರ್ಶಿಸಿತು. ಹೆಮ್ಮೆಯೆಂದರೆ ಈ ವಿಜಯ ಪತಾಕೆಯ ಧ್ವಜ ಹಿಡಿದವರಲ್ಲಿ ಕೊಡಗಿನ ಮೇಜರ್ ಕುಪ್ಪಂಡ ಪಿ. ನಂಜಪ್ಪ ಅವರು ಓರ್ವ ಪ್ರಮುಖರಾಗಿದ್ದರು ಎನ್ನುವುದು ಗಮನಾರ್ಹ. ಅವರ ಸ್ವತಃ ಅನುಭವವನ್ನು ಈ ಸರಣಿಯಲ್ಲಿ ಮುಂದುವರಿಸಲಾಗಿದೆ.
‘‘ ೧೯೭೧ರ ಡಿಸೆಂಬರ್ ೬ ಮತ್ತು ೭ರಲ್ಲಿ ನಾನು ಮತ್ತು ನನ್ನೊಂದಿಗಿದ್ದ ಪಡೆ ಒಬ್ಬೊಬ್ಬರು ೩೦, ೪೦ ಕೆ.ಜಿ. ತೂಕದ ಶಸ್ತಾçಸ್ತçಗಳನ್ನು ಹೊತ್ತು ಕುಮ್ಮಿಲ್ಲ ಕಡೆಗೆ ತೆರಳಿದೆವು. ಅಲ್ಲಿ ಮೇಜರ್ ಆಕ್ಸಿಸ್ ಕೂಡ ನಮ್ಮೊಂದಿಗೆ ಸೇರ್ಪಡೆಗೊಂಡರು. ಸಮರ ಮುಂದುವರಿಯಿತು. ಶತ್ರುಪಡೆಗಳನ್ನು ಹಿಮ್ಮೆಟ್ಟಿಸುತ್ತಾ ಮೆಘ್ನ ನದಿ ತೀರದ ದೌಡ್‌ಖಂಡಿ ತಲುಪಿದೆವು. ನನ್ನ ನೇತೃತ್ವದಲ್ಲಿ ಮುಖ್ಯ ಪಟ್ಟಣವಾದ ದೌಡ್‌ಖಂಡಿಯನ್ನು ಭಾರತೀಯ ಸೇನೆಯ ವಶಕ್ಕೆ ತೆಗೆದುಕೊಳ್ಳಲಾಯಿತು. ವಿಶಾಲವಾದ ಮೆಘ್ನ ನದಿತೀರದಲ್ಲಿ ಕಾರ್ಯಾಚರಣೆ ಮುಂದುವರಿದು ನಾವು ವಿಜಯದತ್ತ ಮುನ್ನುಗ್ಗುತ್ತಿದ್ದಂತೆ ಕೊಡಗಿನ ಮತ್ತೋರ್ವ ಸೇನಾನಿ ಈಗ ಏರ್ ಮಾರ್ಷಲ್ ಆಗಿ ನಿವೃತ್ತರಾಗಿ ರುವ, ಆಗ ಸ್ಕಾ÷್ವಡ್ರನ್ ಲೀಡರ್ ಆಗಿದ್ದ ನಂದಾ ಕಾರ್ಯಪ್ಪ ಅವರು ಎಂಐ ಸೀರಿಸ್ ಹೆಲಿಕಾಫ್ಟರ್ ಮೂಲಕ ವಾಯು ದಾಳಿಯನ್ನು ಮುಂದುವರಿಸಿ ದರು. ಅಷ್ಟರಲ್ಲಿ ನಾವು ಢಾಕಾದಿಂದ ೧೨ ಕಿ. ಮೀ. ದೂರದ ಪ್ರದೇಶಕ್ಕೆ ತಲುಪಿದೆವು.
ನಾನು ಉತ್ಸಾಹದಿಂದಲೇ ನನ್ನ ಪಡೆಯೊಂದಿಗೆ ಶತ್ರುಪಾಳಯವನ್ನು ಬೇಧಿಸಿ ೧೯೭೧ರ ಡಿಸೆಂಬರ್ ೧೫ ರಂದು ಢಾಕಾವನ್ನು ತಲುಪಿ ವಶಪಡಿಸಿ ಕೊಳ್ಳಲು ಸಾಧ್ಯವಾಯಿತು. ಆಶ್ಚರ್ಯವೆಂದರೆ ನಮ್ಮ ದಾಳಿಯ ಪ್ರಹಾರವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲದೆ ಡಿಸೆಂಬರ್ ೧೬ ರಂದು ೯೩ ಸಾವಿರ ಮಂದಿ ಪಾಕ್ ಸೈನಿಕರು ನಮಗೆ ಶರಣಾದರು. ಈ ನಡುವೆ ನನ್ನ ನೇತೃತ್ವದ ಮತ್ತೊಂದು ಬೆಟಾಲಿಯನ್ ಕುಮ್ಮಿಲ್ಲಾದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಒಂದು ಸಾವಿರಕ್ಕಿಂತ ಅಧಿಕ ಪಾಕ್ ಸೈನಿಕರನ್ನು ಸೆರೆ ಹಿಡಿದರು. ಇದೆಲ್ಲವೂ ಇನ್ನೂ ನೆನಪಿನ ಸುರುಳಿಯಲ್ಲಿ ಉಳಿದ ಘಟನೆಗಳಾಗಿದೆ.
ಸೇನೆಯಲ್ಲಿನ ಸೇವಾವಧಿ ಸಂದರ್ಭ ನನಗೆ ಒಂದು ಬ್ರಿಗೇಡ್ ಮತ್ತೊಂದು ಇನ್‌ಫೇಂಟ್ರಿ ಡಿವಿಷನ್‌ಗಳ ನೇತೃತ್ವ ವಹಿಸಿ, ಕಾರ್ಯ ನಿರ್ವಹಿಸುವಂತಹ ಅವಕಾಶ ಒದಗಿತ್ತು. ಅಲ್ಲದೆ, ೨೦೦೪ರಲ್ಲಿ ನಿವೃತ್ತನಾಗುವ ಮುನ್ನ ರಾಷ್ಟಿçÃಯ ರಕ್ಷಣಾ ಕಾಲೇಜಿನಲ್ಲಿ ಇನ್ಸ್ಟ್ರಕ್ಟರಾಗಿ ಕಾರ್ಯ ನಿರ್ವಹಿಸುವಂತಹ ಜವಾಬ್ದಾರಿಕೆ ದೊರಕಿತು. ರಾಷ್ಟಾçಧ್ಯಕ್ಷ ಅಬ್ದುಲ್ ಕಲಾಂ ಅವರಿಂದ ಅತಿ ವಿಶಿಷ್ಟ ಸೇವಾ ಪದಕ (ಎವಿಎಎಸ್‌ಎಂ) ಅನ್ನು ಪಡೆಯು ವಂತಹ ಸುಯೋಗ ಲಭಿಸಿತ್ತು. ನಿವೃತ್ತನಾದ ಬಳಿಕ ಮತ್ತೆ ನನ್ನ ತಾಯಿನಾಡಿಗೆ ಮರಳಿ ಕಾಫಿ ತೋಟಗಳ ನಡುವೆ ವಾಸಿಸುವಂತಹ ಸಂತೃಪ್ತಿ ಲಭಿಸಿದೆ’’ (ಮುಂದುವರಿಯುವುದು) -‘‘ಚಕ್ರವರ್ತಿ’’