ಮಡಿಕೇರಿ, ಜ. ೪: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದಲ್ಲಿ ಕೊಡವ ಕುಟುಂಬದ ಮರಣ ನಿಧಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಪ್ರತಿ ಹದಿನೆಂಟು ವರ್ಷ ತುಂಬಿದ ಕೊಡವ ಕುಟುಂಬದ ವ್ಯಕ್ತಿಗಳು ಇದರ ಸದಸ್ಯರಾಗಿದ್ದು ಮೂಲ ಶೇರು ಹಣ ಒಬ್ಬರಿಗೆ ೧,೩೦೦ ರೂ. ಗಳು ಮತ್ತು ಪ್ರತಿ ವರ್ಷ ನವೀಕರಣಕ್ಕೆ ೨೦೦ ರೂಗಳಂತೆ ನಿಗದಿಪಡಿಸಿದ್ದು ಸದಸ್ಯರು ಮರಣ ಪಟ್ಟರೆ ೨೫ ಸಾವಿರ ರೂಗಳನ್ನು ಕುಟುಂಬದವರಿಗೆ ಅಂದೇ ನೀಡಲಾಗುವುದು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಚೆರುಮಾಡಂಡ ಸತೀಶ್ ಸೋಮಣ್ಣ ಅವರು ನಮ್ಮ ಹಿರಿಯರು ಇಂತಹ ಉಪಯುಕ್ತ ಕಾರ್ಯಕ್ಕೆ ಚಿಂತನೆ ನಡೆಸಿದ್ದು ಈಗ ಕಾರ್ಯರೂಪಕ್ಕೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಮರಣ ನಿಧಿ ಯೋಜನೆಗೆ ಊರಿನ ಎಲ್ಲಾ ಕೊಡವ ಕುಟುಂಬದ ಸದಸ್ಯರು ತಮ್ಮ ಬೆಂಬಲವನ್ನು ಸೂಚಿಸಿದ್ದು ಪ್ರತಿ ಕುಟುಂಬದಿAದ ಒಬ್ಬರು ಸಂಚಾಲಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದ ತೆನ್ನೀರಾ ಮೈನಾ ರವರು ಹುಟ್ಟು ನಿಶ್ಚಿತ,ಸಾವು ಅನಿಶ್ಚಿತ. ಸಾವಿನ ಸಮಯದಲ್ಲಿ ದೊಡ್ಡ ಮೊತ್ತದ ಹಣ ಆ ಕುಟುಂಬಕ್ಕೆ ದೊರೆಯುವುದರಿಂದ ಸಕಾಲಿಕ ನೆರವು ದೊರೆತಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಮರಣ ನಿಧಿ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕೊಡವ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯ ತೆನ್ನೀರಾ ರಮೇಶ್ ಪೊನ್ನಪ್ಪನವರು ವಂದಿಸಿದರು.

ಸAಘದ ಪ್ರಧಾನ ಕಾರ್ಯದರ್ಶಿ ಮುಂಜಾAದಿರ ಸತ್ಯ ಬೋಪಯ್ಯ, ಖಜಾಂಚಿ ಕೋಳುಮಾಡಂಡ ಕಿರಣ್, ಸಹ ಕಾರ್ಯದರ್ಶಿ ತೆನ್ನೀರಾ ಪೆಮ್ಮಯ್ಯ, ಪ್ರಮುಖರಾದ ಮುಕ್ಕಾಟಿರ ಬಾಬಿ ಚೀಯಣ್ಣ, ಮುಂಜಾAದಿರ ರಮೇಶ್, ಹ್ಯಾರಿ ಪೂಣಚ್ಚ, ಸುರಿ ಮಂದಣ್ಣ, ಅಜಿತ್ ಜಬ್ಬಂಡ ರಾಜೀವ್, ಬೋಸ್, ಪೊಡೆಯಂಡ ಕೌಶಿಕ್ ಸುಬ್ಬಯ್ಯ, ಮುಕ್ಕಾಟಿರ ಬೋಜು ಸೋಮಯ್ಯ, ಚೆರುಮಾಡಂಡ ಬಿದ್ದಪ್ಪ ಸೇರಿದಂತೆ ಕುಟುಂಬದ ಪ್ರಮುಖರು ಭಾಗವಹಿಸಿದ್ದರು.