ಗೋಣಿಕೊಪ್ಪಲು.ಜ.೪: ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಮಹೇಶ್, ಅಟೆಂಡರ್ ರಾಜನ್ ಇಬ್ಬರು ಸೇರಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇದೀಗ ಎರಡನೇ ದಿನದ ತನಿಖೆಯಲ್ಲಿ ನೂರಕ್ಕೂ ಅಧಿಕ ರಶೀದಿಗಳು ಅಧಿಕಾರಿಗಳ ಕೈ ಸೇರಿವೆ. ತಾ.ಪಂ. ಲೆಕ್ಕ ಅಧಿಕಾರಿ, ಲೆಕ್ಕ ಸಹಾಯಕರು ಹಾಗೂ ಆಡಳಿತ ಸಿಬ್ಬಂದಿ ಪಂಚಾಯಿತಿ ಪರಿಶೀಲನೆ ವೇಳೆ ಸೋಮವಾರವಿದ್ದ ೪ ಲಕ್ಷ ಹಣದ ದುರುಪಯೋಗ ಇದೀಗ ಮಂಗಳವಾರ ಸಂಜೆಯ ವೇಳೆಗೆ ೮ ಲಕ್ಷಕ್ಕೇರಿದೆ. ಅಧಿಕಾರಿಗಳು ಪಂಚಾಯಿತಿಯ ರಶೀದಿ ಪುಸ್ತಕ, ಡಿಮಾಂಡ್ ರಿಜಿಸ್ಟರ್, ಡೈಲಿ ಪುಸ್ತಕವನ್ನು ತಾಳೆ ನೋಡುತ್ತಿರುವ ವೇಳೆ ಪ್ರತಿ ರಶೀದಿ ಪುಸ್ತಕದಲ್ಲಿ ದುರುಪಯೋಗ ನಡೆದಿರುವುದು ಬೆಳಕಿಗೆ ಬಂದಿದೆ.

ತಪ್ಪೊಪ್ಪಿಕೊAಡು ೩ ಲಕ್ಷ ಕಟ್ಟಿದರು

ಪಂಚಾಯಿತಿ ಬಿಲ್ ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಹಣ ದುರುಪಯೋಗÀ ಮಾಡಿರುವುದನ್ನು ಸ್ವತಃ ಒಪ್ಪಿಕೊಂಡು ಸೋಮವಾರ ಇಬ್ಬರು ಸೇರಿ ಮೂರು ಲಕ್ಷ ನಗದು ಹಣವನ್ನು ಪಿಡಿಓ ಅನಿಲ್ ರವರ ಬಳಿ ಸಂದಾಯ ಮಾಡಿದ್ದಾರೆ.

ಹಣವನ್ನು ಸ್ವೀಕರಿಸಿದ ಪಿಡಿಓ ದುರುಪಯೋಗದ ಹಣದಲ್ಲಿ ಮೂರು ಲಕ್ಷ ಹಣವನ್ನು ಜಮೆ ಮಾಡಿದ್ದಾರೆ ಎಂದು ಸರ್ಕಾರದ ನಿಯಮದಂತೆ ಸ್ವೀಕರಿಸಿದ ಹಣಕ್ಕೆ ರಶೀದಿ ನೀಡಿದ್ದಾರೆ. ಅಲ್ಲದೆ ಹಣವನ್ನು ಪಂಚಾಯಿತಿ ಖಾತೆಗೆ ಬ್ಯಾಂಕ್ ಮೂಲಕ ಜಮೆ ಮಾಡಿದ್ದಾರೆ.

ಪಂಚಾಯಿತಿ ನೌಕರರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಲು ಪಿಡಿಓ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಕುಟ್ಟ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಚಂದ್ರಪ್ಪ ಹಾಗೂ ಸಿಬ್ಬಂದಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೇ ದುರುಪಯೋಗಕ್ಕೆ ಸಂಬAಧಿಸಿದ ದಾಖಲೆ ಒದಗಿಸುವಂತೆ ಪಿಡಿಓಗೆ ನೋಟೀಸ್ ಜಾರಿ ಮಾಡಿದ್ದಾರೆ.

ಉಳಿಕೆ ಹಣ ನೀಡಿ

ಲಕ್ಷಾಂತರ ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹ ಮಾಡಿ ಆ ಹಣವನ್ನು ದುರುಪಯೋಗಪಡಿಸಿಕೊಂಡ ನಂತರ ಮತ್ತೆಯೂ ಕಟ್ಟಡ ತೆರಿಗೆ ನೀಡುವಂತೆ ಒತ್ತಾಯಿಸುತ್ತಿದ್ದ ಬಿಲ್ ಕಲೆಕ್ಟರ್ ಮಹೇಶ್‌ನ ಅಸಲಿ ಬಣ್ಣ ಬಯಲು ಮಾಡಿದ ನಗರದ ಕಟ್ಟಡ ಮಾಲೀಕರಾದ ಚೋಡುಮಾಡ ಟಿ. ಬೆಳ್ಳಿಯಪ್ಪ ಕಟ್ಟಡ ಕಂದಾಯ ನಿಗದಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಪಿಡಿಓ ಅನಿಲ್‌ಗೆ ಲಿಖಿತ ಪತ್ರ ನೀಡಿ ಮಾಹಿತಿ ಬಯಸಿದ್ದಾರೆ. ನಾನು ಕಷ್ಟದಲ್ಲಿ ಇರುವುದರಿಂದ ಕಟ್ಟಡ ತೆರಿಗೆ ಹಣವನ್ನು ಪಂಚಾಯಿತಿಗೆ ಜಮಾ ಮಾಡಿಕೊಂಡು ಉಳಿಕೆ ಹಣವನ್ನು ಕೂಡಲೇ ವಾಪಾಸು ನೀಡುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಅವಶ್ಯ ಬಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಬೆಳ್ಳಿಯಪ್ಪ ಅಧಿಕಾರಿಗೆ ತಿಳಿಸಿದ್ದಾರೆ. - ಹೆಚ್.ಕೆ.ಜಗದೀಶ್