ಕೋವರ್ ಕೊಲ್ಲಿ ಇಂದ್ರೇಶ್
ಮAಗಳೂರು, ಜ. ೩ : ಉಳ್ಳಾಲದ ಮನೆಯೊಂದರ ಮೇಲೆ ಸೋಮವಾರ ರಾಷ್ಟಿçÃಯ ತನಿಖಾ ದಳದ ತಂಡ ದಾಳಿ ನಡೆಸಿದೆ. ಬಿ.ಎಂ. ಭಾಷಾ ಎಂಬ ವ್ಯಕ್ತಿ ಮತ್ತು ಆತನ ಸೊಸೆ ಜಿಲ್ಲೆಯ ಮೂಲದ ದೀಪ್ತಿ ಮಾರ್ಲ ಆಲಿಯಾಸ್ ಮರಿಯಂ ಳನ್ನು ಎನ್‌ಐಎ ವಶಕ್ಕೆ ಪಡೆದಿದೆ.
ಇಂದು ಬೆಳಿಗ್ಗೆ ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆಯಲ್ಲಿ ವಶಕ್ಕೆ ಪಡೆದಿದೆ. ಎನ್‌ಐಎ ತಂಡ ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಹೋಗಿದೆ.
ಮಂಗಳೂರಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನಂತರ ಹೆಚ್ಚಿನ ತನಿಖೆಗೆ ನೇರವಾಗಿ ದೆಹಲಿಗೆ ಕರೆದುಕೊಂಡು ಹೋಗಿದೆ. ಇದೇ ಮನೆಗೆ ಕಳೆದ ಆಗಸ್ಟ್ ೪ರಂದು ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಅಂದು ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅನಾಸ್ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿತ್ತು. ಈ ವೇಳೆ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂಳನ್ನೂ ಪ್ರಶ್ನಿಸಿದ್ದು ಸಣ್ಣ ಮಗುವಿದ್ದ ಕಾರಣ ಕೇವಲ ವಿಚಾರಣೆ ನಡೆಸಿ ಬಿಡಲಾಗಿತ್ತು.
ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರನ್ನು ಬಂಧಿಸಿದ ನಂತರ ವಿಚಾರಣೆ ವೇಳೆ ಬಿ.ಎಂ.ಬಾಷಾನಿಗೆ ಐಸಿಸ್ ಉಗ್ರರ ಜೊತೆ ನಂಟಿರುವ ಕುರಿತು ಮಾಹಿತಿ ಸಿಕ್ಕಿತ್ತು. ಇದೇ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಎಐಎ ಅಧಿಕಾರಿಗಳ ತಂಡ ಉಳ್ಳಾಲದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದರು.
ಬಾಷಾರ ಪುತ್ರಿಯ ಮಗಳು ಅಜ್ಮಲ್ ಕುಟುಂಬ ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆ ಯಾಗಿತ್ತು. ೨ ವರ್ಷಗಳ ಹಿಂದೆ ಕಾಸರಗೋಡಿನ ೧೭ ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು. ಇವರ ಪೈಕಿ ಅಜ್ಮಲ್ ಕುಟುಂಬವೂ ಇರಬಹುದು ಎಂದು ಶಂಕಿಸಲಾಗಿತ್ತು.
ಅಜ್ಮಲ್‌ಳನ್ನು ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಅವರೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು.
ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗುವುದಾಗಿ ಹೋದವರು ಮತ್ತೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶ್ರೀಲಂಕಾದಿAದ ಮಸ್ಕತ್ ಹಾಗೂ ಕತಾರ್‌ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂಬ ಮಾಹಿತಿ ಇತ್ತು. ವೈದ್ಯನಾಗಿರುವ ಸಿಯಾಝ್‌ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ಸಿರಿಯಾಗೆ ತೆರಳಿದ್ದ ಎನ್ನಲಾಗಿದೆ. . ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟಿçÃಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಮುಂದುವರೆದ ಭಾಗವಾಗಿ ಅಜ್ಮಲ್ ತಂದೆ ಬಾಷಾ ಮನೆಯ ಮೇಲೆ ದಾಳಿ ನಡೆದಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಜಿಲ್ಲೆಯ ಗುಡ್ಡೆಹೊಸೂರು ಮೂಲದ ದೀಪ್ತಿ ಮಾರ್ಲ ಮಂಗಳೂರಿನ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಅಧ್ಯಯನ ಸಂದರ್ಭದಲ್ಲಿಯೇ ಆನಾಸ್ ಅಬ್ದುಲ್ ಎಂಬಾತನನ್ನು ಪ್ರೀತಿಸಿದ್ದಳು. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಆತನನ್ನೆ ಮದುವೆ ಆಗಿದ್ದಳು. ಮತಾಂತರದ ನಂತರ ಮರಿಯಂ ಎಂಬ ಹೆಸರಿನೊಂದಿಗೆ ಈಕೆಯು ಆನ್‌ಲೈನ್‌ನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಗೆ ಯುವಕರನ್ನು ಸೇರಿಸುವ ಮಾಸ್ಟರ್ ಮೈಂಡ್ ಆಗಿದ್ದಳು ಎಂಬ ಆರೋಪ ಈಕೆಯ ಮೇಲಿದೆ.
ಎನ್‌ಐಎ ತಂಡದ ನೇತೃತ್ವವನ್ನು ದೆಹಲಿ ಎನ್‌ಐಎ ಡಿಸಿಪಿ ಶ್ರೀಕೃಷ್ಣ ಕುಮಾರ್ ವಹಿಸಿದ್ದರು.