ಮಡಿಕೇರಿ, ಜ.೩: ರಾಜ್ಯದ ಎಷ್ಟೋ ದೇವಾಲಯಗಳಲ್ಲಿ ಇಂದು ಎಣ್ಣೆ, ಬತ್ತಿಗೂ ಹಣವಿಲ್ಲದ ಪರಿಸ್ಥಿತಿ ಇದ್ದು, ಇಂತಹ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಸ್ವತಂತ್ರಗೊಳಿಸಿದರೆ ಒಂದಿಷ್ಟು ಅಭಿವೃದ್ಧಿಯಾಗಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಪಾಲಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ದೇವಾಲಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ದೇವಾಲಯಗಳನ್ನು ಭಕ್ತರ ಕೈಗೆ ನೀಡುವುದರಲ್ಲಿ ತಪ್ಪೇನಿಲ್ಲ. ಹಿಂದೂ ದೇವಾಲಯಗಳ ಆಸ್ತಿಯನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ, ಸರ್ಕಾರದ ಹಿಡಿತದಿಂದ ಸ್ವಾತಂತ್ರ್ಯಗೊಳಿಸಲಾಗುತ್ತಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿಂದೂ ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಿ ಎಂದು ಸಿದ್ದರಾಮಯ್ಯನವರು ಕೇಳಬೇಕಿತ್ತು. ಆದರೆ ಅವರು ಯಾಕೆ ವಿರೋಧ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಮಸೀದಿ ಹಾಗೂ ಚರ್ಚ್ಗಳು ಆಯಾ ಸಮುದಾಯಗಳ ಆಡಳಿತದಲ್ಲಿದೆ. ಆದರೆ ಹಿಂದೂ ದೇವಾಲಯಗಳು ಮಾತ್ರ ಏಕೆ ಸರ್ಕಾರದ ಆಡಳಿತದಲ್ಲಿವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಮರು ಪ್ರಶ್ನಿಸಿದರು.