ಗೋಣಿಕೊಪ್ಪಲು, ಜ. ೩: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಹಾಗೂ ಅಟೆಂಡರ್ ಇಬ್ಬರು ಸೇರಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ತಾ.ಪಂ.ಲೆಕ್ಕ ಅಧಿಕಾರಿ, ಲೆಕ್ಕ ಸಹಾಯಕರು ಹಾಗೂ ಆಡಳಿತ ಸಿಬ್ಬಂದಿ ಪಂಚಾಯಿತಿಗೆ ಭೇಟಿ ನೀಡಿ ಮುಂಜಾನೆಯಿAದಲೇ ತನಿಖೆ ಆರಂಭಿಸಿದರು.

ಪರಿಶೀಲನೆ ವೇಳೆ ಆರಂಭದಲ್ಲಿದ್ದ ೨,೫೫,೪೮೯ ಲಕ್ಷ ಹಣದ ದುರುಪಯೋಗ ಇದೀಗ ರೂ. ೪ ಲಕ್ಷಕ್ಕೇರಿದೆ.

ಭೇಟಿ ನೀಡಿದ ಅಧಿಕಾರಿಗಳು ಪಂಚಾಯಿತಿಯ ರಶೀದಿ ಪುಸ್ತಕ, ಡಿಮಾಂಡ್ ರಿಜಿಸ್ಟರ್, ಡೈಲಿ ಪುಸ್ತಕವನ್ನು ತಾಳೆ ನೋಡುತ್ತಿದ್ದು ಒಂದಕ್ಕೊAದು ತಾಳೆ ಆಗುತ್ತಿಲ್ಲವೆಂದು ತಿಳಿದು ಬಂದಿದೆ.

ಪAಚಾಯಿತಿ ಬಿಲ್ ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಮೇಲೆ ಹಣ ದುರುಪ ಯೋಗದ ಹಿನ್ನೆಲೆಯಲ್ಲಿ ಪಿಡಿಒ ಅನಿಲ್ ಅವರು ಗ್ರಾ.ಪಂ. ಆಡಳಿತ ಮಂಡಳಿಯ ತೀರ್ಮಾನದಂತೆ ಇವರಿಬ್ಬರ ಮೇಲೆ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದರು.

(ಮೊದಲ ಪುಟದಿಂದ) ನಂತರದಲ್ಲಿ ಪತ್ರಿಕೆ ಈ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಸುದ್ದಿ ಪ್ರಕಟಿಸಿ ಹಿರಿಯ ಅಧಿಕಾರಿಗಳ ಹಾಗೂ ನಗರದ ತೆರಿಗೆದಾರರ ಗಮನ ಸೆಳೆದಿತ್ತು.

ಇದೀಗ ಪಂಚಾಯಿತಿ ವ್ಯಾಪ್ತಿಯ ತೆರಿಗೆದಾರರು ತಮ್ಮ ಕಟ್ಟಡ ಇತ್ಯಾದಿಗಳಿಗೆ ಸಂಬAಧಿಸಿದAತೆ ತಾವು ಪಂಚಾಯಿತಿಗೆ ಕಟ್ಟಿದ್ದ ಹಣದ ರಶೀದಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ನೀಡಿ, ತನಿಖಾ ಅಧಿಕಾರಿಗಳಿಗೆ ತಲುಪಿಸಿದ್ದಾರೆ. ಇದರಿಂದಾಗಿ ತನಿಖೆಗೆ ಅನುಕೂಲವಾಗಿದೆ.

ಈಗಾಗಲೇ ೪೦ ರಶೀದಿಗಳು ತೆರಿಗೆದಾರರು ನೀಡಿದ್ದು ಪ್ರತಿ ರಶೀದಿಯಲ್ಲಿ ವ್ಯತ್ಯಾಸ ಇರುವುದು ತನಿಖೆ ವೇಳೆ ದೃಢಪಟ್ಟಿದೆ.

ಇನ್ನೂ ಹಲವಾರು ತೆರಿಗೆ ರಶೀದಿಗಳು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಕೈ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು ಜಿಲ್ಲೆಯ ೧೦೪ ಪಂಚಾಯಿತಿಯಲ್ಲಿ ಕಡತ ಪರಿಶೀಲನೆ ನಡೆಸುವಂತೆ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಆಯಾಯ ಪಂಚಾಯಿತಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.

ಕುಟ್ಟ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಇವರಿಗೂ ಹಣ ದುರುಪಯೋಗದ ರಶೀದಿಗಳು ಕೈ ಸೇರಿವೆ. ಕೆಲವೇ ದಿನಗಳಲ್ಲಿ ಆರೋಪ ಎದುರಿಸುತ್ತಿರುವ ಇಬ್ಬರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. - ಹೆಚ್.ಕೆ.ಜಗದೀಶ್