ಗೋಣಿಕೊಪ್ಪಲು, ಜ. ೨: ಆತ ೧೩ ವರ್ಷದ ತರುಣ ತನ್ನ ದಿವ್ಯಾಂಗ ಸಮಸ್ಯೆಯಿಂದ ಮತ್ತೊಬ್ಬರೊಂದಿಗೆ ಬೆರೆÀಯಲಾಗದ ಪರಿಸ್ಥಿತಿ. ಇತನಿಗೆ ಮನೆಯಲ್ಲಿಯೇ ವಿದ್ಯಾಭ್ಯಾಸ ಊಟ ತಿಂಡಿ ಎಲ್ಲವೂ ತನ್ನ ಹೆತ್ತ ತಾಯಿ ನಿರ್ವಹಣೆ ಮಾಡುತ್ತಾ ವರ್ಷಗಳು ಕಳೆದಿದ್ದವು, ಶಿಕ್ಷಣ ಇಲಾಖೆಯ ವತಿಯಿಂದ ನೀಡುವ ಸವಲತ್ತುಗಳನ್ನು ಶಿಕ್ಷಕರು ಆತನ ಮನೆಗೆ ತಲುಪಿಸುವ ಕಾರ್ಯ ಕಳೆದ ಆರು ವರ್ಷದಿಂದ ಮಾಡುತ್ತಿದ್ದರು. ಆದರೆ ಆತ ಯಾರೊಂದಿಗೂ ಬೆರೆಯಲಾಗದೇ ಮನೆಯಲ್ಲಿಯೇ ಉಳಿದುಕೊಂಡಿದ್ದ.
ಇತನ ಮನೆಗೆ ಕಾರ್ಯನಿಮಿತ್ತ ತೆರಳಿದ ಗೋಣಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಆರ್. ಸತೀಶ್ ಮನೆಯಿಂದಲೇ ೬ನೇ ತರಗತಿಯ ಕಲಿಕೆಯಿಂದ ಕಿರಣ್‌ನನ್ನು ಕಂಡು ಮರುಗಿದ್ದರು, ಕಿರಣನೊಂದಿಗೆ ಹಲವು ಸಮಯ ಕಳೆದರು, ಶಾಲೆಗೆ ಆಗಮಿಸಿ ಕಿರಣನ ಬಗ್ಗೆ ಇನ್ನಿತರ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಆತನ ಮಾಹಿತಿ ಹಂಚಿಕೊAಡರು.
ದಿವ್ಯಾAಗ ಕಿರಣನನ್ನು ಪೋಷಕರೊಂದಿಗೆ ಶಾಲೆಗೆ ಕರೆತಂದ ಶಿಕ್ಷಕ ಸತೀಶ್ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಕಿರಣ ಮುಕ್ತವಾಗಿ ಬೆರೆಯುವ ಅವಕಾಶ ಕಲ್ಪಿಸಿದರು. ನಡೆದಾಡಲಾಗದ ಸ್ಥಿತಿಯಲ್ಲಿರುವ ಕಿರಣ್ ವೀಲ್‌ಚೇರ್‌ನಲ್ಲಿ ಕುಳಿತು, ಮಕ್ಕಳೊಂದಿಗೆ ಕಾಲ ಕಳೆದು ಖುಷಿಪಟ್ಟರು.
ಶಾಲಾ ವಿದ್ಯಾರ್ಥಿಗಳು ಕಿರಣನನ್ನು ಹೂಗುಚ್ಚ ನೀಡಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಕಿರಣ ಮೊಗದಲ್ಲಿ ಮಂದಹಾಸ ಮೂಡಿತು. ಹೊಸ ಪ್ರಪಂಚಕ್ಕೆ ಬಂದ ಖುಷಿ ಆತನಲ್ಲಿ ಮನೆ ಮಾಡಿದ್ದು ವಿಶೇಷವಾಗಿತ್ತು.
ಹೊಸ ವರ್ಷದ ದಿನದಂದು ಕಿರಣ ನನ್ನು ಶಾಲೆಗೆ ಬರಮಾಡಿಕೊಳ್ಳುವ ಸಲುವಾಗಿ ಶಿಕ್ಷಕ ಸತೀಶ್‌ರವರು ತಮ್ಮ ಸಹ ಶಿಕ್ಷಕರ ಸಹಕಾರ ಪಡೆದು ಸಮನ್ವಯ ಸಮ್ಮಿಲನ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಮತ್ತೊಬ್ಬರಿಗೆ ಮಾದರಿಯಾದರು. ಅದಲ್ಲದೇ ಕಿರಣ್ ವಾರದ ೨ ದಿನ ಶಾಲೆಗೆ ಬರಲು ವ್ಯವಸ್ಥೆ ಮಾಡಲಾಗಿದೆ.
ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಯನ್ನು ಗುರುತಿಸಿ ಎಲ್ಲಾರೊಂದಿಗೂ ಬೆರೆಯುವ ಕೆಲಸ ನಿರ್ವಹಿಸಿದ ಶಿಕ್ಷಕ ತಂಡವನ್ನು ಪ್ರಶಂಸಿದರು. ದಿವ್ಯಾಂಗ ವಿದ್ಯಾರ್ಥಿ ಕಿರಣ್‌ಗೆ ಉಡುಗೊರೆ ನೀಡಿದರು.
ನಂತರ ಮಾತನಾಡಿದ ಇವರು, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಉತ್ತೇಜನ ನೀಡಿದೆ, ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದರು. ಶತಮಾನೋತ್ಸವ ಹೊಸ್ತಿಲಲ್ಲಿರುವ ಶಾಲೆಗೆ ಹತ್ತು ಲಕ್ಷ ಅನುದಾನ ಬಿಡುಗಡೆ ಗೊಳಿಸಿರುವುದಾಗಿ ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ದಿವ್ಯಾಂಗ ವಿದ್ಯಾರ್ಥಿ ಕಿರಣ ವಾರದ ಎರಡು ದಿನ ಶಾಲೆಗೆ ಆಗಮಿಸಲು ಬೇಕಾದ ವಾಹನದ ವ್ಯವಸ್ಥೆಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ, ಕ್ಷೇತ್ರ ಶಿಕ್ಷಣದಿಕಾರಿ ಶ್ರೀ ಶೈಲ ಬಿಳಗಿ, ಎಸ್.ಡಿ.ಎಂ.ಸಿ.ಯ ಕುಮಾರ್, ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್, ಬಿ.ಆರ್.ಪಿ. ಗೀತಾಂಜಲಿ, ಸಮನ್ವಯ ಸಂಪನ್ಮೂಲದ ವನಜಾಕ್ಷಿ ಇಲಾಖೆಯ ಪ್ರಮುಖರಾದ ಕೇಶವ್, ಫಾತಿಮ, ವಿದ್ಯಾರ್ಥಿ ಸಂಘದ ಸದಸ್ಯರಾದ ಪ್ರಮೋದ್ ಕಾಮತ್, ಕಾಡ್ಯಮಾಡ ನವೀನ್, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಬಿ.ಆರ್. ಸತೀಶ್, ಸ್ವಾಗತಿಸಿ, ಎಂ.ಸಿ. ಇಂದಿರ ನಿರೂಪಿಸಿ, ದೈಹಿಕ ಶಿಕ್ಷಕ ರಮಾನಂದ್ ವಂದಿಸಿದರು.
- ಹೆಚ್.ಕೆ. ಜಗದೀಶ್