ಮಡಿಕೇರಿ, ಡಿ. ೩೧: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೧೦೦ನೇ ವರ್ಷದ ಸಂಭ್ರಮದಲ್ಲಿದ್ದು, ತಾ. ೩ ರಂದು ಸಂಘದ ಶತಮಾನೋತ್ಸವ ಭವನ ಉದ್ಘಾಟನೆ ಹಾಗೂ ಶತಮಾನೋತ್ಸವ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಎಸ್. ಶ್ಯಾಂಚAದ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ಸಹಕಾರ ಸಂಘದ ಆವರಣದಲ್ಲಿರುವ ಸುಮಾರು ರೂ. ೪೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶತಮಾನೋತ್ಸವ ಭವನವನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟನೆ ಮಾಡಲಿದ್ದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕೊಡಗು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ ೧೧ ಗಂಟೆಗೆ ಪಾಲಿಬೆಟ್ಟದ ಅನುಗ್ರಹ ಸೇವಾ ಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮುಖ್ಯದ್ವಾರ ಉದ್ಘಾಟಿಸಲಿದ್ದು, ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾಮಾಣಿಕ ದುಡಿಮೆಯ ಫಲವಾಗಿಯೇ ಕೊಡಗು ಜಿಲ್ಲೆಯ ಪ್ರಮುಖ ಸಹಕಾರ ಸಂಘಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದರು.
ಸAಘವು ಪ್ರಸ್ತುತ ರೂ. ೩೪ ಕೋಟಿ ೯೦ ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, ರೂ. ೧೨೪ ಕೋಟಿ ೩೧ ಲಕ್ಷ ವ್ಯವಹಾರ ನಡೆಸಿ ರೂ. ೧.೨೦ ಕೋಟಿ ಪಾಲು ಬಂಡವಾಳ, ಕ್ಷೇಮನಿಧಿ - ರೂ. ೨ ಕೋಟಿ ೫೪ ಲಕ್ಷ, ಇತರ ನಿಧಿ ರೂ. ೧ ಕೋಟಿ ೫೫ ಲಕ್ಷ ಹೊಂದಿದೆ.
೧೦೦ನೇ ವರ್ಷದಲ್ಲಿ ಈ ಸಂಘದಲ್ಲಿ ಒಟ್ಟು ರೂ. ೨೨ ಕೋಟಿ ೧೬ ಲಕ್ಷ ಠೇವಣಿ ಇದ್ದು, ಕೆ.ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಸಂಘದ ಪಾಲು ಹಣ ರೂ. ೨೯ ಲಕ್ಷದ ೩೦ ಸಾವಿರ, ಕ್ಷೇಮ ನಿಧಿ ರೂ. ೨ ಕೋಟಿ ೬೮ ಲಕ್ಷ. ಇತರ ಸಂಘ ಸಂಸ್ಥೆಯಲ್ಲಿ ರೂ. ೨ ಕೋಟಿ ೨೭ ಲಕ್ಷ ತೊಡಗಿಸಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ನಿAದ ರೂ. ೬ ಕೋಟಿ ೧೮ ಲಕ್ಷ ಫಸಲು ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿರುವುದು ಹೆಗ್ಗಳಿಕೆಯಾಗಿದೆ ಎಂದರು.
ಸAಘದಲ್ಲಿ ಕೃಷಿ ಮತ್ತು ಕೃಷಿಯೇತರ ಸಾಲವಾಗಿ ರೂ. ೨೬ ಕೋಟಿ ೫೧ ಲಕ್ಷ ನೀಡಲಾಗಿದ್ದು, ಸಾವಿರಾರು ಮಂದಿ ಸಂಘದ ಆರ್ಥಿಕ ನೆರವು ಪಡೆದು ನೆಮ್ಮದಿಯ ಜೀವನ ನಡೆಸಲು ಕಾರಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೊಲ್ಲಿರ ಜಿ. ಧರ್ಮಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಟ್ಟಂಡ ಎ. ಶಶಿಕಲ, ನಿರ್ದೇಶಕರಾದ ಕುಟ್ಟಂಡ ಅಜಿತ್ ಕರುಂಬಯ್ಯ, ವಿ.ವಿ. ಡಾಲು, ಹೆಚ್.ಕೆ. ದಿನೇಶ್ ಉಪಸ್ಥಿತರಿದ್ದರು.