ಮಡಿಕೇರಿ, ಡಿ. ೩೧: ಕೊಡವರನ್ನು ಇತರೆ ಹಿಂದುಳಿದ ವರ್ಗಗಳ ೩ಎ ಅಡಿಯಲ್ಲಿ ಕೇಂದ್ರದ ಪಟ್ಟಿಯಿಂದ ಕೈ ಬಿಡಲಾಗಿದ್ದು ಪುನರ್ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸಂಸದ ಪ್ರತಾಪ್ ಸಿಂಹರೊAದಿಗೆ ಮಹತ್ತರ ಚರ್ಚೆ ನಡೆಸಿದರು.

ನಿನ್ನೆ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸಂಸದರನ್ನು ಭೇಟಿ ಮಾಡಿದ ಮಂಜು ಚಿಣ್ಣಪ್ಪ ಈ ಕುರಿತಂತೆ ಸುದೀರ್ಘ ಚರ್ಚೆ ನಡೆಸುವುದರ ಮೂಲಕ ಬೇಡಿಕೆ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿದರು.

ರಾಜ್ಯದಲ್ಲಿ ಪ್ರಸ್ತುತ ಕೊಡವರನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ೩ಎ ಅಡಿಯಲ್ಲಿ ವರ್ಗೀಕರಿಸಿ, ಆ ಮೂಲಕ ಶೇಕಡಾ ೪ರಷ್ಟು ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿಯನ್ನು ನೀಡಲಾಗಿದೆ. ಹಾಗೆಯೇ ಕೊಡವರು ಜಾತಿ ದೃಢೀಕರಣ ಪತ್ರ ಹೊಂದುವಾಗಲೂ ಇದು ನಮೂದಿಸಲಾಗುತ್ತಿದೆ. ರಾಜ್ಯದಲ್ಲಿ ಒಕ್ಕಲಿಗರು ಹಾಗೂ ೨೦ ಉಪ ಪಂಗಡಗಳು, ಬಲಿಜರು ಹಾಗೂ ೧೩ಉಪ ಪಂಗಡಗಳೊAದಿಗೆ ಕೊಡವರನ್ನು ಈ ಒಬಿಸಿ ೩ಎ ಅಡಿಯಲ್ಲಿ ವರ್ಗೀಕರಣ ಮಾಡಲಾಗಿದ್ದು ಶೇಕಡಾ ೪ ರಷ್ಟು ಮೀಸಲಾತಿಯನ್ನು ನಿಗದಿ ಪಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಕೊಡವರನ್ನು ಹೊರಗಿಟ್ಟು ಅನ್ಯಾಯ ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಮಟ್ಟದ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಲ್ಲಿ ಕೊಡವರಿಗೆ ಬಹು ದೊಡ್ಡ ಅನ್ಯಾಯ ವಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಲು ಮುಂದಾಗುವAತೆ ಸಂಸದರನ್ನು ಒತ್ತಾಯಿಸಿದರು.

ಈ ಕುರಿತಂತೆ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ತಮ್ಮ ಬೇಡಿಕೆಯು ನ್ಯಾಯಯುತವಾಗಿದೆ. ಕುಂಚೆಟಿಗ ಸಮುದಾಯದವರ ಸಮಸ್ಯೆಯೂ ಇದೇ ಆಗಿದ್ದು, ಇದೀಗ ಕೊಡವರ ಬೇಡಿಕೆಯನ್ನೂ ಆದ್ಯತೆಯೊಂದಿಗೆ ಪರಿಗಣಿಸಿ ಸಂಬAಧಪಟ್ಟವರೊAದಿಗೆ ವ್ಯವಹರಿಸುವುದಾಗಿ ತಿಳಿಸಿದರು.

ಹಾಗೆಯೇ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳು ಬೇಡಿಕೆಯನ್ನು ಪರಿಗಣಿಸಿ, ಮುಂದಿನ ಬಜೆಟ್‌ನಲ್ಲಿ ಘೋಷಿಸುವುದಾಗಿ ಹೇಳಿರುವುದು ಸಂತಸ ತಂದಿದೆ. ಕೊಡವರ ಈ ಮಹತ್ತರವಾದ ಬೇಡಿಕೆಯನ್ನು ನಮ್ಮ ಸರ್ಕಾರ ಸದ್ಯದಲ್ಲೇ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೇಟಿಯ ಸಂದರ್ಭದಲ್ಲಿ ಯುಕೊ ಸದಸ್ಯ ಹಾಗೂ ವಕೀಲ ನೆಲ್ಲಮಕ್ಕಡ ಜಫ್ರಿ ಮಾದಯ್ಯ ಉಪಸ್ಥಿತರಿದ್ದರು.