ಮಡಿಕೇರಿ, ಡಿ.೩೧ : ಕೊಡಗು ರಕ್ಷಣಾ ವೇದಿಕೆಯ ಭಾಗಮಂಡಲ ಘಟಕದ ಅಧ್ಯಕ್ಷರಾಗಿ ಶಿವಶಂಕರ ವೈದ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಬರೀಶ ಕುದುಕುಳಿ, ಕಾರ್ಯದರ್ಶಿಯಾಗಿ ಶ್ಯಾಮ್ ಭಟ್, ಗೌರವ ಕಾರ್ಯದರ್ಶಿಯಾಗಿ ರಾಜೇಶ್ ರೈ, ಖಜಾಂಚಿಯಾಗಿ ಸುದೀಪ, ನಿರ್ದೇಶಕರುಗಳಾಗಿ ಆದೇಶ್, ನವೀನ, ಕೀರ್ತನ್ (ಮುದ್ದು), ರೋಶನ್ ಕುದುಪಜೆ, ಗೌರೀಶ್ ರೈ, ಶ್ರೀನಾಥ್ ನಾಯಕ್, ಪುನೀತ್ ನೇಮಕಗೊಂಡಿದ್ದಾರೆ.

ಸದಸ್ಯರುಗಳಾಗಿ ಅರವಿಂದ ಪ್ರಭು, ಪುರುಷೋತ್ತಮ (ಅನಂತ), ಹೆಚ್.ವಿ.ಗಿರೀಶ್, ಮನೋಜ್ (ಮನು), ಆಕಾಶ್ ಪಾಣತ್ತಲೆ, ಕಿಶನ್ ಅಣ್ಣಯ್ಯ, ರಂಜನ್ (ರಂಜು), ಗಿರೀಶ್ ಭೂತನಕಾಡು (ಅಪ್ಪಿ), ರವಿಶಂಕರ (ಮುನ್ನ), ರಘು ಭೂತನಕಾಡು, ಅಖಿಲೇಶ್, ದೇವಿಪ್ರಸಾದ್ (ಪಚ್ಚು), ಜೀವನ್, ಮುರುಳಿ ನಿಡ್ಯಮಲೆ, ಲೋಕೇಶ್ ನಿಡ್ಯಮಲೆ ಆಯ್ಕೆಯಾಗಿದ್ದಾರೆ.