ಮಡಿಕೇರಿ, ಡಿ. ೩೧: ನಗರದ ಜಿಲ್ಲಾ ಯೂನಿಯನ್ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂರ‍್ಸ್ ಸಮಿತಿ ಸಭೆ ನಡೆಯಿತು.
ಕರ್ನಾಟಕ ಬೆಳೆಗಾರರ ಒಕ್ಕೂಟವು ಕಾಫಿ ಬೆಳೆಗಾರರಿಗೆ ಬ್ಯಾಂಕುಗಳಲ್ಲಿರುವ ಸಮಸ್ಯೆ ಕುರಿತು ಕೇಂದ್ರದ ಹಣಕಾಸು ಮತ್ತು ವಾಣಿಜ್ಯ ಮಂತ್ರಿಗಳನ್ನು ಭೇಟಿಮಾಡಿ, ಮನವಿ ಕೊಟ್ಟ ಮೇರೆಗೆ ಕಾಫಿ ಮಂಡಳಿಯಲ್ಲಿ ಸ್ಟೇಟ್ ಲೆವೆಲ್ ಬ್ಯಾಂರ‍್ಸ್ ಕಮಿಟಿ ಸಭೆಯನ್ನು ನಡೆಸಿ, ಅಲ್ಲಿಯ ತೀರ್ಮಾನದಂತೆ ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂರ‍್ಸ್ ಕಮಿಟಿ ಸಭೆಯನ್ನು ನಡೆಸಬೇಕೆಂಬ ನಿರ್ದೇಶಿಸಿದ ಹಿನ್ನೆಲೆ ಈ ಸಭೆ ನಡೆಸಲಾಯಿತು.
ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್ ಭಾಗವಹಿಸಿ ಮಾತನಾಡಿ, ಬೆಳೆಗಾರಿಗೆ ಅತಿವೃಷ್ಟಿಯ ಸಮಯದಲ್ಲಿ ಬ್ಯಾಂಕುಗಳಿAದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗ ಸೂಚಿಯಂತೆ ದೊರೆಯಬೇಕಾಗಿರುವ ಸವಲತ್ತುಗಳ ಬಗ್ಗೆ ಮನವಿ ಮಾಡಿದರು.