ನಾಪೋಕ್ಲು, ಡಿ. ೩೧: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರೀರ ಕಪ್ ಹಾಕಿ ಮತ್ತು ಫುಟ್ಬಾಲ್ ಕ್ರೀಡಾಕೂಟದ ಐದನೇಯ ದಿನದ ಹಾಕಿ ಪಂದ್ಯಾಟದಲ್ಲಿ ೧೬ ಕುಟುಂಬ ತಂಡಗಳು ಮುನ್ನಡೆ ಸಾಧಿಸಿದರೆ, ಫುಟ್ಬಾಲ್‌ನಲ್ಲಿ ೭ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಹಾಕಿಯಲ್ಲಿ ಕುಪ್ಪಂಡ (ಕೈಕೇರಿ), ಪುಟ್ಟಿಚಂಡ, ಅಮ್ಮಣಿಚಂಡ, ಮೇರಿಯಂಡ, ಮಾಚಿಮಂಡ, ಕಾಂಡAಡ, ತೀತಿಮಾಡ, ನೆಲ್ಲಮಕ್ಕಡ, ಪರದಂಡ, ಕನ್ನಂಡ, ಬಾರಿಯಂಡ, ಪುದಿಯೊಕ್ಕಡ, ಚೆಪ್ಪುಡಿರ, ಪೆಮ್ಮಂಡ, ಇಟ್ಟಿರ, ಮೇಕೇರಿರ ತಂಡಗಳು ಮುನ್ನಡೆ ಸಾಧಿಸಿದರೆ, ಫುಟ್ಬಾಲ್‌ನಲ್ಲಿ ಚೌರೀರ (ಪೋದ್), ಚೆಕ್ಕೆರ, ಕಾಂಡAಡ, ಕಳ್ಳಿಚಂಡ, ಬಲ್ಲಚಂಡ, ಮಂಡೇಪAಡ, ಅರಮಣಮಾಡ, ಮುರುವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಹಾಕಿ: ಕುಪ್ಪಂಡ ಮತ್ತು ಕುಲ್ಲೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡವು ಕುಲ್ಲೇಟಿರ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿತು. ಪುಟ್ಟಿಚಂಡ ತಂಡವು ಚೆಕ್ಕೆರ ತಂಡವನ್ನು ೨-೧ ಗೋಲಿನ ಅಂತರದಿAದ ಮಣಿಸಿತು. ಅಮ್ಮಣಿಚಂಡ ತಂಡವು ಕಡೇಮಾಡ ತಂಡವನ್ನು ೬-೦ ಗೋಲುಗಳಿಂದ ಸೋಲಿಸಿತು. ಮೇರಿಯಂಡ ತಂಡವು ಕೂತಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಮಾಚಿಮಂಡ ತಂಡವು ಐಚೆಟ್ಟಿರ ತಂಡವನ್ನು ೫-೪ ಗೋಲುಗಳ ಅಂತರದಿAದ ಸೋಲಿಸಿತು. ಕಳ್ಳಿಚಂಡ ಮತ್ತು ಕಾಂಡAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಡAಡ ತಂಡವು ಕಳ್ಳಿಚಂಡ ತಂಡವನ್ನು ೪-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ನೆರವಂಡ ಮತ್ತು ತೀತಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತಿಮಾಡ ತಂಡವು ನೆರವಂಡ ವಿರುದ್ಧ ೩-೦ ಗೋಲುಗಳಿಂದ ಜಯಗಳಿಸಿತು. ನೆಲ್ಲಮಕ್ಕಡ ತಂಡವು ಕಂಗಾAಡ ತಂಡವನ್ನು ೭-೦ ಗೋಲುಗಳಿಂದ ಸೋಲಿಸಿತು. ಪರದಂಡ ತಂಡವು ಕುಂಡ್ಯೋಳAಡ ತಂಡವನ್ನು ೫-೧ ಗೋಲುಗಳ ಅಂತರದಿAದ ಸೋಲಿಸಿತು. ಕನ್ನಂಡ ತಂಡವು ಮಾತಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಬಾರಿಯಂಡ ತಂಡವು ಮಂಡೇಟಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿತು. ಪುದಿಯೊಕ್ಕಡ ತಂಡವು ಮುರುವಂಡ ವಿರುದ್ಧ ೩-೦ ಗೋಲುಗಳ ಅಂತರದಿAದ ಜಯಗಳಿಸಿತು. ಚೆಪ್ಪುಡಿರ ತಂಡವು ಕಂಬೀರAಡ ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿತು. ಪೆಮ್ಮಂಡ ತಂಡವು ೫-೦ ಗೋಲುಗಳಿಂದ ಜಯಗಳಿಸಿತು. ಇಟ್ಟಿರ ತಂಡವು ಮಾರ್ಚಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಮಾಚಂಡ ಮತ್ತು ಮೇಕೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು ಮಾಚಂಡ ತಂಡವನ್ನು ೪-೩ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಫುಟ್ಬಾಲ್: ಚೌರೀರ (ಪೋದ್) ಮತ್ತು ಕೂತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಕೂತಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು. ಚೆಕ್ಕೆರ ತಂಡವು ಟೈಬ್ರೇಕರ್‌ನಲ್ಲಿ ಮುನ್ನಡೆ ಸಾಧಿಸಿತು. ಕಾಂಡAಡ ತಂಡವು ಟೈಬ್ರೇಕರ್‌ನಲ್ಲಿ ಮಾಪಂಗಡ ವಿರುದ್ಧ ಜಯಗಳಿಸಿತು. ಕೋದೇಂಗಡ ಮತ್ತು ಕಳ್ಳಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಟೈಬ್ರೇಕರ್‌ನಲ್ಲಿ ಮುನ್ನಡೆ ಸಾಧಿಸಿತು. ಬಲ್ಲಚಂಡ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಚಂಡ ತಂಡವು ಜಯಗಳಿಸಿತು. ಮಂಡೇಪAಡ ಮತ್ತು ಮುಕ್ಕಾಟಿರ (ದೇವಣಗೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪAಡ ತಂಡವು ಮುನ್ನಡೆ ಸಾಧಿಸಿತು. ಅರಮಣಮಾಡ ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಅರಮಣಮಾಡ ತಂಡವು ಕುಲ್ಲೇಟಿರ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಮುರುವಂಡ ಮತ್ತು ಕೊಲ್ಲಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುರುವಂಡ ತಂಡವು ಕೊಲ್ಲಿರ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸುವದರ ಮೂಲಕ ಮುಂದಿನ ಸುತ್ತು ಪ್ರವೇಶಿಸಿತು.