*ಗೋಣಿಕೊಪ್ಪ, ಡಿ. ೩೧: ಮಡಿಕೆಬೀಡು ಶ್ರೀ ಬಸವೇಶ್ವರ ಯುವಕ ಸಂಘ ವತಿಯಿಂದ ಮೂರು ದಿನಗಳ ಕಾಲ ಗ್ರಾಮ ಪಂಚಾಯಿತಿ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಶಾಂತಕುಮಾರ್ ತಿಳಿಸಿದ್ದಾರೆ.

ನಾಮೇರ ನಂದಾ ಬೋಪಯ್ಯ ಅವರ ಜ್ಞಾಪಕಾರ್ಥವಾಗಿ ತಾ. ೭, ೮ ಮತ್ತು ೯ ರಂದು ಮಾಯಮುಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಿದ್ದು, ಪ್ರಥಮ ರೂ. ೨೨,೨೨೨, ದ್ವಿತೀಯ ರೂ. ೧೧,೧೧೧ ನಗದು ನೀಡಲಾಗುವುದು. ಭಾಗವಹಿಸುವ ತಂಡಗಳು ತಾ. ೫ ರೊಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ೯೮೮೦೮೯೭೧೮೭, ೯೯೦೨೩೧೬೫೩೨, ೯೮೪೫೬೬೫೭೬೪ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.