ಮಡಿಕೇರಿ, ಡಿ. ೩೦ : ಮಡಿಕೇರಿ ನಗರದ ನಾಗರಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಬೇಕೆಂಬುದರ ಜೊತೆಗೆ ವಿವಿಧ ದೃಢೀಕರಣ ಪತ್ರಗಳ ಶೀಘ್ರ ವಿಲೇವಾರಿಗಾಗಿ ನಗರಸಭೆ ‘ಸಕಾಲ’ ವಿಭಾಗವನ್ನು ಜಾರಿಗೆ ತಂದಿದೆ ಎಂದು ನಗರಸಭಾಧ್ಯಕ್ಷೆ ಅನಿತಾಪೂವಯ್ಯ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ನಗರಸಭೆಯಿಂದ ನಗರದ ನಾಗರಿಕರಿಗೆ ಕಾಲ ಕಾಲಕ್ಕೆ ದಾಖಲೆಗಳು ಸಿಗದೆÀ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆಯಲ್ಲಿ ಸಕಾಲವನ್ನು ಆರಂಭಿಸಿದ್ದು, ಇದರಿಂದ ನಗರದ ನಾಗರಿಕರು ‘ಸಕಾಲ'ದ ಪ್ರಯೋಜನವನ್ನು ಪಡೆಯಲಾರಂಭಿಸಿದ್ದಾರೆ. ‘ಸಕಾಲ'ದ ಮೂಲಕ ದಾಖಲಾತಿಗಳನ್ನು ಸರಕಾರ ನಿಗದಿಪಡಿಸಿದ ಕಾಲಾವಧಿಯಲ್ಲಿ ಪಡೆದುಕೊಳ್ಳಬಹುದು. ವಿಳಂಬವಿಲ್ಲದೆ ಪ್ರತಿಯೊಂದು ದೃಢೀಕರಣ ಪತ್ರಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಅನಿತಾ ಪೂವಯ್ಯ ತಿಳಿಸಿದರು.

‘ಸಕಾಲ’ದ ಮೂಲಕ ಜನನ ಮತ್ತು ಮರಣ ದೃಢೀಕರಣ ಪತ್ರ, ಖಾತಾ ವರ್ಗಾವಣೆ, ಜಾಹೀರಾತು ಅನುಮತಿ ಪತ್ರ, ಅನುಮತಿ ನವೀಕರಣ ನಿರಾಪೇಕ್ಷಣಾ ಪತ್ರ (ಎನ್.ಒ.ಸಿ), ಚಿತ್ರೀಕರಣಗಳಿಗೆ ಇನ್ನಿತರ ನಿರಾಪೇಕ್ಷಣಾ ಪತ್ರ ಇನ್ನಿತರ ದಾಖಲಾತಿ ಪತ್ರಗಳನ್ನು ಪಡೆದುಕೊಳ್ಳಬಹುದೆಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ಫಾರಂ ನಂ. ೩ ದಾಖಲೆ ‘ಸಕಾಲ'ದಲ್ಲಿ ಸಿಗುತ್ತಿಲ್ಲ. ಕೆಲವೊಂದು ತಾಂತ್ರಿಕತೆ ವ್ಯತ್ಯಾಸದಿಂದ ಸೇರಿಸಲಾಗುತ್ತಿಲ್ಲ. ಇದು ಸರಕಾರದ ಮಟ್ಟದಲ್ಲಿ ಸೇರ್ಪಡೆಯಾದ ಬಳಿಕ ಮುಂದಿನ ದಿನಗಳಲ್ಲಿ ‘ಸಕಾಲ'ದಲ್ಲಿ ಫಾರಂ ನಂ. ೩, ದಾಖಲೆ ಸಿಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಟ್ರಾö್ಯಕ್ಟರ್ - ಜೆಸಿಬಿ ಖರೀದಿ

ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈಗಾಗಲೇ ನಗರಸಭೆಯಲ್ಲಿ ೧೩ ಟ್ರಾö್ಯಕ್ಟರ್‌ಗಳು ಇದ್ದರೂ ಕೆಲವು ಟ್ರಾö್ಯಕ್ಟರ್‌ಗಳು ಆಗಾಗ ಕೆಟ್ಟು ಕೆಲಸಕ್ಕೆ ಬಳಸಲಾಗದ್ದರಿಂದ ಸುಸೂತ್ರವಾಗಿ ಕಸ ವಿಲೇವಾರಿಗಾಗಿ ಎರಡು ಹೊಸ ಟ್ರಾö್ಯಕ್ಟರ್‌ಗಳು, ಒಂದು ಜೆಸಿಬಿ ಖರೀದಿಸಲು ನಿರ್ಧರಿಸಿದ್ದು, ಮುಂದೆ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ಕ್ರಮ ವಹಿಸಲಿದ್ದೇವೆ ಎಂದರು.

ಐದು ಆಟೋ, ಟಿಪ್ಪರ್‌ಗಳು ಇವೆ. ಸ್ವಚ್ಛತೆಗಾಗಿ ೩೯ ಮಂದಿ ಪೌರಕಾರ್ಮಿಕರು ಇದ್ದು, ತಮ್ಮ ದೈನಂದಿನ ಸ್ವಚ್ಛತಾ

(ಮೊದಲ ಪುಟದಿಂದ) ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂದು ಅನಿತಾಪೂವಯ್ಯ ತಿಳಿಸಿದ್ದಾರೆ.

ಸಿಸಿ ಟಿವಿಗಳ ಅಳವಡಿಕೆ

ನಗರದೊಳಗೆÀ ಬಹುತೇಕ ಮಂದಿ ಕಸ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ನಗರದ ರಸ್ತೆಗಳ ಬದಿಯಲ್ಲಿ ಎಸೆದು ಮಲೀನಗೊಳಸುತ್ತಿರುವುದು ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ನಗರದೊಳಗೆ ಒಟ್ಟು ೨೦ ಸಿಸಿ ಟಿವಿಗಳನ್ನು ಅಳವಡಿಸಲು ಉದ್ದೇಶಿಸಲಾಗಿ ಈಗಾಗಲೇ ಕೆಲವು ಗುಪ್ತ ಸ್ಥಳಗಳಲ್ಲಿ ೧೬ ಕಡೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಬೇಕಾಬಿಟ್ಟಿಯಾಗಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸಿಎಂಸಿ ೧೯೬೪ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ನಗರದ ವಿವಿಧೆಡೆಗಳಲ್ಲಿ ಕಸ ಹಾಕುವವರನ್ನು ಪತ್ತೆ ಹಚ್ಚಿದ್ದು ಅವರಿಗೆ ದಂಡ ವಿಧಿಸಿದರೂ ಪಾವತಿಸಲು ಹಿಂದೇಟು ಹಾಕುತ್ತಿದ್ದು ಅಂತಹವರ ವಿರುದ್ಧ ಸಿಎಂಸಿ ೧೯೬೪ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ಮನೆ, ಮನೆಗಳಿಂದ ಒಣ ಮತ್ತು ಹಸಿ ಕಸಗಳನ್ನು ಸಂಗ್ರಹಿಸುವ ಕೆಲಸ ಮುಂದುವರಿದಿದೆ. ಕಸ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ನಿರ್ಮಲನಗರ ಯೋಜನೆಯಲ್ಲಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ. ಈಗಾಗಲೇ ಈ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶ ಹೊಂದಲಾಗಿದೆ ಎಂದ ಅವರು, ಬಸ್ ನಿಲ್ದಾಣಗಳು ಸೇರಿದಂತೆ ನಗರದ ವಿವಿಧ ಶಾಲಾ ಕಾಲೇಜುಗಳ ಬಳಿ, ಪ್ರವಾಸಿ ತಾಣಗಳ ಬಳಿ ಮತ್ತು ನಗರದಲ್ಲಿ ಅಗತ್ಯವಿದ್ದೆಡೆಗಳಲ್ಲಿ ‘ಡಸ್ಟ್ಬಿನ್’ ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಿರ್ಮಲನಗರ ಯೋಜನೆಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣದ ಶೌಚಾಲಯಗಳನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ. ಇದರೊಂದಿಗೆ ಈ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಿ ಅಭಿವೃದ್ಧಿಪಡಿಸಲು, ನಿಲ್ದಾಣದ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದರು.

ರಸ್ತೆ ಕಾಮಗಾರಿ - ಸಿಎಂ ಬಳಿ ನಿಯೋಗ

ಮಡಿಕೇರಿ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸುವ ಉದ್ದೇಶದಿಂದ ಎಲ್ಲ ರಸ್ತೆಗಳನ್ನು ವಿಶೇಷ ಅನುದಾನದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ನಗರದ ಎಲ್ಲ ರಸ್ತೆಗಳು, ಹೊಂಡ-ಗುAಡಿಗಳಾಗಿ ಸಂಚರಿಸಲು ಅಯೋಗ್ಯ ಸ್ಥಿತಿಯಲ್ಲಿರುವುದನ್ನು ಗಮನಿಸಿರುವುದಾಗಿ ತಿಳಿಸಿದ ಅವರು, ಮುಂದೆ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಟೆಂಡರ್ ಆಹ್ವಾನಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲ ಸಂಪರ್ಕ ರಸ್ತೆಗಳನ್ನು, ಬೀದಿಗಳ ಸಣ್ಣಪುಟ್ಟ ರಸ್ತೆಗಳನ್ನು ಮಳೆಗಾಲದ ಮುನ್ನವೇ ಮರುಡಾಮರೀಕರಣಗೊಳಿಸಿ ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಇದಕ್ಕಾಗಿ ಸುಮಾರು ೫೨ ಕೋಟಿ ರೂ. ವಿಶೇಷ ಅನುದಾನವನ್ನು ಕೋರಲು ಸದ್ಯದಲ್ಲೇ ಜಿಲ್ಲೆಯ ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್ತು ಸದಸ್ಯರುಗಳ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಬಳಿ ಸದಸ್ಯರ ನಿಯೋಗ ತೆರಳುವುದಾಗಿ ಅವರು ಮಾಹಿತಿಯಿತ್ತರು.

ನಾಗರಿಕರಲ್ಲಿ ಮನವಿ

ನಗರದ ನಾಗರಿಕರು ಮನೆ ಮತ್ತು ನೀರಿನ ಕಂದಾಯ ಸೇರಿದಂತೆ ವಿವಿಧ ಕಂದಾಯಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕೆಂದು ಮನವಿ ಮಾಡಿದ ಅವರು, ಈಗಾಗಲೇ ಮನೆ ಕಂದಾಯಗಳನ್ನು ನಾಗರಿಕರು ಪಾವತಿಸಿದ್ದಾರೆ. ಆದರೆ, ನೀರಿನ ಕಂದಾಯವನ್ನು ಮಾತ್ರ ಬಹುತೇಕ ಮಂದಿ ಪಾವತಿಸದ್ದರಿಂದ ಸಮಸ್ಯೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನೀರಿನ ಕಂದಾಯವನ್ನು ನಿಗದಿತ ಸಮಯಕ್ಕೆ ಪಾವತಿಸಿ ಸಹಕರಿಸುವಂತೆ ಕೋರಿದರು.

ಅನಧಿಕೃತ ಮಳಿಗೆಗಳು - ಕ್ರಮ

ನಗರದ ವಿವಿಧೆಡೆಗಳಲ್ಲಿ ಅನಧಿಕೃತ ಅಂಗಡಿ- ಮಳಿಗೆಗಳು ತಲೆ ಎತ್ತಿದ್ದು, ಇವರೆಲ್ಲರೂ ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಅಂಗಡಿ- ಮಳಿಗೆಗಳನ್ನು ನಗರಸಭೆಯಿಂದ ಮುಟ್ಟುಗೋಲು ಹಾಕಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ನಗರದ ವಿವಿಧ ಅಂಗಡಿ-ಮಳಿಗೆಗಳಲ್ಲಿ ನಿಷೇಧ ಹೇರಿದ್ದರೂ ದಂಡ ವಿಧಿಸಿದರೂ ವ್ಯಾಪಕವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಮತ್ತೆ ನಗರಸಭೆಯಿಂದ ಅಭಿಯಾನ ಕೈಗೊಂಡು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶೀಘ್ರ ವಿಲೇವಾರಿಗೆ ಸೂಚನೆ

ನಗರದ ನಾಗರಿಕರು ತಮ್ಮ ತಮ್ಮ ಕೆಲಸ- ಕಾರ್ಯಗಳ ಕುರಿತು ನಗರಸಭೆಗೆ ನೀಡುವ ಅಗತ್ಯ ದಾಖಲೆ ಮತ್ತು ಅರ್ಜಿಗಳ ಕಡತಗಳನ್ನು ತಮ್ಮ ಟೇಬಲ್‌ಗಳ ಮೇಲಿಟ್ಟು ಕಾಯಿಸುವ ಪರಿಪಾಠವನ್ನು ಮುಂದುವರಿಸದೆ ಆಯಾ ದಿನವೇ ವಿಲೇವಾರಿ ಮಾಡುವ ಮೂಲಕ ನಗರಸಭೆಗೆ, ಆಡಳಿತ ಮಂಡಳಿಗೆ ಮತ್ತು ನಿಮ್ಮಗಳಿಗೆ ಕೆಟ್ಟ ಹೆಸರು ಬರದಂತೆ ಕೆಲಸ ನಿರ್ವಹಿಸಲು ಅಧಿಕಾರಿ, ಸಿಬ್ಬಂದಿಗೆ ಈಗಾಗಲೇ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ ಎಂದು ಅನಿತ ಪೂವಯ್ಯ ಸ್ಪಷ್ಟಪಡಿಸಿದ್ದಾರೆ.

ನಾನು ನಗರಸಭಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮವಾಗಿ ಎಲ್ಲಾ ಅಧಿಕಾರಿ-ಸಿಬ್ಬಂದಿಗಳು ಆಯಾ ದಿನದ ತಮ್ಮ ಕೆಲಸಗಳ ಅರ್ಜಿ ಮತ್ತು ದಾಖಲೆ ಕುರಿತು ಏನಾಗಿದೆ ಎಂಬ ಮಾಹಿತಿಗಳನ್ನು ಲೆಡ್ಜರ್‌ಗಳಲ್ಲಿ ನಮೂದಿಸಿ ನಿರ್ವಹಿಸುವ ಜವಾಬ್ದಾರಿ ನೀಡಿದ್ದು, ಇದರಿಂದ ಯಾರ ಕೆಲಸಗಳು ವಿಳಂಬವಾಗಲು ಸಾಧ್ಯವಾಗದು ಎಂದು ತಿಳಿಸಿದರು.

ಇದರೊಂದಿಗೆ ತಮ್ಮ ಕೆಲಸಗಳಿಗಾಗಿ ನಗರಸಭೆಯ ‘ಟಪಾಲು’ ವಿಭಾಗಕ್ಕೆ ನೀಡುವ ಸಾರ್ವಜನಿಕರ ದಾಖಲೆ ಪತ್ರಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಿ ಅಗತ್ಯ ಎಲ್ಲಾ ದಾಖಲೆ ಪತ್ರಗಳು, ಇದ್ದರೆ ಮಾತ್ರ ಸ್ವೀಕರಿಸಬೇಕು ಮತ್ತು ಅಗತ್ಯ ದಾಖಲೆಗಳಿಲ್ಲದಿದ್ದಲ್ಲ ಆ ಕೂಡಲೇ ಹಿಂತಿರುಗಿಸಿ ಮನವರಿಕೆ ಮಾಡಿಕೊಡುವಂತೆಯೂ ಸೂಚಿಸಿದ್ದೇನೆ ಎಂದರು.

ಸಾಕ್ಷö್ಯ ಒದಗಿದರೆ ಕ್ರಮ

ನಗರಸಭೆಯ ಪೌರಾಯುಕ್ತರ ವಿರುದ್ಧ ವ್ಯಾಪಕವಾಗಿ ದೂರು ಕೇಳಿ ಬರುತ್ತಿದ್ದು, ಅವರ ವಿರುದ್ಧದ ದೂರಿಗೆ ಸಂಬAಧಿಸಿದAತೆ ಅಗತ್ಯ ಸಾಕ್ಷಾö್ಯಧಾರವನ್ನು ಒದಗಿಸಿದರೆ ಕಾನೂನು ಕ್ರಮ ಜರುಗಿಸಬಹುದು ಎಂದ ಅವರು, ಅಗತ್ಯ ಬಿದ್ದಲ್ಲಿ ಸರಕಾರದ ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಗಳಿವೆ. ಯಾರಿಗೆ ಅನ್ಯಾಯವಾಗಿದೆಯೋ ಅವರು ಸೂಕ್ತ ದಾಖಲೆಗಳ ಸಹಿತ ದೂರು ನೀಡಬಹುದು ಎಂದು ಹೇಳಿದರು.

- ಶ್ರೀಧರ್ ಹೂವಲ್ಲಿ