ಮಡಿಕೇರಿ, ಡಿ. ೩೦: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಹಯೋಗದಿಂದ ಶಿಕ್ಷಣ ಇಲಾಖೆ ವತಿಯಿಂದ ಆರಂಭಗೊAಡಿರುವ ನೂತನ ಯೋಜನೆಯಾದ ‘ಪ್ರಧಾನಮಂತ್ರಿ ಯುವ ಮೆಂಟರ್‌ಶಿಪ್ ಸ್ಕೀಮ್’ ಅಡಿಯಲ್ಲಿ ಯುವ ಲೇಖಕರ ‘ವಿದ್ಯಾರ್ಥಿವೇತನ ಹಾಗೂ ಮಾರ್ಗದರ್ಶನ’ ಕಾರ್ಯಕ್ರಮಕ್ಕೆ ಜಿಲ್ಲೆಯ ಮೇವಡ ಆಲಿಯಾ ಚೋಂದಮ್ಮ ಅವರು ಆಯ್ಕೆಯಾಗಿದ್ದಾರೆ.
ಯೋಜನೆಯ ಫಲಾನುಭವಿಗಳ ಆನ್‌ಲೈನ್ ಆಯ್ಕೆ ಪ್ರಕ್ರಿಯೆಯಲ್ಲಿ ದೇಶದಾದ್ಯಂತ ವಿವಿಧ ಭಾಷೆಗಳಲ್ಲಿ ಬರಹಗಾರರು ‘ರಾಷ್ಟಿçÃಯ ಚಳವಳಿ’ ಕುರಿತು ಬರಹಗಳನ್ನು ರಚಿಸಿದರು. ದೇಶದಾದ್ಯಂತ ಒಟ್ಟು ೭೫ ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಆಂಗ್ಲ ಭಾಷೆಯಲ್ಲಿ ರಚಿಸಿದ ಬರಹಕ್ಕಾಗಿ ಆಲಿಯಾ ಅವರು ಆಯ್ಕೆಯಾಗಿದ್ದು, ೭ನೇ ಸ್ಥಾನ ಪಡೆದಿದ್ದಾರೆ. ಗೋಣಿಕೊಪ್ಪ ಕಾಲ್ಸ್ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಆಲಿಯಾ, ಮೇವಡ ಅಯ್ಯಣ್ಣ ಹಾಗೂ ಮೀನಾಕ್ಷಿ ದಂಪತಿಯ ಪುತ್ರಿ.
ಸ್ವಾತಂತ್ರö್ಯ ಅಮೃತ ಮಹೋತ್ಸವ ಪ್ರಯುಕ್ತ ಹಲವಷ್ಟು ಯೋಜನೆಗಳನ್ನು ಘೋಷಿಸಿದ ಕೇಂದ್ರ ಸರಕಾರ ಯುವ ಲೇಖಕರ ಪ್ರೋತ್ಸಾಹಕ್ಕೆಂದು ಈ ಯೋಜನೆ ರೂಪಿಸಿದ್ದು, ಉತ್ಸಾಹಿ ಯುವ ಬರಹಗಾರರನ್ನು ಉತ್ತೇಜಿಸುವ ಸಲುವಾಗಿ ಆಯ್ಕೆಯಾದ ಬರಹಗಾರರು ೬ ತಿಂಗಳುಗಳ ಕಾಲ ನ್ಯಾಷನಲ್ ಬುಕ್ ಟ್ರಸ್ಟ್ನ ಪ್ರಸಿದ್ಧ ಬರಹಗಾರರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ನಂತರ ಸ್ವಂತ ಪುಸ್ತಕ ಪ್ರಕಾಶನಕ್ಕೂ ಸಹಾಯ ದೊರಕಲಿದ್ದು, ಆಯ್ಕೆಯಾಗಿರುವ ಬರಹಗಾರರಿಗೆ ೬ ತಿಂಗಳುಗಳ ಕಾಲ ಪ್ರತಿ ತಿಂಗಳಿಗೆ ರೂ.೫೦,೦೦೦ ಪ್ರೋತ್ಸಾಹಧನ ವಿದ್ಯಾರ್ಥಿವೇತನ ಮೂಲಕ ಲಭಿಸಲಿದೆ.