ಶ್ರೀಮಂಗಲ, ಡಿ. ೩೦: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೧೦ ತಿಂಗಳಿನಿAದ ಒಂಟಿ ಮನೆಗಳನ್ನು ಗುರಿಯಾಗಿಸಿ ದರೋಡೆ ನಡೆಯುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಮೂರು ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ ಕೃತ್ಯ ಶ್ರೀಮಂಗಲ, ಡಿ. ೩೦: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೧೦ ತಿಂಗಳಿನಿAದ ಒಂಟಿ ಮನೆಗಳನ್ನು ಗುರಿಯಾಗಿಸಿ ದರೋಡೆ ನಡೆಯುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಮೂರು ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ ಕೃತ್ಯ ಹಾಗೂ ವಯೋವೃದ್ಧರಿರುವ ಮನೆಯ ವಾಸಿಗಳು ಹೆಚ್ಚಿನ ಆತಂಕ ಪಡುವಂತಾಗಿದೆ.

ಕಳೆದ ಫೆಬ್ರವರಿ ೧೭ರಂದು ಶ್ರೀಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ವಯೋವೃದ್ಧ ಬೊಳ್ಳೇರ ತಿಮ್ಮಯ್ಯ ಅವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿರುವುದನ್ನು ಅರಿತು ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ತೋರಿಸಿ ನಂತರ ಚಾಕನ್ನು ತಿಮ್ಮಯ್ಯ ಅವರ ಕೊರಳಿನ ಹಿಂಭಾಗಕ್ಕೆ ಇಟ್ಟು ಮನೆಯಿಡಿ ತಡಕಾಡಿ ಚಿನ್ನಾಭರಣವನ್ನು ದೋಚಿದ್ದ.

ಕಳೆದ ತಿಂಗಳು ನಾಲ್ಕೇರಿ ಸಮೀಪ ಕೋತೂರು ಗ್ರಾಮದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಒಕ್ಕಲಿಗರ ಗಂಗಮ್ಮ (೬೦) ಅವರ ಮನೆಗೆ ಹಾಡಹಗಲೇ ನುಗ್ಗಿದ ದುಷ್ಕರ್ಮಿ ಚಾಕು ತೋರಿಸಿ ಬೆದರಿಸಿದಲ್ಲದೇ ಮನೆಯಿಡಿ ತಡಕಾಡಿ ಏನೂ ಸಿಗದಿದ್ದಾಗ ಮಹಿಳೆಯ ಕಿವಿಯಲ್ಲಿದ್ದ

(ಮೊದಲ ಪುಟದಿಂದ) ವಾಲೆಯನ್ನು ಕೊಡುವಂತೆ ಬೆದರಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಚಾಕು ತೋರಿಸಿ ಎರಡು ಕಿವಿಯಿಂದ ಸುಮಾರು ೬ ಗ್ರಾಂ ನಷ್ಟಿದ್ದ ಚಿನ್ನದ ವಾಲೆಯನ್ನು ಬಲವಂತವಾಗಿ ಕಿತ್ತಿದ್ದಾನೆ. ಈ ಸಂದರ್ಭ ಮಹಿಳೆಯ ಎರಡು ಕಿವಿಗಳು ಹರಿದು ಹೋಗಿದ್ದು, ಗಾಯವಾಗಿದೆ. ಈ ಬಗ್ಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರನೇ ಪ್ರಕರಣ ನಾಲ್ಕೇರಿ ಗ್ರಾಮದಲ್ಲಿ ತಾ. ೨೮ರಂದು ಮಧ್ಯಾಹ್ನ ೨ ಗಂಟೆಯ ವೇಳೆಗೆ ನಡೆದಿದ್ದು, ಕಾಫಿ ಬೆಳೆಗಾರ ೭೦ ವರ್ಷದ ಸುಳ್ಳಿಮಾಡ ಗೋಪಾಲ್‌ತಿಮ್ಮಯ್ಯ ಅವರ ಮನೆಗೆ ನುಗ್ಗಿ ದುಷ್ಕರ್ಮಿಯ ಉದ್ದೇಶಕ್ಕೆ ಪ್ರತಿರೋಧ ಉಂಟಾದಾಗ ಗೋಪಾಲ್ ತಿಮ್ಮಯ್ಯ ಅವರ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ಅವರ ಎಡಗೈಗೆ ಗಂಭೀರವಾದ ಗಾಯವಾಗಿದೆ.

ಮೇಲಿನ ಮೂರು ಪ್ರಕರಣಗಳು ಹಾಡಹಗಲೇ ನಡೆದಿದ್ದು, ಮುಸುಕುಧಾರಿ ಒಂದೇ ರೀತಿಯಲ್ಲಿ ಚಾಕು ತೋರಿಸಿ ಬೆದರಿಸಿರುವುದು ಕಂಡುಬAದಿದೆ. ಹತ್ತು ತಿಂಗಳ ಹಿಂದೆ ಕುಟ್ಟದ ಕುರ್ಚಿ ಗ್ರಾಮದಲ್ಲಿ ನಡೆದ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಯನ್ನು ಬಂಧಿಸಿದ್ದರೆ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

ನಾಲ್ಕೇರಿ ಗ್ರಾಮದಲ್ಲಿ ಗೋಪಾಲ್ ತಿಮ್ಮಯ್ಯ ಅವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿ ಕೃತ್ಯ ನಡೆಸುವ ಎರಡು ದಿನದ ಮೊದಲು ಅಲ್ಲಿನ ಸಮೀಪದ ರಸ್ತೆಯಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವುದನ್ನು ಗೋಪಾಲ್‌ತಿಮ್ಮಯ್ಯ ಅವರ ಕಾರ್ಮಿಕರು ಕಂಡಿದ್ದಾರೆ. ಇದೇ ವ್ಯಕ್ತಿ ಕೆಲವು ಸಮಯದ ಮೊದಲು ಕುಟ್ಟದಲ್ಲಿ ಅಂಗಡಿಯೊAದರಲ್ಲಿ ಕೈಕವಚ ಖರೀದಿಸುತ್ತಿದ್ದುದ್ದನ್ನು ಕಂಡಿದ್ದಾರೆ. ತಾ. ೨೮ರಂದು ನಾಲ್ಕೇರಿಯಲ್ಲಿ ನಡೆದ ಕೃತ್ಯದಲ್ಲಿ ದುಷ್ಕರ್ಮಿಯು ಸಹ ಕೈಕವಚ ಹಾಕಿರುವುದು ಗೋಚರಿಸಿದೆ. ಕಳೆದ ಫೆಬ್ರವರಿಯಲ್ಲಿ ನಾಲ್ಕೇರಿಯಲ್ಲಿರುವ ಗೋಪಾಲ ತಿಮ್ಮಯ್ಯ ಅವರ ಮನೆಗೆ ಕೃತ್ಯವೆಸಗಿದ ವ್ಯಕ್ತಿ ಬಂದಿದ್ದ. ಗೋಪಾಲ್ ತಿಮ್ಮಯ್ಯ ಅವರು ಮನೆಯಿಂದ ಹೊರಗೆ ವಾಹನದಲ್ಲಿ ಹೋದ ನಂತರ ಮನೆಯ ಎದುರಿನ ಬಾಗಿಲಿನಲ್ಲಿ ನಿಂತು ದುಷ್ಕರ್ಮಿ ಬೆಲ್ ಮಾಡಿದ್ದ. ಬಾಗಿಲು ಲಾಕ್ ಆಗಿದ್ದರಿಂದ ಕಿಟಕಿ ಮೂಲಕ ವಿಚಾರಿಸಿ ಜೋರಾಗಿ ಕಾರ್ಮಿಕರನ್ನು ಗೋಪಾಲ್ ಅವರ ಪತ್ನಿ ಪಾರ್ವತಿಯವರು ಕೂಗಿದಾಗ ಅಪರಿಚಿತ ವ್ಯಕ್ತಿ ತೋಟದೊಳಗೆ ನುಗ್ಗಿ ಪರಾಗಿಯಾಗಿದ್ದ ಎಂದು ಪಾರ್ವತಿ ತಿಮ್ಮಯ್ಯ ಅವರು ತಿಳಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಬಹುತೇಕ ತೋಟದ ಮನೆಯಲ್ಲಿರುವ ಒಂಟಿ ಮನೆಗಳ ಮಕ್ಕಳು ಹೊರಗೆ ಉದ್ಯೋಗ ಹಾಗೂ ವ್ಯಾಸಂಗದಲ್ಲಿದ್ದು, ಈ ಮೂರು ಪ್ರಕರಣಗಳಿಂದ ಮನೆಯಲ್ಲಿ ವಾಸವಿರುವ ವಯಸ್ಸಾದವರಲ್ಲಿ ಭಯದ ವಾತಾವರಣ ಉಂಟಾಗಿದೆ. ಫೆಬ್ರವರಿ ೧೭ರಂದು ಕುರ್ಚಿ ಗ್ರಾಮದಲ್ಲಿ ಬೊಳ್ಳೆರ ತಿಮ್ಮಯ್ಯ ಅವರ ಮನೆಯಲ್ಲಿ ನಡೆದಿರುವ ಪ್ರಕರಣದ ದುಷ್ಕರ್ಮಿ ಇನ್ನು ಪತ್ತೆಯಾಗದ ಹಿನ್ನೆಲೆಯಲ್ಲಿ ಭಯಭೀತರಾಗಿ ಮನೆ ಬಿಟ್ಟು ತಿಮ್ಮಯ್ಯ ಅವರು ಅಮ್ಮತ್ತಿಯಲ್ಲಿ ವಾಸಿಸುತ್ತಿದ್ದಾರೆ.

ಕುರ್ಚಿ ಗ್ರಾಮದಲ್ಲಿ ಕಾಫಿ ತೋಟದ ಮಧ್ಯೆ ಇರುವ ಒಂಟಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಬೊಳ್ಳೆರ ತಿಮ್ಮಯ್ಯ ಅವರ ಮನೆಗೆ ನುಗ್ಗಿದ ಮುಸುಕುದಾರಿ ವ್ಯಕ್ತಿಯೊಬ್ಬರು ಚಾಕು ತೋರಿಸಿ ೨ ಚಿನ್ನದ ಸರ ಮತ್ತು ನಗದು ದರೋಡೆ ಮಾಡಿರುವ ಘಟನೆ ನಡೆದಿತ್ತು.

ಫೆ.೧೭ರಂದು ಮಧ್ಯಾಹ್ನ ೩ ಗಂಟೆಗೆ ಮುಸುಕುದಾರಿ ದುಷ್ಕರ್ಮಿ ಅರ್ಧ ತೆರೆದಿದ್ದ ಅಡಿಗೆ ಮನೆಯ ಬಾಗಿಲ ಮೂಲಕ ಒಳ ನುಗ್ಗಿ ಹಾಲ್‌ನಲ್ಲಿ ಕೂತಿದ್ದ ತಿಮ್ಮಯ್ಯ ಅವರಿಗೆ ಚಾಕು ತೋರಿಸಿ ಮೊಬೈಲ್ ಕಸಿದುಕೊಂಡು, ಮನೆಯಿಡಿ ತಿಮ್ಮಯ್ಯ ಅವರನ್ನು ಮುಂದಿಟ್ಟುಕೊAಡು ಹಿಂಬದಿಯಿAದ ಚಾಕು ತೋರಿಸುತ್ತ ವಿವಿಧ ಕೋಣೆಗಳನ್ನು ತಡಕಾಡಿದ್ದ.

ತಿಮ್ಮಯ್ಯ ಅವರ ಕೈಯಿಂದಲೇ ಬೀರುಗಳ ಬಾಗಿಲುಗಳನ್ನು ತೆರೆಸಿ ಅಲ್ಲಿ ಇರಿಸಿದ್ದ ಪರ್ಸ್ನಲ್ಲಿದ್ದ ಅಂದಾಜು ೧೫ ಸಾವಿರ ರೂ. ತನ್ನ ಜೇಬಿಗಿಳಿಸಿಕೊಂಡು ನಂತರ ತಿಮ್ಮಯ್ಯ ಅವರ ಪತ್ನಿಯ ಬೀರನ್ನು ತೆರೆಸಿ ಅದರಲ್ಲಿದ್ದ ಅಂದಾಜು ತಲಾ ೮ ಗ್ರಾಂನ ೨ ಚಿನ್ನದ ಸರ ತೆಗೆದುಕೊಂಡು, ಇನ್ನೊಂದು ಬೀರನ್ನು ಪರಿಶೀಲಿಸಿದ ಅದರಲ್ಲಿದ್ದ ಕೊಡವ ಸಾಂಪ್ರದಾಯಿಕ ಆಭರಣವಾದ ಪೀಚೆಕತ್ತಿಯನ್ನು ನೋಡಿ ಇದೇನೆಂದು ಕೇಳಿ ಅದನ್ನು ಮೇಜಿನಲ್ಲಿಯೇ ಇಟ್ಟು ತದ ನಂತರ ಡೈನಿಂಗ್ ಹಾಲಿನ ಮೇಜಿನಲ್ಲಿ ಕೋವಿ ಮತ್ತು ತೋಟಾ ಇದ್ದುದನ್ನು ಕಂಡು ಅತ್ತ ತಿಮ್ಮಯ್ಯ ಸುಳಿಯದಂತೆ ಚಾಕಿನಿಂದ ಸನ್ನೆ ಮಾಡಿ ಮನೆಯ ಹೊರಗೆ ಬಂದು ಕಾಫಿ ಗೋದಾಮನ್ನು ತೋರಿಸುವಂತೆ ಕರೆದುಕೊಂಡು ಹೋಗಿ ನೋಡಿ ನಂತರ ಕಾರನ್ನು ತೆರೆಸಿ ಅಲ್ಲಿಯೂ ದಾಖಲಾತಿಗಳನ್ನು ಪರಿಶೀಲಿಸಿದ್ದ.

ಈ ಸಂದರ್ಭ ತಿಮ್ಮಯ್ಯ ಅವರು ಈಗಿನ ಕಾಲದಲ್ಲಿ ಹಣ ಮತ್ತು ಚಿನ್ನವನ್ನು ಮನೆಯಲ್ಲಿ ಯಾರು ಇಟ್ಟುಕೊಳ್ಳುವುದಿಲ್ಲ. ಅವುಗಳನ್ನು ಬ್ಯಾಂಕಿನಲ್ಲಿ ಇರಿಸುತ್ತಾರೆ ಎಂದು ದುಷ್ಕರ್ಮಿಗೆ ಹೇಳಿದ್ದಾರೆ. ಮುಸುಕುದಾರಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕೆಲವೊಂದು ಶಬ್ಧಗಳನ್ನು ಮಾತ್ರ ಹೇಳಿ ಉಳಿದಂತೆ ಚಾಕು ತೋರಿಸಿ ಕೈ ಸನ್ನೆ ಮೂಲಕವೇ ಬೀರು ಬಾಗಿಲು ಮತ್ತಿತರೆಲ್ಲ ಕೋಣೆಗಳಿಗೆ ತೆರಳಲು ಸೂಚಿಸುತ್ತಿದ್ದ ಎಂದು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

ತದ ನಂತರ ಹೊರ ಹೋಗಿ ಹತ್ತು ನಿಮಿಷದವರೆಗೆ ಮನೆಯಿಂದ ಹೊರಬಾರದಂತೆ ಎಚ್ಚರಿಸಿ ಹೊರ ಬಂದರೆ ಮತ್ತೆ ಬಂದು ಚಾಕುವಿನಿಂದ ತಿವಿದು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಅವರು ತಿಳಿಸಿದರು. ತಿಮ್ಮಯ್ಯ ಅವರ ಪತ್ನಿ ಮೂರು ವರ್ಷದ ಹಿಂದೆ ನಿಧನರಾಗಿದ್ದು, ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಮನೆಯಲ್ಲಿ ತಿಮ್ಮಯ್ಯ ಓರ್ವರೆ ವಾಸಿಸುತ್ತಿದ್ದರು. ಇದೀಗ ಭಯದಿಂದ ತೋಟವನ್ನು ಗುತ್ತಿಗೆಗೆ ನೀಡಿ ಅಮ್ಮತ್ತಿಯಲ್ಲಿ ತಿಮ್ಮಯ್ಯ ಅವರು ನೆಲೆಸಿದ್ದಾರೆ.

ಕುರ್ಚಿ ಗ್ರಾಮದ ನನ್ನ ಮನೆಯಲ್ಲಿ ದರೋಡೆ ನಡೆದ ನಂತರ ದುಷ್ಕರ್ಮಿಯನ್ನು ಪೊಲೀಸ್ ಇಲಾಖೆ ಇದುವರೆಗೆ ಪತ್ತೆ ಹಚ್ಚಿಲ್ಲ. ಆದ್ದರಿಂದ ಭಯದಿಂದ ನಾನು ಸ್ವಗ್ರಾಮವನ್ನು ಬಿಟ್ಟು ಅಮ್ಮತ್ತಿ ಪಟ್ಟಣದಲ್ಲಿ ನನ್ನ ಸಂಬAಧಿಕರ ಮನೆಯ ಸಮೀಪ ವಾಸ ಮಾಡುವಂತಾಗಿದೆ ಎಂದು ತಿಮ್ಮಯ್ಯ ಹೇಳಿದರು.

-ಅಣ್ಣೀರ ಹರೀಶ್ ಮಾದಪ್ಪ