ಮಡಿಕೇರಿ, ಡಿ. ೨೯: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ ಸುಮಾರು ಐದು ವರ್ಷಗಳ ಹಿಂದೆ ಕೊಡಗು ಜಿಲ್ಲೆಗೆ ಮಂಜೂರಾಗಿ ಬಳಿಕ ಕಾರಣಾಂತರಗಳಿAದ ನೆನೆಗುದಿಗೆ ಬಿದ್ದಿದ್ದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಕನಸ್ಸು ಈಡೇರುವ ಸಮಯ ಇದೀಗ ಕೂಡಿಬಂದಿದೆ. ಅಂತರರಾಷ್ಟಿçÃಯ ಗುಣಮಟ್ಟದಲ್ಲಿ ಸುಮಾರು ರೂ. ೫೦ ಕೋಟಿಯಷ್ಟು ವೆಚ್ಚದಲ್ಲಿ ಕೆ.ಎಸ್.ಸಿ.ಎ ಮೂಲಕವೇ ನಿರ್ಮಾಣಗೊಳ್ಳಲಿರುವ ಈ ಕ್ರಿಕೆಟ್ ಸ್ಟೇಡಿಯಂ ಭವಿಷ್ಯದಲ್ಲಿ ಕ್ರೀಡಾ ಜಿಲ್ಲೆಯಾದ ಕೊಡಗಿನ ಪಾಲಿಗೆ ಮತ್ತೊಂದು ಹಿರಿಮೆಯ ಕೇಂದ್ರವಾಗಿ ರೂಪುಗೊಳ್ಳಲಿದೆ.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ಈ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದ್ದು, ಇಂದು ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ, ಎಸ್ಪಿ ಕ್ಷಮಾಮಿಶ್ರಾ, ಕೆಎಸ್ಸಿಎಯ ಪದಾಧಿಕಾರಿಗಳು, ಹೊದ್ದೂರು ಗ್ರಾ.ಪಂ. ಪ್ರಮುಖರು ಹಾಗೂ ಇನ್ನಿತರ ಹಲವರು ಸೇರಿ ಭೂಮಿ ಪೂಜೆ ನಡೆಸಿದರು. ವಿಶೇಷವಾಗಿ ಈ ಜಾಗಕ್ಕೆ ಸಂಬAಧಿಸಿದAತೆ ಈ ಹಿಂದೆ ಉಂಟಾಗಿದ್ದ ಗೊಂದಲ ಹಾಗೂ ಬೇಡಿಕೆಯ ಕುರಿತು ಹೋರಾಟ ನಡೆಸುತ್ತಿದ್ದ ಪ್ರಮುಖರು ಕೂಡ ಭೂಮಿಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿವಾದ ಬಹುತೇಕ ಶಮನಗೊಂಡಿದ್ದು, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶುಭಮುಹೂರ್ತ ಕೂಡಿ ಬಂದAತಾಗಿದೆ.
೨೦೧೫ರ ಸಂದರ್ಭದಲ್ಲೇ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೆ.ಎಸ್.ಸಿ.ಎ ಅನುಮೋದನೆ ನೀಡಿತ್ತು. ಇದರ ಎಲ್ಲಾ ಖರ್ಚುವೆಚ್ಚಗಳನ್ನು ಕೂಡ ರಾಜ್ಯ ಕ್ರಿಕೆಟ್ ಸಂಸ್ಥೆ ಭರಿಸಲಿದ್ದು, ಇದಕ್ಕಾಗಿ ಜಾಗದ ಹುಡುಕಾಟ ನಡೆದಿತ್ತು. ಬಳಿಕ ಜಿಲ್ಲಾಡಳಿತ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ೧೨.೭೦ ಎಕರೆ ಜಾಗವನ್ನು ಗುರುತಿಸಿ ಮಂಜೂರು ಮಾಡಿತ್ತು. ಇದಕ್ಕೆ ಸಂಬAಧಿಸಿದAತೆ ಕ್ಯಾಬಿನೆಟ್ನ ಒಪ್ಪಿಗೆ ಕೂಡ ಆಗಿತ್ತು. ಆದರೆ ಈ ಜಾಗದಲ್ಲಿ ಪರಿಶಿಷ್ಟ ಜಾತಿ - ಪಂಗಡ ಹಾಗೂ ಹಿಂದುಳಿದ ವರ್ಗದ ಸ್ಮಶಾನಕ್ಕೆ ಜಾಗಬೇಕೆಂಬ ಬೇಡಿಕೆಯನ್ನು ಮುಂದಿರಿಸಿ ಆ ವ್ಯಾಪ್ತಿಯ ಕೆಲವು ನಿವಾಸಿಗಳು ಹೋರಾಟಕ್ಕೆ ಮುಂದಾಗಿದ್ದರಿAದ ಇದು ವಿವಾದಕ್ಕೆಡೆಯಾಗಿ ಉತ್ತಮ ಯೋಜನೆಯೊಂದು ಸಾಕಷ್ಟು ವರ್ಷಗಳ ಕಾಲ ನೆನೆಗುದಿಗೆ ಬೀಳುವಂತಾಗಿತ್ತು. ಯೋಜನೆಯ ಪರ ಹಾಗೂ ವಿರೋಧವಾಗಿ ಸಾಕಷ್ಟು ಹೋರಾಟ - ಪ್ರತಿಭಟನೆಗಳು ಕೂಡ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೀಗ ನೂತನ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಅವರು ಈ ಬಗ್ಗೆ ವಿಶೇಷ ಆಸಕ್ತಿ ತೋರಿದ್ದು, ಕ್ಯಾಬಿನೆಟ್ ಒಪ್ಪಿಗೆ ಕೂಡ ಆಗಿದ್ದ
(ಮೊದಲ ಪುಟದಿಂದ) ಯೋಜನೆಯ ಕುರಿತಾಗಿ ಸಂಬAಧಿಸಿದವರೊAದಿಗೆ ಸಮಾಲೋಚನೆ ನಡೆಸಿ ಇದೀಗ ಎಲ್ಲಾ ತೊಡಕುಗಳನ್ನು ನಿವಾರಿಸುವ ಮೂಲಕ ಇಂದು ಯೋಜನೆಯ ಪ್ರಾರಂಭಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ.
ಈ ಸಂದರ್ಭ ಜಿಲ್ಲಾಧಿಕಾರಿಗಳೊಡನೆ ಎಸ್ಪಿ ಕ್ಷಮಾಮಿಶ್ರಾ, ಕೆಎಸ್ಸಿಎಯ ಮ್ಯಾನೇಜಿಂಗ್ ಕಮಿಟಿಯ ಶಾಂತಿ ಸ್ವರೂಪ್, ಸಂಚಾಲಕ ಚೇನಂಡ ಪೃಥ್ವಿದೇವಯ್ಯ, ಹೊದ್ದೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಈ ಹಿಂದೆ ಸ್ಮಶಾನ ಜಾಗದ ಬಗ್ಗೆ ಹೋರಾಟ ನಡೆಸಿದ್ದ ಪ್ರಮುಖರಾದ ಮೊಣ್ಣಪ್ಪ, ನಿರ್ವಾಣಪ್ಪ, ಅಮೀನ್ ಮೊಹಿಸೀನ್, ಗ್ರಾ.ಪಂ. ಸದಸ್ಯ ಹಮೀದ್ ಸೇರಿದಂತೆ ಹಲವರು ಭಾಗಿಗಳಾಗಿದ್ದರು.
ಒಟ್ಟು ೧೨.೭೦ ಎಕರೆ ಪ್ರದೇಶದಲ್ಲಿ ೫೦ ಸೆಂಟ್ ಜಾಗವನ್ನು ಸ್ಮಶಾನಕ್ಕಾಗಿ ಒತ್ತಟ್ಟಿಗೆ ಮೀಸಲಿರಿಸಲಾಗಿದೆ. ಇನ್ನು ೫೦ ಸೆಂಟ್ ಜಾಗವನ್ನು ಪಾರ್ಕ್ ಆಗಿ ರೂಪಿಸಲಾಗುವುದು. ಉಳಿದ ೧೧.೭೦ ಎಕರೆ ಜಾಗದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ರೂಪುಗೊಳ್ಳಲಿದೆ. ಕೆಎಸ್ಸಿಎ ಅಧೀನದಲ್ಲಿ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂಗಿAತಲೂ ತುಸು ದೊಡ್ಡದಾಗಿ ಈ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ. ಸದ್ಯದಲ್ಲಿಯೇ ಟೆಂಡರ್ ಕರೆಯಲಿದ್ದು, ಅದರ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದ್ದು, ಇಲ್ಲಿ ಸುಸಜ್ಜಿತ ಮೈದಾನ ಸೇರಿದಂತೆ ತರಬೇತಿಗೆ ವ್ಯವಸ್ಥೆ, ಈಜುಕೊಳ, ಒಳಾಂಗಣ ಕ್ರೀಡಾಂಗಣ, ಜಿಮ್, ಬೃಹತ್ ಸಭಾಂಗಣ ಸೇರಿದಂತೆ ಇನ್ನಿತರ ಹಲವಾರು ವ್ಯವಸ್ಥೆಗಳು ಇರಲಿವೆ.
ಅಂತರರಾಷ್ಟಿçÃಯ ಗುಣಮಟ್ಟದಂತೆ ನಿರ್ಮಾಣವಾಗಲಿರುವ ಈ ಸ್ಟೇಡಿಯಂ ಭವಿಷ್ಯದಲ್ಲಿ ಜಿಲ್ಲೆಗೊಂದು ದೊಡ್ಡ ಕೊಡುಗೆಯಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್ಸಿಎ ಮೂಲಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಈ ಹಿಂದೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಕೊಡಗು ಸೇರ್ಪಡೆಯಾಗಿತ್ತು. ಆದರೆ ಕಾರಣಾಂತರದಿAದ ವಿಳಂಬವಾಗಿದ್ದ ಈ ಯೋಜನೆ ಮುಂದಿನ ೩ ವರ್ಷದಲ್ಲಿ ಪೂರ್ಣಗೊಳ್ಳಲಿರುವ ಸಾಧ್ಯತೆ ಇದೆ.