ಮಡಿಕೇರಿ, ಡಿ. ೨೯ : ರಾಷ್ಟçಕವಿ ಕುವೆಂಪು ಅವರು ಬರೆದಿರುವ ಮಹಾಕಾವ್ಯ, ಕಾದಂಬರಿ, ನಾಟಕ, ಕವನ ಹೀಗೆ ಹಲವು ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸಂವೇದನಾಶೀಲತೆ ಬೆಳೆಸಿಕೊಂಡು ವಿಶ್ವ ಮಾನವರಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಂತ ಜೋಸೆಫರ ಶಾಲೆಯಲ್ಲಿ ಬುಧವಾರ ನಡೆದ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ಅವರು ಬರೆದಿರುವ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ರಾಮಾಯಣ ದರ್ಶನಂ, ಜಲಗಾರ, ಬೆರಳ್ಗೆ ಕೊರಳ್ ಹೀಗೆ ಹಲವು ಕಥೆ, ಕಾದಂಬರಿ, ನಾಟಕಗಳನ್ನು ಅಧ್ಯಯನ ಮಾಡುವುದರಿಂದ ಸೃಜನಶೀಲತೆ,

(ಮೊದಲ ಪುಟದಿಂದ) ಕ್ರಿಯಾಶೀಲತೆ ಮತ್ತು ವೈಚಾರಿಕತೆ ಬೆಳೆಯುತ್ತದೆ ಎಂದು ಅವರು ಹೇಳಿದರು.

‘ಕುವೆಂಪು ಅವರು ಬರೆದಿರುವ ನಾಟಕ, ಕಾದಂಬರಿಗಳನ್ನು ಅಧ್ಯಯನ ಮಾಡುತ್ತಿದ್ದರೆ, ಕುವೆಂಪು ಅವರ ಜೊತೆ ಸಂವಾದ ಮಾಡಿದಂತೆ ಭಾಸವಾಗುತ್ತದೆ. ಕುವೆಂಪು ಅವರ ಸಾಹಿತ್ಯ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.

ಕುವೆAಪು ಅವರು ಬರೆದಿರುವ ರೈತ ಗೀತೆಯಲ್ಲಿನ ಒಂದು ಸಾಲು ಸದಾ ನೆನಪಿಗೆ ಬರುತ್ತದೆ. ಮುತ್ತಿಗೆ ಹಾಕಲಿ ಸೈನಿಕರೆಲ,್ಲ ಬಿತ್ತುಳುವುದನವ ಬಿಡುವುದೆ ಇಲ್ಲ, ಉಳುವಾ ಯೋಗಿಯ ನೋಡಲ್ಲಿ..... ಈ ಸಾಲು ಕೃಷಿಕರು ಮತ್ತು ಸೈನಿಕರ ಶಕ್ತಿಯ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂದು ಅವರು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ ರಾಷ್ಟçಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಬಿರುಗಾಳಿ, ಮಹಾರಾತ್ರಿ, ಸ್ಮಶಾನ ಕುರುಕ್ಷೇತ್ರ, ಜಲಗಾರ, ರಕ್ತಾಕ್ಷಿ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಯಮನ ಸೋಲು, ಚಂದ್ರಹಾಸ, ಬಲಿದಾನ ಹೀಗೆ ಹಲವು ನಾಟಕಗಳನ್ನು ಬರೆದಿದ್ದಾರೆ. ಹಾಗೆಯೇ ನೆನಪಿನ ದೋಣಿಯಲ್ಲಿ ಆತ್ಮಚರಿತ್ರೆ, ಮಲೆನಾಡಿನ ಚಿತ್ರಗಳು, ಪ್ರಬಂಧ ಬರೆದಿದ್ದಾರೆ. ಮನುಜಮತ-ವಿಶ್ವಪಥ, ಮಂತ್ರಮಾAಗಲ್ಯ, ರಚಿಸಿದ್ದಾರೆ. ಕೊಳಲು, ಪಾಂಚಜನ್ಯ, ನವಿಲು ಹೀಗೆ ಹಲವು ಕಾವ್ಯಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಉಪನ್ಯಾಸ ನೀಡುತ್ತಾ, ಕುವೆಂಪು ಅವರು ರಚಿಸಿರುವ ಸಾಹಿತ್ಯ ಕೃತಿಗಳ ಅಂಶಗಳಲ್ಲಿ ಅರ್ಧದಷ್ಟನ್ನಾದರೂ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ಬದುಕು ಕಾಣಲು ಸಾಧ್ಯ.

ಕುವೆಂಪು ಅವರು ಬರೆದಿರುವ ಕಥೆ, ಕಾದಂಬರಿ, ನಾಟಕಗಳು ಅದ್ಭುತ ಮಾನವೀಯ ಬರಹಗಳನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಕಾಣಬಹುದಾಗಿದೆ. ಕುವೆಂಪು ಅವರಂತೆ ಒಳ್ಳೆಯ ಆದರ್ಶ ವ್ಯಕ್ತಿಯಾಗಿ, ಸಾರ್ಥಕ ಬದುಕು ನಡೆಸುವಂತಾಗಬೇಕು ಎಂದರು.

ಕುವೆAಪು ಕುಟುಂಬದವರಾದ ಕೆ.ಪಿ.ಚಂದ್ರಕಲಾ ಮಾತನಾಡಿ ಕುವೆಂಪು ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಕುವೆಂಪು ಅವರ ಚಿಂತನೆ, ದೂರದೃಷ್ಟಿ ಅಗಾಧವಾಗಿತ್ತು ಮತ್ತು ಅದ್ಭುತವಾಗಿತ್ತು. ಕುವೆಂಪು ಅವರ ಹಾಡುಗಳನ್ನು ಕೇಳುತ್ತಿದ್ದರೆ ಮತ್ತೊಮ್ಮೆ ಮಗದೊಮ್ಮೆ ಕೇಳ ಬೇಕೆನಿಸುತ್ತದೆ ಎಂದರು.

ಸಂತ ಜೋಸೆಫರ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸಾ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ ಸ್ವಾಗತಿಸಿದರು. ಜಾನಪದ ಪರಿಷತ್ತು ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿದರು. ರಾಘವೇಂದ್ರ ಪ್ರಸಾದ್ ಮತ್ತು ಪುರುಷೋತ್ತಮ ತಂಡದವರು ನಾಡಗೀತೆ, ರೈತಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.