ಗ್ರೆಗೋರಿಯನ್ ಆಧಾರದಲ್ಲಿ
ತಾ. ೧.೧.೨೦೨೨ರಂದು ಹೊಸ ವರುಷವು ಕನ್ಯಾ ಲಗ್ನದಲ್ಲಿ ಉದಯವಾಗುವುದು. (ಹಸ್ತಾ ನಕ್ಷತ್ರ)
ತಾ. ೨೯.೧.೨೦೨೨ರ ತನಕ ಶುಕ್ರನು ವಕ್ರನಾಗಿರುವನು. ಗುರುಗ್ರಹವು ೨೯.೭.೨೦೨೨ - ೨೩.೧೧.೨೦೨೨ರ ತನಕ ವಕ್ರ. ಶನಿಗ್ರಹವು ೫.೬.೨೦೨೨ ರಿಂದ ೨೩.೧೦.೨೦೨೨ರ ತನಕ ವಕ್ರ. ಕುಜ ನವೆಂಬರ್ ತಿಂಗಳಿನÀಲ್ಲಿ ವಕ್ರನಾಗಿರುತ್ತಾನೆ. ಅದೇ ಸಮಯದಲ್ಲಿ ಗುರುಗ್ರಹವೂ ವಕ್ರನಾಗಿರುವುದರಿಂದ ಭಾರತ ದೇಶದಲ್ಲಿ ಬೆಂಕಿ ಅನಾಹುತ ಹಾಗೂ ನೀರಿನಿಂದ ದೊಡ್ಡ ಪ್ರಮಾಣದ ಭೂಕಂಪ, ಪ್ರವಾಹ, ಮಳೆಯಾಗಬಹುದು.
ಸೂರ್ಯನು ಮಕರರಾಶಿ ಪ್ರವೇಶಿಸಿದ ನಂತರ ಕೊಡಗಿನಲ್ಲಿ ಚಳಿಯು ಹೆಚ್ಚಾಗುವ ಸಾಧ್ಯತೆ ಇದೆ. ಬುಧನು ಸೂರ್ಯನೊಡನೆ ಸೇರಿದರೆ ಕುಳಿರ್ಗಾಳಿ ಹೆಚ್ಚಾಗುವುದು. (೧೨.೨.೨೦೨೨ರ ತನಕ) ಸೂರ್ಯನು ಮಕರರಾಶಿಯ ಉತ್ತಾರಾಷಾಢ - ೨ನೇ ಪಾದ ಪ್ರವೇಶಿಸುವಾಗ ಚಂದ್ರನು ರೋಹಿಣಿ ನಕ್ಷತ್ರ ವೃಷಭರಾಶಿಯಲ್ಲಿರುತ್ತಾನೆ. ವೃಶ್ಚಿಕದಲ್ಲಿರುವ ಕುಜನು ಚಂದ್ರನನ್ನು ದೃಷ್ಟಿಸುತ್ತಾನೆ. ಮಾಘ ಮಾಸದ ಅಮಾವಾಸ್ಯೆ ಕಳೆದರೆ (೧.೨.೨೦೨೨) ಮಳೆಯ ಸೂಚನೆಯಿದೆ. ಸೂರ್ಯ, ಬುಧ, ಶನಿ ಗ್ರಹಗಳು (ಮಕರ) ಜಲತತ್ವರಾಶಿಯಲ್ಲಿರುವುದು ಮಳೆಯ ಸೂಚನೆಯಾಗಿದೆ. ಶನಿ - ಕುಜರು ಜಲತತ್ವ ಅಂಶದಲ್ಲಿರುವುದರಿAದ ಚಂಡಮಾರುತ ಬೀಸಬಹುದು. ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಬಹುದು. ಕೊಡಗಿನಲ್ಲೂ ಆ ಸಮಯದಲ್ಲಿ ಮಳೆಯಾಗುವ ಎಲ್ಲಾ ಲಕ್ಷಣಗಳಿವೆ.
ಕೋವಿಡ್ ಕ್ಷೀಣಗೊಳ್ಳುತ್ತದೆ
೧.೧.೨೦೨೨ ರಂದು ಉದಯವಾಗುವ ಹೊಸವರ್ಷದಲ್ಲಿ ಯೋಗ - ಅವಯೋಗಗಳಿವೆ. ೧೨.೪.೨೦೨೨ ‘‘ರಾಹು’’ ಮೇಷರಾಶಿ ಪ್ರವೇಶಿಸಿದರೆ ಕೋವಿಡ್-೧೯ ಶಕ್ತಿಹೀನವಾಗುವುದರಲ್ಲಿ ಸಂಶಯವಿಲ್ಲ ಅಥವಾ ಸಂಪೂರ್ಣ ನಾಶವಾಗಲೆಂದು ನಾವು ಆಶಿಸೋಣ. ಕಾಲ ಪುರುಷ ಪಟ್ಟಿಯಲ್ಲಿ ವೃಷಭರಾಶಿ ಪುರುಷನ ಮೂಗು ಮತ್ತು ಬಾಯಿ. ರಾಹು ವೃಷಭರಾಶಿಯಲ್ಲಿರುವಾಗ ಕೋವಿಡ್ -೧೯ ಮಾನವ ಕುಲಕ್ಕೆ ಮೂಗು ಮತ್ತು ಬಾಯಿಯ ಮೂಲಕ ಕಾಯಿಲೆ ತಂದೊಡ್ಡಿತ್ತು. ‘‘ರಾಹು’’ ವೃಷಭರಾಶಿಯನ್ನು ಬಿಟ್ಟು ಮೇಷರಾಶಿಗೆ ಬರುವುದರಿಂದ ಕೋವಿಡ್ -೧೯ ಕಾಯಿಲೆ - ಅಂಟುರೋಗ ಫ್ಲೂ... ಶಕ್ತಿ ಹೀನವಾಗಬಹುದು. ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಅಂದರೆ ಕರ್ಕಾಟಕ ರಾಶಿಯ (ಂಡಿಛಿh) ನಭೋಮಂಡಲದಿAದ ರಾಹುವಿನ ಸ್ಥಾನ ಪಲ್ಲಟವಾಗುವುದು. ಕರ್ಕಾಟಕ ರಾಶಿಯು ಕಾಲಪುರುಷನ ಶ್ವಾಸಕೋಶ.
ಚಾಂದ್ರಮಾನ ಆಧಾರದಲ್ಲಿ ೨.೪.೨೦೨೨, ಸೌರಮಾನ ಆಧಾರದಲ್ಲಿ ೧೪.೪.೨೦೨೨ರಿಂದ ಶುಭಕೃತು ಸಂವತ್ಸರದ ಆರಂಭ. ಶನಿ ರಾಜನಾಗುವನು. ಬೃಹಸ್ಪತಿ - ಗುರು ಮಂತ್ರಿಯಾಗುವರು. ಭಾರತ ದೇಶದಲ್ಲಿ ಅರ್ಹತೆ ಇರುವವರಿಗೆ ಉದ್ಯೋಗ ಕಷ್ಟವಾದ್ದರಿಂದ ನಮ್ಮ ದೇಶದ ವಿದ್ಯಾವಂತ ವರ್ಗ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋಗಬೇಕಾಗಬಹುದು. ಅದಾದ ನಂತರ ೨೦೨೨ ಕೊನೆಯ ತನಕ ಚಂದ್ರ ಮಹಾದೆಸೆಗೆ ಕೇತು ಭುಕ್ತಿ.
ಶುಭಕೃತು ಸಂವತ್ಸರದ ಮಧ್ಯಭಾಗದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೊಗೆಯಾಡುತ್ತಿರುವ ಕೊಡಗು ಸೇರಿದಂತೆ ಬೋಡೋ, ಬಾರಕ್, ಮಿಥಿಲಾ, ಕುಚ್, ಸೌರಾಷ್ಟç, ವಿದರ್ಭ, ತುಳು ದೇಶಗಳಲ್ಲಿ ಅಸಮಾಧಾನ ಸ್ಫೋಟಗೊಳ್ಳ ಬಹುದು. ಕೇಂದ್ರ-ರಾಜ್ಯ ಸರ್ಕಾರಗಳಿಗಿದು ಆತಂಕ ಮೂಡಿಸಬಹುದು. ಎಲೆಕ್ಟಾçನಿಕ್ ವಾಹನಗಳ ಬೇಡಿಕೆ-ಉತ್ಪತ್ತಿ ಹೆಚ್ಚಬಹುದು. ರಿಯಲ್ ಎಸ್ಟೇಟ್ ಮತ್ತೆ ತಲೆ ಎತ್ತಬಹುದು. ಸರ್ಕಾರಿ ಶಾಖೆಗಳು ಖಾಸಗೀಕರಣವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಕಷ್ಟ ಕಾಲ. ರೈತರ ಚಳವಳಿ - ಸರ್ಕಾರಕ್ಕೆ ಕಷ್ಟ ಕಾಲ-ಸರ್ಕಾರ ಔಷಧಿಯ ವಿಷಯದಲ್ಲಿ ಉದಾರತೆ ತೋರುವುದು. ಭಾರತದ ನೆರೆರಾಷ್ಟçಗಳು ಭಾರತದೊಡನೆ ಮಾಡಿದ ಒಪ್ಪಂದ-ಕರಾರುಗಳನ್ನು ಮುರಿಯ ಬಹುದು. ಪೆಟ್ರೋಲ್, ಎಣ್ಣೆ, ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಬಹುದು.
ಸಮರ ರೀತಿ ಹೋರಾಟ
ಭಾರತ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿದ ದಿನವನ್ನು ಅಡಿಪಾಯವಾಗಿಟ್ಟು ಕೊಂಡು ಲೆಕ್ಕ ಹಾಕಿದರೆ ನಮ್ಮ ಭಾರತ ದೇಶಕ್ಕೆ ಚಂದ್ರಮಹಾದೆಶೆಗೆ ಬುಧ ಭುಕ್ತಿ ನಡೆಯುತ್ತಿದೆ. ನವೆಂಬರ್-ಡಿಸೆAಬರ್ ೨೦೨೨ರಲ್ಲಿ ಯುದ್ಧ ಸಮಾನ ಪ್ರಸಂಗಗಳು ಎದುರಾಗಬಹುದು. ಅಂದರೆ ಸಮರ ರೀತಿಯ ಹೋರಾಟಕ್ಕೆ ಎಡೆಯಾಗಬಹುದು. ಭಾರತ ದೇಶದಲ್ಲಿ ಮಹಿಳೆಯರು ಎಲ್ಲಾ ವಿಭಾಗಗಳಲ್ಲೂ, ರಾಜಕಾರಣದಲ್ಲೂ ಮುಂಚೂಣಿಯಲ್ಲಿ ಸಾಗುವ ಯೋಗವಿದೆ. ಜೊತೆಗೆ ಅಧಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಜನಿಸುವರು. ಶತ್ರು ರಾಷ್ಟçವು ನಮ್ಮ ಸಮಾನ ನಿಲ್ಲುವ ಸಂದರ್ಭವಿದೆ.
ಪ್ರಧಾನಿಯವರ ಯೋಗಫಲ
ನಮ್ಮ ದೇಶದ ಪ್ರಧಾನಮಂತ್ರಿಗಳಿಗೆ (೧೭.೯.೧೯೫೦ ೧೧ ಂ.ಒ.) ಈಗ ನಡೆಯುತ್ತಿರುವುದು ಕುಜಮಹಾದೆಶೆ. ಅವರ ಜನ್ಮಕುಂಡಲಿಯಲ್ಲಿ ಲಗ್ನಾಧಿಪತಿ ಕುಜ - ೬ನೇ ಅಧಿಪತಿ ಕುಜ, ಲಗ್ನದಲ್ಲೇ ಇರುವುದರಿಂದ ಶತ್ರುಗಳು ಹಿಮ್ಮೆಟ್ಟುವರು. ನೆರೆರಾಷ್ಟçಗಳೊಡನೆ ಕೆಲವು ಸಮಸ್ಯೆಗಳು ಎದುರಾಗಬಹುದು.
ಕೇತು ಸೂರ್ಯಗ್ರಹಣವು ೨೫.೧೦.೨೦೨೨ ರಂದು ಸಂಭವಿಸುವುದು. ಬೆಂಕಿ ಅನಾಹುತ ಆ ಸಮಯದಲ್ಲಿ ಸಂಭವಿಸಬಹುದು. ಸ್ವಾತಿನಕ್ಷತ್ರದವರು ಈ ಗ್ರಹಣವನ್ನು ವೀಕ್ಷಿಸಬಾರದು. ದೀಪಾವಳಿ, ಪುತ್ತರಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ದೂರವಿರಿ. ೮.೧೧.೨೦೨೨ ರÀಲ್ಲಿ ನಡೆಯುವ ಚಂದ್ರಗ್ರಹಣವನ್ನು ಭರಣಿ ನಕ್ಷತ್ರದವರು ವೀಕ್ಷಿಸಬಾರದು. ಗ್ರಹಣದ ಸಮಯದಲ್ಲಿ ಮೇಘ ಸ್ಫೋಟವಾಗಬಹುದು. ಭೂಮಿಯಲ್ಲಿ ಹಲವು ಕಷ್ಟದ ವಿದ್ಯಮಾನಗಳು ನಡೆಯಬಹುದು. ಚಂಡಮಾರುತ ಬೀಸಬಹುದು.
ಭಾರತದ ರಾಷ್ಟಾçಧಿಪತಿ ಯಾರು?
ಜುಲೈ - ೨೦೨೨ ರÀಲ್ಲಿ ನಡೆಯುವ ನಮ್ಮ ದೇಶದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನೂತನ ರಾಷ್ಟಾçಧಿಪತಿಯಾಗಿ ಗೆಲ್ಲುವರ‍್ಯಾರು? ದಕ್ಷಿಣ ಭಾರತದ ರ‍್ಯಾರಾದರೂ ಅಧ್ಯಕ್ಷ ಸ್ಥಾನ ಅಲಂಕರಿಸಬಹುದೆ?
- ಕರೋಟಿರ ಶಶಿ ಸುಬ್ರಮಣಿ