ಮಡಿಕೇರಿ, ಡಿ. ೩೦: ಸುಮಾರು ಕಳೆದ ೨೦ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಬಿರುನಾಣಿ - ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸುವ ಯೋಜನೆಯಾದ ಕೂಟಿಯಾಲ ಸೇತುವೆ ಸ್ಥಳಕ್ಕೆ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿರುವ ಶಾಂತೆಯAಡ ರವಿಕುಶಾಲಪ್ಪ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.

ಸೇತುವೆ ನಿರ್ಮಾಣವಾಗಿರುವ ಸ್ಥಳ ಹಾಗೂ ಇದಕ್ಕೆ ಸಂಪರ್ಕ ಕಲ್ಪಿಸಬೇಕಿರುವ ರಸ್ತೆ ಅರಣ್ಯ ಪ್ರದೇಶದ ನಡುವೆ ವನ್ಯಜೀವಿ ವಿಭಾಗದಲ್ಲಿ ಒಂದಷ್ಟು ಅಂತರ ಬರುತ್ತದೆ ಎಂಬ ಕಾರಣಕ್ಕಾಗಿ ಈ ಬಗ್ಗೆ ಕಾನೂನಿನ ತೊಡಕು ಉಂಟಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಪ್ರಸ್ತುತವೂ ವಿವಾದ ಬಗೆಹರಿಯದೆ ಗೊಂದಲ ಇರುವ ಹಿನ್ನೆಲೆಯಲ್ಲಿ ಗಡಿಭಾಗದ ಅರಣ್ಯ ಪ್ರದೇಶಗಳ ವೀಕ್ಷಣೆ - ಸಂರಕ್ಷಣೆ ಕುರಿತು ಪರಿಶೀಲಿಸಲು ತೆರಳಿದ್ದ

(ಮೊದಲ ಪುಟದಿಂದ) ಅವರು ಸ್ಥಳೀಯರ ಬೇಡಿಕೆಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕೂಟಿಯಾಲ ಭಾಗಕ್ಕೂ ಭೇಟಿ ನೀಡಿದರು.

ಈ ಸಂದರ್ಭ ಸ್ಥಳೀಯರು ಈ ರಸ್ತೆ ನಿರ್ಮಾಣವಾದಲ್ಲಿ ಅರಣ್ಯಕ್ಕೆ ಯಾವದೇ ಹೆಚ್ಚಿನ ಧಕ್ಕೆಯಾಗುವುದಿಲ್ಲ ಅಲ್ಲದೆ, ಕಳ್ಳಬೇಟೆ, ಮರಕಳ್ಳತನ ದಂತಹ ಪ್ರಕರಣಗಳಿಗೂ ಜನಸಂಚಾರದಿAದ ಕಡಿವಾಣ ಬೀಳಲಿದೆ. ಈ ರಸ್ತೆ ನಿರ್ಮಾಣವಾದಲ್ಲಿ ಬಿರುನಾಣಿ ವಿಭಾಗದ ಜನತೆಗೆ ವೀರಾಜಪೇಟೆ - ಮಡಿಕೇರಿ ಸಂಪರ್ಕಕ್ಕೆ ಹಲವಷ್ಟು ಕಿ.ಮೀ.ಗಳ ಅಂತರ ಕಡಿಮೆಯಾಗಲಿದೆ ಎಂದು ಗಮನ ಸೆಳೆದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿಕುಶಾಲಪ್ಪ ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೂ ಚರ್ಚಿಸಿ ಅವರ ಸಲಹೆಯನ್ನೂ ಪಡೆಯಲಾಗುವುದು. ಅಲ್ಲದೆ ಅರಣ್ಯ ಇಲಾಖೆಯೊಂದಿಗೂ ಸಾಧಕ - ಭಾದಕದ ಕುರಿತಾಗಿ ಚರ್ಚಿಸಿ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾಗುವ ಪ್ರಯತ್ನ ನಡೆಸುವುದಾಗಿ ಹೇಳಿದರು. ಅರಣ್ಯ ಕಾನೂನಿನ ಉಲ್ಲಂಘನೆಯೂ ಆಗಬಾರದು ಜನಸಾಮಾನ್ಯರಿಗೂ ಉಪಯೋಗ ವಾಗಬೇಕೆಂಬ ಜಿಜ್ಞಾಸೆ ಇಲ್ಲಿದೆ. ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ವ್ಯವಹರಿಸುವದಾಗಿ ಅವರು ಭರವಸೆಯಿತ್ತರು.

ಬಳಿಕ ಅವರು ಕೂಟಿಯಾಲ ದಲ್ಲೇ ಇರುವ ಅರಣ್ಯ ರಕ್ಷಣಾ ಕ್ಯಾಂಪ್‌ಗೆ ತೆರಳಿ ಅಲ್ಲಿನ ಸಿಬ್ಬಂದಿಗಳೊAದಿಗೆ ಅರಣ್ಯ ಸಂರಕ್ಷಣೆ ವಿಚಾರದ ಬಗ್ಗೆ ಮಾಹಿತಿ ಪಡೆದರು. ಕಳ್ಳಬೇಟೆ, ಮರಕಳವು ತಡೆಯಂತಹ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಲು ಆದೇಶಿಸಿದರಲ್ಲದೆ, ಬೆಂಕಿ ನಿಯಂತ್ರಣದ ಬಗ್ಗೆಯೂ ಎಚ್ಚರ ವಹಿಸುವಂತೆ ಸೂಚಿಸಿದರು.

ಈ ಸಂದರ್ಭ ಪೊನ್ನಂಪೇಟೆ ಇ.ಓ. ಅಪ್ಪಣ್ಣ, ಶ್ರೀಮಂಗಲ ಆರ್‌ಎಫ್‌ಓ ವೀರೇಂದ್ರ, ಮಾಕುಟ್ಟ ವಿಭಾಗದ ಡಿನ್ಸಿ ದೇಚಮ್ಮ, ಎಸಿಎಫ್ ಶ್ರೀನಿವಾಸ್ ನಾಯಕ್, ಬಿರುನಾಣಿ ಗ್ರಾ.ಪಂ. ಅಧ್ಯಕ್ಷೆ ಬುಟ್ಟಿಯಂಡ ಗೀತಾಕಾಳಪ್ಪ, ಉಪಾಧ್ಯಕ್ಷ ರಾಜೇಶ್, ಸ್ಥಳೀಯ ಪ್ರಮುಖರಾದ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್, ಬೊಟ್ಟಂಗಡ ಎಂ. ರಾಜು, ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾಯಪಂಡ ಮಧು ಮೋಟಯ್ಯ, ನೆಲ್ಲೀರ ಮನು, ಅಣ್ಣಳಮಾಡ ರಾಯ್, ಗ್ರಾ.ಪಂ. ಸದಸ್ಯೆ ಮಲ್ಲೇಂಗಡ ರೀನಾ, ಕುಂಞAಗಡ ಅರುಣ್ ಭೀಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.