ಮಡಿಕೇರಿ, ಡಿ. ೨೯: ಕೊಡಗು ದಫ್ ಸಮಿತಿ ವತಿಯಿಂದ ಆನ್‌ಲೈನ್ ಮೂಲಕ ನಡೆಸಿದ ಜಿಲ್ಲಾಮಟ್ಟದ ಜೀಲಾನಿ ಗುಣ Áನ ಸ್ಪರ್ಧೆಯಲ್ಲಿ ನೌಫಲ್ ಕಿಕ್ಕರೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಮ್ಮೆಮಾಡಿನ ಹಾಫಿಲ್ ಶಮ್ಮಾಸ್ ದ್ವಿತೀಯ ಹಾಗೂ ಉನೈಸ್ ಹುಂಡಿ ತೃತೀಯ ಸ್ಥಾನ ಗಳಿಸಿದ್ದಾರೆ. ಎನ್‌ಸಿಟಿ ಸಂಸ್ಥೆಯ ವೀರಾಜಪೇಟೆ ಕಚೇರಿಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಾಸ್ ಜೈನಿ ಉಸ್ತಾದ್ ವಹಿಸಿದ್ದರು.
ಎನ್‌ಸಿಟಿ ಸಂಸ್ಥೆಯ ಕನ್ನಡಿಯಂಡ ಹನೀಫಾ, ಮಸೂದ್ (ಮಚ್ಚು), ನಿಜಾಮ್ ಮಟ್ಟಮ್ ಮುಂತಾದವರು ಉಪಸ್ಥಿತರಿದ್ದರು. ದಫ್ ಸಮಿತಿಯ ಕಾರ್ಯದರ್ಶಿ ಶಫೀಕ್ ಗುಂಡಿಕೆರೆ ಸ್ವಾಗತಿಸಿ, ಸದಸ್ಯ ನಿಜಾಮ್ ವಂದಿಸಿದರು.