ಮಂಗಳೂರು, ಡಿ. ೨೯: ಒಲಂಪಿಯನ್ ಕೊಡಗಿನವ ರಾದ ಪ್ರಸ್ತುತ ಮಂಗಳೂರಿ ನಲ್ಲಿ ನೆಲೆಸಿರುವ ಎಂ.ಆರ್. ಪೂವಮ್ಮ ಅವರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ದ್ದಾರೆ. ಕರ್ನಾಟಕದ ಅಥ್ಲೀಟ್ ಕ್ರೀಡಾಪಟುವಾದ ಪೂವಮ್ಮ ಕೇರಳದ ಅಥ್ಲೀಟ್ ಆಗಿರುವ ಜಿತಿನ್ ಪೌಲ್ ಅವರನ್ನು ವರಿಸಿದ್ದಾರೆ. ಇಂದು ಮಂಗಳೂರಿನಲ್ಲಿ ವಿವಾಹ ನೆರವೇರಿತು. ೨೦೦೮ರ ಬೀಜಿಂಗ್ ಒಲಂಪಿಕ್ಸ್ ಹಾಗೂ ೨೦೧೬ರ ರಿಯೋ ಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು ೨೦೧೪ರ ಇಂಟೋನ್ ಏಷ್ಯಾಡ್‌ನಲ್ಲಿ ೧ ಚಿನ್ನ, ೧ ಕಂಚು, ೨೦೧೮ರ ಜಕಾರ್ತ ಏಷ್ಯಾಡ್‌ನಲ್ಲಿ ೨ ಚಿನ್ನ ಜಯಿಸಿದ್ದರು. ಅಲ್ಲದೆ ಹಲವಾರು ರಾಷ್ಟೀಯ ಪಂದ್ಯಾವಳಿಗಳಲ್ಲೂ ಅಥ್ಲೇಟಿಕ್ಸ್ನಲ್ಲಿ ಪೂವಮ್ಮ ಉತ್ತಮ ಸಾಧನೆ ತೋರಿದ್ದಾರೆ. ಸಮಾರಂಭದಲ್ಲಿ ಪೋಷಕರಾದ ಮಾಚೆಟ್ಟಿರ ರಾಜು - ಜಾನಕಿ, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.