ಮಡಿಕೇರಿ, ಡಿ. ೨೯: ಪುಟಾಣಿನಗರದ ಮೇಲಿನ ವಾಟರ್ ಟ್ಯಾಂಕ್ ಬಳಿ ಮಹಿಳೆಯೋರ್ವರು ನೀರಿನ ಟ್ಯಾಂಕ್ ಪಕ್ಕವೇ ಜಾಗವನ್ನು ಒತ್ತುವರಿ ಮಾಡಿ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದು, ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ವಾರ್ಡ್ ಸದಸ್ಯೆ ಮಂಜುಳಾ ಹಾಗೂ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒತ್ತುವರಿ ಆಗಿರುವ ಜಾಗದ ಬಗ್ಗೆ ಮತ್ತು ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ತಾಂತ್ರಿಕ ಸಲಹಾ ಸಮಿತಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ. ನಗರದ ದುರ್ಗಾಪರಮೇಶ್ವರಿ ದೇವಾಲಯದ ಬಳಿ ಹೊಸದಾಗಿ ತಡೆಗೋಡೆ ನಿರ್ಮಾಣವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಒತ್ತುವರಿ ಆಗಿರುವ ಜಾಗದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ವಾರ್ಡ್ ಸದಸ್ಯೆ ಮಂಜುಳಾ, ನಗರಸಭೆ ಇ.ಇ. ರಾಜೇಂದ್ರ, ಎಡಬ್ಲುö್ಯಇ ಸೌಮ್ಯ, ಎಸ್‌ಡಿಎ ಹರಿಣಿ, ವಾಟರ್ ಮ್ಯಾನ್ ಮನು ಹಾಗೂ ಸಿಬ್ಬಂದಿಗಳು ಹಾಜರಿದ್ದರು.