ನಾಪೋಕ್ಲು, ಡಿ. ೨೮: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರೀರ ಕಪ್ ಫುಟ್ಬಾಲ್ ಕ್ರೀಡಾಕೂಟದ ಮೂರನೆಯ ದಿನದ ಪಂದ್ಯಾಟದಲ್ಲಿ ಮಂಡೇಪAಡ, ಕುಲ್ಲೇಟಿರ, ಅರಮಣಮಾಡ, ಮುರುವಂಡ, ಮಾಪಂಗಡ, ಮುಕ್ಕಾಟಿರ (ದೇವಣಗೇರಿ), ಕಂಗಾAಡ, ಬಲ್ಲಡಿಚಂಡ, ಮುಲ್ಲಂಡ, ಕೊದೇಂಗಡ ತಂಡಗಳು ಜಯಗಳಿಸುವದರೊಂದಿಗೆ ಮುಂದಿನ ಸುತ್ತು ಪ್ರವೇಶಿಸಿವೆ.

ಕುಪ್ಪಂಡ ಮತ್ತು ಮಂಡೇಪAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪAಡ ತಂಡವು ಕುಪ್ಪಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಮಣಿಸಿತು. ಕುಲ್ಲೇಟಿರ ಮತ್ತು ಮಳವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮಳವಂಡ ತಂಡವನ್ನು ೧-೦ ಗೋಲಿನ ಅಂತರದಿAದ ಮಣಿಸಿತು. ಮೇಕೇರಿರ ಮತ್ತು ಅರಮಣಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರಮಣಮಾಡ ತಂಡವು ಮೇಕೇರಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಮುರುವಂಡ ಮತ್ತು ಮುಕ್ಕಾಟಿರ (ಬೇತ್ರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುರುವಂಡ ತಂಡವು ಮುಕ್ಕಾಟಿರ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಪಾಲೆಕಂಡ ಮತ್ತು ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಪಂಗಡ ತಂಡವು ಪಾಲೆಕಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿತು. ಚೆಂಬAಡ ಮತ್ತು ಮುಕ್ಕಾಟಿರ (ದೇವಣಗೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಚೆಂಬAಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಮ್ಮಣಕುಟ್ಟಂಡ ಮತ್ತು ಕಂಗಾAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಗಾAಡ ತಂಡವು ಅಮ್ಮಣಕುಟ್ಟಂಡ ತಂಡವನ್ನು

೨-೧ ಗೋಲುಗಳ ಅಂತರದಿAದ ಸೋಲಿಸಿತು. ಬಲ್ಲಡಿಚಂಡ ಮತ್ತು ಕುಟ್ಟೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಲ್ಲಡಿಚಂಡ ತಂಡವು ಕುಟ್ಟೇಟಿರ ತಂಡವನ್ನು ೨-೧ ಗೋಲಿನ ಅಂತರದಿAದ ಸೋಲಿಸಿತು. ಚೌರೀರ (ಹೊದವಾಡ) ಮತ್ತು ಮುಲ್ಲಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಚೌರೀರ ತಂಡದ ಗೈರು ಹಾಜರಿಯ ಹಿನ್ನೆಲೆಯಲ್ಲಿ ಮುಲ್ಲಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕೋದೇಂಗಡ ಮತ್ತು ಮಾಚಿಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋದೇಂಗಡ ತಂಡವು ಮಾಚಿಮಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿತು.