ಪೊನ್ನAಪೇಟೆ, ಡಿ. ೨೯: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಹಾಕಿ ಪಂದ್ಯಾವಳಿಯ ೩ನೇ ದಿನ ಪ್ರೀ ಕ್ವಾಟರ್ ಫೈನಲ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ೪ ತಂಡಗಳು ಕ್ವಾಟರ್ ಫೈನಲ್ ಪ್ರವೇಶ ಪಡೆದುಕೊಂಡವು. ತಿರುವಳ್ಳುವರ್ ಯೂನಿವರ್ಸಿಟಿ, ಮದ್ರಾಸ್ ಯೂನಿವರ್ಸಿಟಿ, ಭಾರತೀಯರ್ ಯೂನಿವರ್ಸಿಟಿ ಹಾಗೂ ಎಂ.ಎಸ್. ಯೂನಿವರ್ಸಿಟಿ ಪ್ರೀ ಕ್ವಾಟರ್ ಫೈನಲ್ ನಲ್ಲಿ ಜಯ ಸಾಧಿಸಿ, ಕ್ವಾಟರ್ ಫೈನಲ್‌ಗೆ ಲಗ್ಗೆ ಇಟ್ಟರೆ, ಪಂದ್ಯವನ್ನು ಕೈಚೆಲ್ಲುವ ಮೂಲಕ ಅವಿನಾಶ್ ಲಿಂಗA ಯೂನಿವರ್ಸಿಟಿ, ಪೆರಿಯಾರ್ ಯೂನಿವರ್ಸಿಟಿ, ಭಾರತಿದಾಸನ್ ಯೂನಿವರ್ಸಿಟಿ ಹಾಗೂ ಟಿಎನ್‌ಪಿಇಎಸ್ ಯೂನಿವರ್ಸಿಟಿ ಪಂದ್ಯಾವಳಿಯಿAದ ಹೊರ ನಡೆದವು.

ತಿರುವಳ್ಳರ್ ಯೂನಿವರ್ಸಿಟಿ ಅವಿನಾಶ್ ಲಿಂಗA ಯೂನಿವರ್ಸಿಟಿಯನ್ನು ೨-೦ ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ಜೆ.ಕವಿಪ್ರಿಯ ೧೧ ಹಾಗೂ ೨೬ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಮದ್ರಾಸ್ ಯೂನಿವರ್ಸಿಟಿ ಪೆರಿಯಾರ್ ಯೂನಿವರ್ಸಿಟಿಯ ವಿರುದ್ಧ ೫-೦ ಗೋಲುಗಳ ಭರ್ಜರಿ ಗೆಲುವು ಪಡೆಯಿತು. ೧೦ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಎಲ್. ಕೃಪ ವಿಜೇತ ತಂಡದ ಪರವಾಗಿ ಮೊದಲ ಗೋಲು ದಾಖಲಿಸಿದರು. ಎಸ್. ಶುಭಶ್ರೀ ೧೯, ೨೬ ಹಾಗೂ ೨೯ನೇ ನಿಮಿಷದಲ್ಲಿ ೩ ಗೋಲು ಬಾರಿಸಿ ಉತ್ತಮ ಪ್ರದರ್ಶನ ತೋರಿದರೆ, ನೇತ್ರ ೨೫ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಭಾರತೀಯರ್ ಯೂನಿವರ್ಸಿಟಿ ಭಾರತಿದಾಸನ್ ಯೂನಿವರ್ಸಿಟಿಯನ್ನು ೨-೦ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ೬ನೇ ನಿಮಿಷದಲ್ಲಿ ಎಸ್. ನೀಮಾ ರೋಷ್ನಿ, ೧೩ನೇ ನಿಮಿಷದಲ್ಲಿ ಎಂ.ಪ್ರವೀಣಾ ತಲಾ ಒಂದೊAದು ಗೋಲು ಹೊಡೆದರು. ರೋಚಕತೆಯಿಂದ ಕೂಡಿದ್ದ ಎಂ.ಎಸ್. ಯೂನಿವರ್ಸಿಟಿ ಹಾಗೂ ಟಿಎನ್‌ಪಿಇಎಸ್ ಯೂನಿವರ್ಸಿಟಿ ನಡುವಿನ ಪಂದ್ಯ ಪ್ರೇಕ್ಷಕರಿಗೆ ಕ್ರೀಡಾ ರಸದೌತಣ ನೀಡಿತು. ಪಂದ್ಯದ ೩೭ನೇ ನಿಮಿಷದಲ್ಲಿ ಟಿಎನ್‌ಪಿಇಎಸ್ ಯೂನಿವರ್ಸಿಟಿ ಪರ ಮಹಾಲಕ್ಷಿö್ಮ ಪ್ರಥಮ ಗೋಲು ಬಾರಿಸಿದರು. ಕೇವಲ ಒಂದು ನಿಮಿಷದ ಅಂತರದಲ್ಲಿ ೩೮ನೇ ನಿಮಿಷಕ್ಕೆ ಎಂ.ಎಸ್. ಯೂನಿವರ್ಸಿಟಿಯ ಆಟಗಾರ್ತಿ ಎಸ್. ಅಭಿನಯ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು ಸಮಮಾಡಿದರು. ಅಂತಿಮವಾಗಿ ಟೈಬ್ರೇಕರ್‌ನಲ್ಲಿ ಕೆ.ಆರ್. ಸುಗಂಧಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ೨-೧ ಗೋಲಿನ ಅಂತರದಿAದ ಗೆಲುವಿನ ನಗಾರಿ ಬಾರಿಸಿತು. -ಚನ್ನನಾಯಕ