ಸೋಮವಾರಪೇಟೆ, ಡಿ. ೨೮: ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆ್ಯಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವ ಸಂದರ್ಭ ಮದ್ಯಪಾನ ಮಾಡಿದ್ದೂ ಅಲ್ಲದೇ, ದಾರಿ ಮಧ್ಯೆ ವಾಹನವನ್ನು ನಿಲ್ಲಿಸಿ ಅನುಚಿತ ವರ್ತನೆ ತೋರಿದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವಾಹನ ಚಾಲಕನ ವಿರುದ್ಧ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ಇಲ್ಲಿನ ಪೆಟ್ರೋಲ್ ಬಂಕ್‌ವೊAದರಲ್ಲಿ ಕೆಲಸ ಮಾಡುತ್ತಿದ್ದ ಕೊಣನೂರು ಹೋಬಳಿಯ ಸಿದ್ದಾಪುರ ನಿವಾಸಿ, ತೀರ್ಥಾನಂದ್ (೩೦) ಅವರು ತಾ. ೨೫ರ ಸಂಜೆ ಆಕಸ್ಮಿಕವಾಗಿ ಬಿದ್ದು ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು.

ತಕ್ಷಣ ಸೋಮವಾರಪೇಟೆ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದು, ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿತ್ತು. ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸ್ಸು ಮಾಡಿದ ಹಿನ್ನೆಲೆ ಆ್ಯಂಬ್ಯುಲೆನ್ಸ್ ಚಾಲಕನೊಂದಿಗೆ ಕಳುಹಿಸಲಾಗಿತ್ತು

ಪಾನಮತ್ತನಾಗಿದ್ದ ಚಾಲಕ ದಾರಿ ಮಧ್ಯೆ ಆಗಾಗ್ಗೆ ವಾಹನವನ್ನು ನಿಲ್ಲಿಸುವುದು, ರೋಗಿಯ ಸಂಬAಧಿಕ ರೊಂದಿಗೆ ಅನುಚಿತ ವರ್ತನೆ ಮಾಡುವುದನ್ನು ಮುಂದುವರೆಸಿದ್ದ. ಹುಣಸೂರು ಬಳಿಯಲ್ಲಿ ‘ಆ್ಯಂಬ್ಯುಲೆನ್ಸ್ ನಿಲ್ಲಿಸಿ ಮುಂದೆ ಹೋಗಲು ಆಗುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಮದ್ಯದ ಅಮಲಿನಲ್ಲಿ ದರ್ಪ ತೋರಿದ್ದ.

ಅನ್ಯ ಮಾರ್ಗವಿಲ್ಲದೇ ರೋಗಿಯನ್ನು ಬೇರೊಂದು ವಾಹನದ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾ. ೨೭ರ ಬೆಳಿಗ್ಗೆ ತೀರ್ಥಾನಂದ್ ಕೊನೆಯುಸಿರೆಳೆದಿದ್ದರು. ಇವರ ಸಾವಿಗೆ ಆ್ಯಂಬ್ಯುಲೆನ್ಸ್ ಚಾಲಕನ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿ, ಸಂಬAಧಿಕರು ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆ್ಯಂಬ್ಯುಲೆನ್ಸ್ ವಾಹನವನ್ನು ವಶಕ್ಕೆ ಪಡೆದ ಪೊಲೀಸರು, ಚಾಲಕ ನಂಜಪ್ಪ ವಿರುದ್ಧ ಮದ್ಯಪಾನ ಮಾಡಿ ವಾಹನ ಚಾಲನೆ ಮೊಕದ್ದಮೆ ದಾಖಲಿಸಿದ್ದರು.

ಇಂದು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಸತೀಶ್ ಅವರು ಹುಣಸೂರಿಗೆ ತೆರಳಿದ್ದು, ಚಾಲಕ ನಂಜಪ್ಪ ನ್ಯಾಯಾಲಯಕ್ಕೆ ದಂಡ ಪಾವತಿಸಿದ. ನಂತರ ಬೇರೋರ್ವ ಚಾಲಕನ ಮುಖಾಂತರ ಆ್ಯಂಬ್ಯುಲೆನ್ಸ್ನ್ನು ಸೋಮವಾರಪೇಟೆಗೆ ತರಲಾಗಿದೆ.

ಆ್ಯಂಬ್ಯುಲೆನ್ಸ್ ಚಾಲಕನ ಕರ್ತವ್ಯ ನಿರ್ಲಕ್ಷö್ಯ ಸೇರಿದಂತೆ ಮೇಲಿನ ಎಲ್ಲಾ ಘಟನೆಗಳ ಬಗ್ಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ ವಿವರ ಮಾಹಿತಿ ಒದಗಿಸಿದ್ದು, ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ.