ಮಡಿಕೇರಿ, ಡಿ. ೨೮: ಮಡಿಕೇರಿಯ ಶ್ರೀ ಇಗ್ಗುತಪ್ಪ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಜ. ೧ ರಂದು ನಡೆಯಲಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಸದಸ್ಯರು ಕೋವಿಡ್ ಮಾರ್ಗಸೂಚಿಯಂತೆ ಪಾಲ್ಗೊಳ್ಳಲು ಕೋರಲಾಗಿದೆ ಎಂದು ಕಾರ್ಯದರ್ಶಿ ಬೊಳ್ಳಾರ್‌ಪಂಡ ಲೀಲಾ ಅವರು ತಿಳಿಸಿದ್ದಾರೆ.