*ಗೋಣಿಕೊಪ್ಪ, ಡಿ. ೨೮: ಅಪಘಾತ ವಲಯ, ಕಿರಿದಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
೨.೫ ಕೋಟಿ ಅನುದಾನದಲ್ಲಿ ಒಂದೂವರೆ ಕಿ.ಮೀ ಉದ್ದದ ಏಳು ಮೀ ಅಗಲದ ರಸ್ತೆಯ ಎರಡು ಬದಿಗಳನ್ನು ಒಂಬತ್ತು ಮೀ. ಅಗಲಕ್ಕೆ ಡಾಂಬರೀಕರಣ ನಡೆಯಲಿದೆ. ಅಪಘಾತ ವಲಯ ಎಂದು ಗುರುತಿಸಿರುವ ರಸ್ತೆಯಲ್ಲಿ ಪೊಲೀಸ್ ಇಲಾಖೆಯ ವರದಿ ಪ್ರಕಾರ ೧೪ಕ್ಕೂ ಹೆಚ್ಚು ಅಪಘಾತಗಳು ನಡೆದಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎರಡೂವರೆ ಕೋಟಿ ಮೊತ್ತದಲ್ಲಿ ವೀರಾಜಪೇಟೆ, ಚಿಕ್ಕಪೇಟೆ ಭಾಗದ ೫.೫೦ ಮೀಟರ್ ಅಗಲದ ರಸ್ತೆಯನ್ನು ಏಳು ಮೀಟರ್ ಅಗಲಕ್ಕೆ ಮತ್ತು ೬೦೦ ಮೀಟರ್ ಉದ್ದವಾಗಿ ಡಾಂಬರೀ ಕರಣ, ಮುಖ್ಯ ರಸ್ತೆಯ ಜಂಕ್ಷನ್‌ನಿAದ ಕೊಡವ ಸಮಾಜದವರೆಗಿನ ಮುಖ್ಯ ರಸ್ತೆಯ ಮಟ್ಟವನ್ನು ತಗ್ಗಿಸಿ ೫.೫೦ ಮೀಟರ್ ಅಗಲ ೫೦೦ ಮೀಟರ್ ಉದ್ದವನ್ನು ಡಾಂಬರೀಕರಣ, ಕಾಕೋಟುಪರಂಬು ಭಾಗದಲ್ಲಿ ೫.೫೦ ಮೀ. ಅಗಲದ ರಸ್ತೆಯನ್ನು ೭ ಮೀ. ಅಗಲ ಮತ್ತು ೬೫೦ ಮೀ. ಉದ್ದದಲ್ಲಿ ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸುವ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ರಮ್ಯ, ಸದಸ್ಯರಾದ ಚೇಂದ್ರಿಮಾಡ ಕಿಶ, ಕಂಜಿತAಡ ಸಂದ್ಯಾ ಉತ್ತಪ್ಪ, ಜನಿತಾ, ನಾಯಡ ಬೋಪಣ್ಣ, ಚಂಗೆಟ್ಟಿರ ರಾಜಸೋಮಯ್ಯ, ಶಾರದ, ಪದ್ಮ, ನವೀನ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುರೇಶ್, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಅಪ್ಪಂಡೇರAಡ ದಿನು, ಸಹಪ್ರಮುಖ್ ಕುಪ್ಪಂಡ ದಿಲನ್, ಲೋಕೋಪಯೋಗಿ ಹಿರಿಯ ಇಂಜಿನಿಯರ್ ಸಿದ್ದೆಗೌಡ, ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್, ಗುತ್ತಿಗೆದಾರರಾದ ಕತ್ರಿಕೊಲ್ಲಿ ವಿಜು ವಿಶ್ವನಾಥ್, ಕೊಲ್ಲಿರ ವಿಜುಬೋಪಣ್ಣ, ಅಯ್ಯನೆರವಂಡ ತನು ಉತ್ತಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಇದ್ದರು.