ಮಡಿಕೇರಿ, ಡಿ. ೨೯ : ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೭ ಕೋಟಿ ೯೨ ಲಕ್ಷದಷ್ಟು ವಹಿವಾಟು ನಡೆಸುವುದರ ಮೂಲಕ ರೂ.೧೧ ಲಕ್ಷ ೫೬ ಸಾವಿರದಷ್ಟು ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ತಿಳಿಸಿದ್ದಾರೆ.
ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಪ್ರಗತಿಯ ಕುರಿತು ವಿವರಿಸಿದರು. ಸಂಘದಲ್ಲಿ ೨೦೨೧ ಸದಸ್ಯರಿದ್ದು, ಆಯ್ದ ಸದಸ್ಯರುಗಳಿಗೆ ರೂ. ೭,೯೨,೬೯.೦೮೨ ಕೋಟಿಯ ಸಾಲ ವಿತರಿಸಲಾಗಿದ್ದು, ಇದರಲ್ಲಿ ರೂ. ೪.೬೯ ಕೋಟಿ ಕೆ.ಸಿ.ಐ ಫಸಲು ಸಾಲ, ರೂ. ೧.೨೯ ಕೋಟಿಗೂ ಅಧಿಕ ಆಭರಣ ಈಡಿನ ಸಾಲ, ರೂ. ೧,೨೭,೩೮ ಕೋಟಿ ಜಾಮೀನು ಸಾಲ, ರೂ. ೪.೬೨ ಲಕ್ಷ ಸ್ವಸಹಾಯ ಗುಂಪಿನ ಸಾಲ ಸೇರಿದಂತೆ ನಿರಖು ಠೇವಣಿ ಸಾಲ, ಮಧ್ಯಮಾವಧಿ ಸಾಲ, ವೇತನಾಧಾರಿತ ಸಾಲ, ಗೊಬ್ಬರ ಸಾಲ ಹಾಗೂ ಸಿಬ್ಬಂದಿ ಸಾಲವನ್ನು ನೀಡಲಾಗಿದೆ ಎಂದರು.
ಸAಘವು ರೂ. ೪,೪೨,೭೪ ಕೋಟಿಯಷ್ಟು ಠೇವಣಿ ಸಂಗ್ರಹಿಸಿದ್ದು, ಪಾವತಿಯಾದ ಪಾಲು ಬಂಡವಾಳ ರೂ. ೬೩,೪೩,೪೭೦ ಕೋಟಿಯಷ್ಟು ಆಗಿದ್ದು, ಸರ್ಕಾರದ ಪಾಲು ಬಂಡವಾಳ ರೂ. ೬೦ ಸಾವಿರದಷ್ಟಿದೆ ಎಂದರು. ಸಂಘವು ಎ.ಸಿ.ಸಿ.ಸಿಮೆಂಟ್ ಏಜೆನ್ಸಿ ಹೊಂದಿಕೊAಡಿದ್ದು, ಸದಸ್ಯರು ತಮಗೆ ಬೇಕಾದ ಸಿಮೆಂಟ್ ಹಾಗೂ ಗೊಬ್ಬರವನ್ನು ಸಂಘದಿAದ ಖರೀದಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಸಂಘವು ನೂತನ ಗೋದಾಮು ನಿರ್ಮಾಣಕ್ಕಾಗಿ ನಬಾರ್ಡ್ನಿಂದ ರೂ. ೨೫ ಲಕ್ಷ ಸಾಲ ಪಡೆದುಕೊಂಡಿದ್ದು, ರೂ. ೩೯.೭೫ ಲಕ್ಷಗಳ ನೀಲಿ ನಕ್ಷೆ ಹಾಗೂ ಅಂದಾಜುಪಟ್ಟಿ ತಯಾರಿಸಿದ್ದು, ಟೆಂಡರ್ ಪ್ರಕ್ರಿಯೆ ಮೂಲಕ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪೂಣಚ್ಚ ಮಾಹಿತಿ ನೀಡಿದರು.
ಸಂಘದ ಸದಸ್ಯರಾಗಿ ಸಾಲ ಪಡೆದು ಕೋವಿಡ್ನಿಂದ ಮೃತಪಟ್ಟ ಇಬ್ಬರು ಸದಸ್ಯರ ಸಾಲದ ಬಡ್ಡಿಯನ್ನು ಸಂಘದಿAದ ಮನ್ನಾ ಮಾಡಲಾಗಿದೆ. ಈಗಾಗಲೇ ಮೈಕ್ರೋ ಎ.ಟಿ.ಎಂ ಕಾರ್ಯ ನಿರ್ವಹಿಸುತ್ತಿದ್ದು, ಸದಸ್ಯರು ತುರ್ತಾಗಿ ರೂ. ೧೧ ಸಾವಿರದೊಳಗೆ ಹಣ ಪಡೆಯಬಹುದಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಯಾದ ಫ್ರೂಟ್ಸ್ ತಂತ್ರಾAಶದ ಮೂಲಕ ಸಾಲ ವಿತರಣೆ ಮಾಡಲಾಗುತ್ತಿದೆ. ಸದಸ್ಯರು ಏಕವ್ಯಕ್ತಿಯ ಹೆಸರಿನಲ್ಲಿ ಆರ್ಟಿಸಿ ಪಡೆದುಕೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ವಾಂಚೀರ ರನ್ನ ಅಜಯ್ ಕುಮಾರ್, ಸದಸ್ಯರಾದ ನೆರವಂಡ ಅನುಫ್ ಉತ್ತಯ್ಯ, ಚೌರೀರ ಪಳಂಗಪ್ಪ, ಐರೀರ ಪೂಣಚ್ಚ, ಮೇಕಂಡ ಸುಬ್ರಮಣಿ, ಕರ್ಣಯ್ಯನ ರಾಧಾಕೃಷ್ಣ, ಕರ್ಣಯ್ಯನ ಪ್ರಭಾಕರ, ಚೌರೀರ ಅಪ್ಪಣ್ಣ, ಚೆಟ್ಟಿಮಾಡ ಹೇಮಮಾಲಿನಿ, ಹೆಚ್.ಎ. ಹರೀಶ್ ಕುಮಾರ್, ಡಿಸಿಸಿ ಬ್ಯಾಂಕಿನಿAದ ನೇಮಕಗೊಂಡಿರುವ ಸಂಘದ ಮೇಲ್ವಿಚ್ಚಾರಕ ಮಾಳೇಟಿರ ಅಯ್ಯಪ್ಪ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ. ಸೋಮಣ್ಣ ಉಪಸ್ಥಿತರಿದ್ದರು.
ಮೇಕಂಡ ಸ್ವೀಟಿ ಜಾನಕಿ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಸ್ವಾಗತಿಸಿದರು. ಉಪಾಧ್ಯಕ್ಷ ಅಜಯ್ ಕುಮಾರ್ ವಂದಿಸಿದರು.