ವೀರಾಜಪೇಟೆ, ಡಿ. ೨೮: ಕರ್ತವ್ಯ ನಿಮಿತ್ತ ತೆರಳುತ್ತಿದ್ದ ಪತ್ರಕರ್ತನಿಗೆ ಅಪರಿಚಿತ ವಾಹನ ಒಂದು ಡಿಕ್ಕಿಪಡಿಸಿದ್ದು ಪತ್ರಕರ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಚಿಕ್ಕಪೇಟೆಯಲ್ಲಿ ನಡೆದಿದೆ.

ವೀರಾಜಪೇಟೆ ನಗರದ ವಿದ್ಯಾನಗರ ನಿವಾಸಿ ವಾರ್ತಾಭಾರತಿ ದಿನಪತ್ರಿಕೆ ಮತ್ತು ಶಕ್ತಿ ದಿನಪತ್ರಿಕೆಯ ಗೌರವ ವರದಿಗಾರ ಪಿ.ಕೆ. ಅಬ್ದುಲ್ ರೆಹಮಾನ್ (೬೦). ಚಿಕ್ಕಪೇಟೆಯ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಲು ಮನೆಯಿಂದ ತಮ್ಮ ದ್ವಿಚಕ್ರ ವಾಹನ ಹೊಂಡ ಆಕ್ಟೀವಾ (ಕೆಎ ೧೨ ಎಲ್ ೮೧೫೮)ರಲ್ಲಿ ತೆರಳುತ್ತಿದ್ದಾಗ ಚಿಕ್ಕಪೇಟೆ ಬಳಿ ಎದುರಿನಿಂದ ಬಂದ ದ್ವಿಚಕ್ರ ವಾಹನ ಡ್ಯುಕ್ ಕಂಪೆನಿಯ ಕೆ.ಟಿ.ಎಂ. (ಕೆಎ ೦೯ ಹೆಚ್‌ಯು ೫೮೬೬) ಡಿಕ್ಕಿಯಾಗಿದೆ. ತಲೆ ಭಾಗಕ್ಕೆ ಮತ್ತು ಎಡಗಾಲು ಭಾಗಕ್ಕೆ ತೀವ್ರ ರೀತಿಯಲ್ಲಿ ಗಾಯಗಳಾಗಿವೆ.

ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಕೆ.ವಿ.ಜಿ. ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಠಾಣೆಯಲ್ಲಿ ದ್ವಿಚಕ್ರ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪಡಿಸಿದ ವಾಹನವನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. -ಕೆ.ಕೆ.ಎಸ್.