ಕೂಡಿಗೆ, ಡಿ. ೨೮ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಕಸ ವಿಲೇವಾರಿ ಘಟಕದ ಎದುರು ಕೂಡಿಗೆ ಗಾ.ಪಂ. ಸೀಗೆಹೊಸೂರು ವ್ಯಾಪ್ತಿಯ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಸೇರಿ ತಾ. ೩೦ ರಂದು ಪ್ರತಿಭಟನೆ ಮಾಡಲಾಗುವುದು ಎಂದು ಗಾ.ಪಂ. ಸದಸ್ಯ ಅನಂತ್ ಹಾಗೂ ರಮೇಶ್ ತಿಳಿಸಿದ್ದಾರೆ.

ಕುಶಾಲನಗರ ಪ.ಪಂ. ವತಿಯಿಂದ ಜಿಲ್ಲಾಧಿಕಾರಿ ಅನುಮೋದನೆ ಮೇರೆಗೆ ಕೂಡಿಗೆ ಗಾ.ಪಂ. ಒಪ್ಪಿಗೆಯಂತೆ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ಕುಶಾಲನಗರ ಪಟ್ಟಣ ಬೆಳೆದಂತೆ ಕಸದ ರಾಶಿಯು ಹೆಚ್ಚಾಗಿ ದಿನಂಪ್ರತಿ ಕಸವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಮಾಡುವ ವೈಜ್ಞಾನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡಿ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳ್ಳುತ್ತಿವೆ ಎಂದು ಹೇಳಿ ೧೦ ವರ್ಷಗಳು ಕಳೆದರೂ ಸಹ ಯಾವುದೇ ಕ್ರಮಗಳನ್ನು ಇದುವರೆಗೂ ತೆಗೆದು ಕೊಂಡಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ರೈತರಿಗೆ ನೊಣಗಳ ಕಾಟದ ಜೊತೆಗೆ ದುರ್ವಾಸನೆ ಹೆಚ್ಚಾಗುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಕಸ ವಿಲೇವಾರಿ ಘಟಕದ ಎದುರು ಸ್ಥಳೀಯ ನೂರಾರು ರೈತರು ಒಳ ಗೊಂಡAತೆ ಸ್ಥಳೀಯ ಜನಪ್ರತಿನಿಧಿ ಗಳು, ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಅನೇಕ ಗ್ರಾಮಸ್ಥರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.