ಶ್ರೀಮಂಗಲ, ಡಿ. ೨೭: ಬಿರುನಾಣಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೪೦.೪೭ ಕೋಟಿ ವಹಿವಾಟು ನಡೆಸಿ ರೂ. ೧೩ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್ ಅವರು ವಿವರಿಸಿದರು.

ಶುಕ್ರವಾರ ಬಿರುನಾಣಿಯಲ್ಲಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ೪೩೮ ಸದಸ್ಯರಿಗೆ ರೂ. ೮.೧೨ ಕೋಟಿಯ ಕೆ.ಪಿ.ಸಿ. ಸಾಲ, ೮೨ ಸದಸ್ಯರಿಗೆ ರೂ. ೨೫.೫೧ ಲಕ್ಷ ಜಾಮೀನು ಸಾಲ, ೫ ಸ್ವಸಹಾಯ ಸಂಘಕ್ಕೆ ರೂ. ೧೦ ಲಕ್ಷ ಸಾಲ ಅಲ್ಲದೇ ರೂ. ೫೩.೪೬ ಲಕ್ಷ ಆಭರಣ ಸಾಲ ದೊಂದಿಗೆ ಒಟ್ಟು ೯.೩೫ ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.

ಪ್ರಸಕ್ತ ವರ್ಷ ೧೦೬೮ ಟನ್ ರಸಗೊಬ್ಬರ ಖರೀದಿಸಿ ಇದುವರೆಗೆ ೧೦೫೩ ಟನ್ ಸಂಘದ ಸದಸ್ಯರಿಗೆ ಮಾರಾಟಮಾಡಲಾಗಿದೆ. ಸಂಘದಲ್ಲಿ ಈಗಾಗಲೇ ಮೈಕ್ರೋ ಎ.ಟಿ.ಎಂ. ಕಾರ್ಯ ನಿರ್ವಹಿಸುತ್ತಿದ್ದು, ಇದು ಜಿಲ್ಲಾ ಕೇಂದ್ರ ಬ್ಯಾಂಕಿನ ಎಲ್ಲಾ ಶಾಖೆಗಳಿಂದ ಪ್ರತಿ ದಿನ ಗರಿಷ್ಠ ರೂ. ೨೫ ಸಾವಿರ ನಗದೀಕರಣ ಮಾಡ ಬಹುದಾಗಿದೆ ಎಂದರು.

ಸಂಘವು ಪ್ರಸಕ್ತ ವರ್ಷ ರೂ. ೧೩.೨೫ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೬.೫ ಡಿವಿಡೆಂಟ್ ವಿತರಿಸಲಾಗುವುದು. ಬಾಡಗರಕೇರಿ-ಪೊರಾಡು ಗ್ರಾಮದ ಸಂಘದ ಜಾಗದಲ್ಲಿ ನಬಾರ್ಡ್ನಿಂದ ರೂ. ೫೦ ಲಕ್ಷ ಸಾಲ ಪಡೆದು ಗೊಬ್ಬರ ಗೋದಾಮು ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ ಅವರು ಸಂಘದಿAದ ನೀಡುವ ಆಭರಣ ಸಾಲಕ್ಕೆ ಮಹಾಸಭೆಯಲ್ಲಿ ಸದಸ್ಯರ ಮನವಿಯಂತೆ ಬಡ್ಡಿದರವನ್ನು ಕಡಿಮೆಗೊಳಿಸಲು ಆಡಳಿತ ಮಂಡಳಿ ಸಭೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.

ಸಂಘದಿAದ ನಡೆಸುತ್ತಿರುವ ನ್ಯಾಯ ಬೆಲೆ ಅಂಗಡಿಯಿAದ ನಷ್ಟವಾಗುತ್ತಿದ್ದು, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದು, ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದನ್ನು ನಡೆಸುತ್ತಿದ್ದು, ಸಂಚಾರಿ ಸೇವೆ ಸಲ್ಲಿಸುವುದಾದರೆ ಸಂಘದಿAದ ನ್ಯಾಯ ಬೆಲೆ ಅಂಗಡಿಯನ್ನು ಕೈಬಿಡುವುದಾಗಿ ವಿವರಿಸಿದರು. ಸಭೆಯಲ್ಲಿದ್ದ ಸಹಕಾರ ಸಂಘದ ಮೇಲ್ಚಿಚಾರಕ ಬಸವರಾಜ್ ಅವರು ಮಾತನಾಡಿ ಸಂಘದ ಸದಸ್ಯರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಜಿ.ಕೆ. ಸುಬ್ರಮಣಿ, ಎ.ಯು. ಚಿಣ್ಣಪ್ಪ, ಬಿ.ಕೆ. ಪೊನ್ನಪ್ಪ, ಎಂ.ಬಿ. ಮಂಜುನಾಥ್, ಬಿ.ಎಂ. ಸಂಪತ್, ಎ.ಯು. ಸುಶೀಲಾ, ಎ.ಆರ್. ರೇವತಿ ಪರಮೇಶ್ವರ, ಎ.ಎನ್. ಪುರುಷೋತ್ತಮ, ಪಿ.ಜೆ. ಶ್ರೀಹರಿ, ಹೆಚ್.ಟಿ. ಆನಂದ, ಜೆ.ಬಿ. ಬಸವ ಹಾಜರಿದ್ದರು.