ಪೆರಾಜೆ, ಡಿ. ೨೭: ಭಾರತೀಯ ಸೇನಾಪಡೆಯ ಹೆಲಿಕಾಪ್ಟರ್ ದುರಂತ ದಲ್ಲಿ ಮೃತರಾದ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಸಹ ಸೇನಾಧಿಕಾರಿಗಳಿಗೆ ನಮನ ಸಲ್ಲಿಸುವ ಉದ್ದೇಶದಿಂದ ಹಿಂದೂ ಜಾಗರಣಾ ವೇದಿಕೆಯ ಯೂತ್ ವಿಂಗ್ ಹಿಂದೂ ಯುವವಾಹಿನಿ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ಯಾದ್ಯಂತ ಸಂಚರಿಸುತ್ತಿರುವ ‘ಯೋಧ ನಮನಂ’ ಶ್ರದ್ಧಾಂಜಲಿ ರಥ ಯಾತ್ರೆಯನ್ನು ಪೆರಾಜೆಯಲ್ಲಿ ಸ್ವಾಗತಿಸಲಾಯಿತು. ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದ ಕಾವೇರಿ ಗದ್ದೆಯ ವಠಾರದಲ್ಲಿ ಅಗಲಿದ ಯೋಧರಿಗೆ ಪುಷ್ಪಾರ್ಚನೆ ಮಾಡುವು ದರ ಮೂಲಕ ಗೌರವ ಸಲ್ಲಿಸ ಲಾಯಿತು.

ಈ ಕಾರ್ಯಕ್ರಮದಲ್ಲಿ ಪೆರಾಜೆಯ ನಿವೃತ್ತ ಯೋಧ ಕುಂಬಳಚೇರಿ ವಿಶ್ವನಾಥ ಅಗಲಿದ ಯೋಧರಿಗೆ ನುಡಿನಮನ ಸಲ್ಲಿಸಿ ಮಾತನಾಡಿ , ಸೈನಿಕರ ದಿನನಿತ್ಯದ ಜೀವನದ ಬಗ್ಗೆ ವಿವರಿಸುತ್ತ, ಕಾರ್ಗಿಲ್ ಯುದ್ಧದ ಗೆಲುವಿನಲ್ಲಿ ಬಿಪಿನ್ ರಾವತ್ ಅವರ ಕಾರ್ಯತಂತ್ರ ಗಳು ಭಾರತವನ್ನು ಗೆಲ್ಲಿಸಿದನ್ನು ಪ್ರತಿಯೊಬ್ಬ ಭಾರತೀಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮುಂದೆ ಅವರು ಭಾರತದ ಭೂಸೇನೆಯ ಮುಖ್ಯಸ್ಥ ರಾಗಿ ನಿವೃತ್ತಿ ಆದರು. ನಂತರ ಅವರು ಹೊಸದಾಗಿ ದೇಶದಲ್ಲಿ ಸೃಷ್ಟಿಯಾದ 'ಸಿಡಿಎಸ್' ಹುದ್ದೆಯ ಮೊದಲ ಮುಖ್ಯಸ್ಥರಾದ ಮೇಲೆ ಉಗ್ರಗಾಮಿಗಳು ಸೇರಿದಂತೆ ನೆರೆಯ ಶತ್ರು ರಾಷ್ಟçಗಳ ಉಪಟಳಗಳಿಗೆ ಕಡಿವಾಣ ಹಾಕಿದರು. ಇಂತಹ ಯೋಧರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜಾಗರಣಾ ವೇದಿಕೆಯ ಜಿಲ್ಲಾ ಪ್ರಚಾರಕ್ ಸಂದೇಶ್, ಹಿಂದೂ ಜಾಗರಣಾ ವೇದಿಕೆ ಪೆರಾಜೆ ಘಟಕದ ಅಧ್ಯಕ್ಷ ರಂಜಿತ್ ಲಿಂಗರಾಜನಮನೆ, ಕಾರ್ಯದರ್ಶಿ ಸಚಿನ್ ಅಡ್ತಲೆ, ನಂಜಪ್ಪ ನಿಡ್ಯಮಲೆ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.