ಭಾಗಮಂಡಲ, ಡಿ. ೨೬: ಕ್ರಿಸ್ಮಸ್ ರಜೆ ಹಾಗೂ ಭಾನುವಾರ ಜೊತೆಯಲ್ಲೇ ಬಂದುದರಿAದ ಭಾಗಮಂಡಲ ಹಾಗೂ ತಲಕಾವೇರಿಗೆ ಇಂದು ಭಕ್ತಾದಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣ ಕಾರ್ಯ ಆಗುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿತ್ತು ಪೊಲೀಸರು ವಾಹನಗಳ ನಿಯಂತ್ರಣಕ್ಕೆ ಹರ ಸಾಹಸಪಟ್ಟರು. ಎಲ್ಲೆಂದರಲ್ಲಿ ಕಂಡುಬAದದ್ದು ವಾಹನಗಳ ಸಾಲು ಸಾಲು ಪುಣ್ಯಕ್ಷೇತ್ರ ತಲಕಾವೇರಿ, ಭಾಗಮಂಡಲದಲ್ಲಿ ಎಲ್ಲಿ ನೋಡಿದರಲ್ಲಿ ಕಾರ್ ಕಾರ್ ಕಾರ್... - ಸುನಿಲ್