ನಾಪೋಕ್ಲು, ಡಿ. ೨೬: ಸಮೀಪದ ಬಲಮುರಿ ಗ್ರಾಮದ ಶ್ರೀ ಮಹಾವಿಷ್ಣು ದೇವಳದಲ್ಲಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಪುನರ್ ಪ್ರತಿಷ್ಟಾಪನಾ ಕಾರ್ಯ ಬ್ರಹ್ಮಶ್ರೀ ವೇದಮೂರ್ತಿ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಆರಂಭಗೊAಡಿದ್ದು, ಶನಿವಾರ ಗುರುಗಣಪತಿ ಪೂಜೆ, ಮಹಾಗಣಪತಿ ಹೋಮ, ನವಗ್ರಹಪೂಜೆ, ಚೋರ ಶಾಂತಿ, ಶ್ವಾನ ಶಾಂತಿ, ಅದ್ಭುತ ಶಾಂತಿ ಧಾರ್ಮಿಕ ಕಾರ್ಯಗಳು ನೆರವೇರಿದವು.

ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಮಹಾಬ್ರಹ್ಮ ಮಂಡಲ ರಚನೆ, ಕಲಶ ಪ್ರತಿಷ್ಠೆ, ಆದಿವಾಸಾದಿಗಳು ಶಿಖರಾದಿವಾಸಗಳು, ಶೈಯ್ಯನಿದ್ರಾಕಲಶ ಪ್ರತಿಷ್ಟಾಪನೆಗಳು ನೆರವೇರಿದವು.

ಭಾನುವಾರ ಬೆಳಿಗ್ಗೆ ೧೦.೦೯ರ ಕುಂಭಲಗ್ನದಲ್ಲಿ ಶ್ರೀ ಮಹಾವಿಷ್ಣು ದೇವರ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ದೇವಾಲಯದ ಅರ್ಚಕ ಮಹಾಬಲೇಶ್ವರ ಭಟ್ ತಿಳಿಸಿದರು. ಇದಕ್ಕೂ ಮುನ್ನ ಶುಕ್ರವಾರ ಸಂಜೆ ತಂತ್ರಿಗಳನ್ನು ಪೂರ್ಣಕುಂಭದೊAದಿಗೆ ಸ್ವಾಗತಿಸಲಾಯಿತು. ಗುರುಗಣಪತಿ ಪೂಜೆ, ತೋರಣ ಪ್ರತಿಷ್ಠೆ, ವಾಸ್ತು ಹೋಮ ಹಾಗೂ ವಾಸ್ತು ಪೂಜೆಗಳು ನೆರವೇರಿದವು.