ಮಡಿಕೇರಿ, ಡಿ.೨೩: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ನಿಯಮಾನುಸಾರ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡಲು ಮುಂದಾಗಿರುವುದಾಗಿ ಎಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ.

ಬೀದಿ ನಾಯಿ ನಿಯಂತ್ರಣ ಸಂಬAಧ ಈಗಾಗಲೇ ಟೆಂಡರ್ ಪಡೆದಿರುವ ಸೇವಾದಾರರು/ ಬಿಡ್ಡುದಾರರು ನಗರಕ್ಕೆ ಭೇಟಿ ನೀಡಿ, ಬೀದಿನಾಯಿಗಳ ಸಂತಾನ ಹರಣ ಶಸ್ತç ಚಿಕಿತ್ಸೆಗೆ ಸೂಕ್ತ ಸ್ಥಳ ಪರಿವೀಕ್ಷಣೆ ಮಾಡಿದ್ದು, ನಗರದ ಹೊರ ವಲಯದ ಕಸ ವಿಲೇವಾರಿ ಘಟಕ ಬಳಿ ಬೀದಿನಾಯಿ ಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡಲಿದ್ದಾರೆ. ಈ ಕಾರ್ಯವು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

ನಗರಸಭೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳು ಬೀದಿ ಬದಿ ಓಡಾಡುವುದು ಕಂಡುಬAದಲ್ಲಿ, ಅಂತಹ ಶ್ವಾನಗಳಿಗೂ ಸಹ ಸಂತಾನ ಹರಣ ಶಸ್ತçಚಿಕಿತ್ಸೆ ನೀಡಬೇಕಾಗುತ್ತದೆ. ಸಾಕುನಾಯಿಗಳನ್ನು ಬೀದಿಗೆ ಬಿಡಬಾರದು ಎಂದು ಅನಿತಾ ಪೂವಯ್ಯ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೇಟಿ: ಮಡಿಕೇರಿ ನಗರದ ಅಭಿವೃದ್ಧಿಗೆ ಸಂಬAಧಿಸಿ ದಂತೆ ವಿಶೇಷ ಅನುದಾನ ಬಿಡುಗಡೆ ಮಾಡಿಸಲು ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಸದ್ಯದಲ್ಲೇ ನಿಯೋಗ ತೆರಳಲಾಗುವುದು; ಮಡಿಕೇರಿ ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೂ ಬೀದಿಬದಿ ಕಸ ಹಾಕುವುದು ಅಲ್ಲಲ್ಲಿ ಕಂಡು ಬರುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಗರದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಬೀದಿಬದಿ ಕಸ ಹಾಕುವುದು ಕಂಡುಬAದಲ್ಲಿ ನಿಯಮಾನುಸಾರ ಕ್ರಮವಹಿಸ ಲಾಗುವುದು ಎಂದು ಎಚ್ಚರಿಸಿದ್ದಾರೆ. ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹೊರತು ಪಡಿಸಿ ಬೇರಾವುದೇ ನಿಯಮಗಳಿದ್ದಲ್ಲಿ ನಗರಸಭೆಗೆ ಮಾಹಿತಿ ನೀಡಬಹುದಾಗಿದೆ ಎಂದು ಪೌರಾಯುಕ್ತ ಎಸ್.ವಿ.ರಾಮದಾಸ್ ಕೋರಿದ್ದಾರೆ.