ಮಡಿಕೇರಿ, ಡಿ. ೨೧: ಹತ್ತಾರು ವರ್ಷಗಳಿಂದ ಬಗೆಹರಿಯದೆ ಕೊಡಗು ಜಿಲ್ಲೆಯ ವಿವಿಧ ನ್ಯಾಯಾಲಯಗಳ ಅಂಗಳದಲ್ಲಿದ್ದ ೨೧೪೩ ಪ್ರಕರಣಗಳು ಇದೀಗ ಯಶಸ್ವಿಯಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ತಾ. ೧೮ ರಂದು ದೇಶದಲ್ಲಿ ನಡೆದ ರಾಷ್ಟಿçÃಯ ಮೆಗಾ ಲೋಕ ಅದಾಲತ್ ಅಂಗವಾಗಿ ಕೊಡಗು ಜಿಲ್ಲೆಯ ವಿವಿಧ ಕೋರ್ಟ್ಗಳಲ್ಲಿ ನಡೆದ ರಾಜಿ ಸಂಧಾನದಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥಗೊಂಡಿವೆ. ಅದಲ್ಲದೆ ೭ ಕೋಟಿ ೫೪ ಲಕ್ಷದ ೮೭ ಸಾವಿರದ ೨೪೩ ರೂಪಾಯಿ ಹಣವನ್ನು ಕಕ್ಷಿದಾರರಿಗೆ ಪಾವತಿಸಲು ಕ್ರಮವಹಿಸಲಾಗಿದೆ.

೫೨೯೨ ಪ್ರಕರಣಗಳು

ಕೊಡಗು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿರುವ ೧೮,೩೬೭ ಪ್ರಕರಣಗಳ ಪೈಕಿ (ರಾಜಿಯಾಗಬಲ್ಲ ಪ್ರಕರಣಗಳು ಮಾತ್ರ) ೫೨೯೨ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕೋರಿ ಮೆಗಾ ಲೋಕ ಅದಾಲತ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ೨೧೪೩ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥಗೊಂಡಿವೆ.

ರಾಜಿಯಾಗಬಲ್ಲ ಅಪರಾಧ ಪ್ರಕರಣಕ್ಕೆ ಸಂಬAಧಿಸಿದAತೆ ೫೧೮ ಅರ್ಜಿಗಳ ಪೈಕಿ ೩೧ ಪ್ರಕರಣಗಳು ಇತ್ಯರ್ಥಗೊಂಡಿವೆ. ೧೭೦೦ ಚೆಕ್ ಅಮಾನ್ಯ ಪ್ರಕರಣಗಳ ಪೈಕಿ ೨೪೨ ಪ್ರಕರಣ ಇತ್ಯರ್ಥಗೊಂಡು ರೂ ೩.೮೩ ಕೋಟಿಗೂ ಹೆಚ್ಚು ಹಣವನ್ನು ಸೇರಬೇಕಾದವರಿಗೆ ಪಾವತಿಸಲಾಗಿದೆ. ೯೨ ಬ್ಯಾಂಕ್ ವಸೂಲಾತಿ ಪ್ರಕರಣಗಳ ಪೈಕಿ ೭ ಪ್ರಕರಣ ಬಗೆಹರಿದು ರೂ. ೩೬ ಲಕ್ಷಕ್ಕೂ ಹೆಚ್ಚಿನ ಹಣ ಪಾವತಿಸಲಾಗಿದೆ. ೯೭ ಆರ್ಥಿಕ ವಸೂಲಾತಿ ಪ್ರಕರಣಗಳ ಪೈಕಿ ೧೧ ಪ್ರಕರಣಗಳು ಇತ್ಯರ್ಥಗೊಂಡು ರೂ. ೫೫ ಲಕ್ಷ ಹೆಚ್ಚಿನ ಮೊತ್ತ ಕಕ್ಷಿದಾರರಿಗೆ ಪಾವತಿಸಲಾಗಿದೆ. ೬೮ ಕಾರ್ಮಿಕ ವಿವಾದಗಳ ಪೈಕಿ ೧೨ ಸರಿಯಾಗಿವೆ. ವಿದ್ಯುತ್ ಕಾಯ್ದೆ ಸಂಬAಧಿಸಿದ ೧೦ ಪ್ರಕರಣಗಳ ಪೈಕಿ ೧೦ ಪ್ರಕರಣವೂ ರಾಜಿ ಸಾಂಧನದ ಮೂಲಕ ಪರಿಹಾರ ಕಂಡುಕೊAಡಿವೆ.

ವಿಚ್ಚೇದsÀನಕ್ಕೆ ಕೋರಿ ಬಂದಿದ್ದ ೨೦ ಪ್ರಕರಣಗಳ ಪೈಕಿ ೨ ಪ್ರಕರಣಗಳು ಇತ್ಯರ್ಥಗೊಂಡರೆ, ಭೂಸ್ವಾಧೀನ ಸಂಬAಧ ಕೋರಿ ಸಲ್ಲಿಕೆಯಾಗಿದ್ದ ೨ ಅರ್ಜಿಗಳು ಇತ್ಯರ್ಥಗೊಂಡಿವೆ.

ಸಿವಿಲ್ ಕೇಸ್‌ಗಳು ಇತ್ಯರ್ಥ

ರಾಜಿ ಸಂಧಾನ ಕೋರಿ ಸಲ್ಲಿಕೆಯಾಗಿದ್ದ ೭೬೪ ವಿವಿಧ ಬಗೆಯ ಕಂದಾಯ (ಸಿವಿಲ್) ಪ್ರಕರಣಗಳ ಪೈಕಿ ೭೦ ಪ್ರಕರಣಗಳನ್ನು ನ್ಯಾಯಾಧೀಶರುಗಳು ಇತ್ಯರ್ಥಪಡಿಸಿದ್ದಾರೆ. ಇದರಲ್ಲಿ ಆಸ್ತಿ ಹಂಚಿಕೆ, ಜಾಗ ತೆರವುಗೊಳಿಸುವ ಪ್ರಕರಣಗಳು ಸೇರಿದಂತೆ ಇನ್ನಿತರ ದಾವೆಗಳು ಒಳಗೊಂಡಿವೆ.

ವಿವಿಧ ಬಗೆಯ ೧೯೯೪ ಕ್ರಿಮಿನಲ್ ಕೇಸ್‌ಗಳ ಪೈಕಿ ೧೭೫೩ ಪ್ರಕರಣಗಳು, ೧೮ ಗ್ರಾಹಕರ ವ್ಯಾಜ್ಯ ಪ್ರಕರಣಗಳಲ್ಲಿ ೪ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿವೆ. -ಹೆಚ್.ಜೆ. ರಾಕೇಶ್