ಶನಿವಾರಸಂತೆ, ಡಿ. ೨೩: ಮರ ಕತ್ತರಿಸುವ ಯಂತ್ರ ಕೊಡದ ಕಾರಣ ವ್ಯಾಪಾರಿ ಆರ್.ಎಚ್. ಪ್ರದೀಪ್ ಕುಮಾರ್ ಮೇಲೆ ನಾಲ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ ಘಟನೆ ಕೊಡ್ಲಿಪೇಟೆಯ ಹೊಸ ಮುನ್ಸಿಪಾಲಿಟಿ ರಸ್ತೆಯಲ್ಲಿ ನಡೆದಿದೆ.

ಗ್ರಾಮದ ಚಂದ್ರ, ಅನಿಲ್, ಪ್ರತಾಪ್ ಹಾಗೂ ವಿನೋದ್ ವ್ಯಾಪಾರಿ ಪ್ರದೀಪ್ ಕುಮಾರ್ ಅಂಗಡಿಯಿAದ ಕಲ್ಲಳ್ಳಿ ಮಾರ್ಗವಾಗಿ ಮನೆಗೆ ಹಿಂತಿರುಗುತ್ತಿದ್ದಾಗ ಚಂದ್ರ ಮರ ಕತ್ತರಿಸುವ ಯಂತ್ರ ಕೇಳಿದ್ದು, ತನಗೆ ತುಂಬಾ ಕೆಲಸವಿದೆ ಎಂದು ಹೇಳಿ ಪ್ರದೀಪ್‌ಕುಮಾರ್ ನಿರಾಕರಿಸಿದ್ದರು.

ಸಂಜೆ ಚಂದ್ರ ತನ್ನೊಂದಿಗೆ ಅನಿಲ್, ಪ್ರತಾಪ್ ಹಾಗೂ ವಿನೋದ್ ರನ್ನು ಕರೆದುಕೊಂಡು ಪ್ರದೀಪ್ ಕುಮಾರ್ ಮನೆಯ ಗೇಟ್ ತೆರೆದು ಒಳ ಬಂದು ಮರ ಕತ್ತರಿಸುವ ಯಂತ್ರ ಕೊಡಲೇಬೇಕೆಂದು ಒತ್ತಾಯಿಸಿದರು. ಕೊಡಲು ಸಾಧ್ಯವಿಲ್ಲವೆಂದು ಪ್ರದೀಪ್ ಕುಮಾರ್ ನಿರಾಕರಿಸಿದಾಗ ಚಂದ್ರ ಮತ್ತು ಸ್ನೇಹಿತರು ಬೇಲಿಯ ಪಕ್ಕದಲ್ಲಿದ್ದ ದೊಣ್ಣೆಯಿಂದ ಹಲ್ಲೆ ನಡೆಸಿದರು. ಪ್ರದೀಪ್ ಕುಮಾರ್ ಕಿರುಚಾಟ ಕೇಳಿ ಮನೆಯೊಳಗಿದ್ದ ಪತ್ನಿ ರತ್ನಾ, ಪಕ್ಕದ ಮನೆಯ ರಾಜಶೇಖರ್ - ದಾಕ್ಷಾಯಿಣಿ ದಂಪತಿ ಬಂದು ಬಿಡಿಸಿದರೂ ಚಂದ,್ರ ನಿನ್ನನ್ನು ಮುಗಿಸದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ತೆರಳಿದರು ಎನ್ನಲಾಗಿದೆ.

ಗಾಯಾಳು ಪ್ರದೀಪ್ ಕುಮಾರ್ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಎಕ್ಸರೆ ತೆಗೆಸಿದ್ದು, ಮೂಳೆ ಮುರಿದಿರುವುದಾಗಿ ತಿಳಿದು ಬಂದಿದೆ.

ಮನೆಯ ಗೇಟ್ ತೆರೆದು ಅಕ್ರಮ ಪ್ರವೇಶ ಮಾಡಿ, ವಿನಾಕಾರಣ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರದೀಪ್ ಕುಮಾರ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್ ಟೇಬಲ್ ಡಿಂಪಲ್ ೩೪ ಐಪಿಸಿ ರೀತ್ಯ ಪ್ರಕರಣ ದಾಖಲಿಸಿದ್ದಾರೆ.