ಸೋಮವಾರಪೇಟೆ,ಡಿ.೨೪ : ಜಿಲ್ಲೆಯ ರೈತರು ಮತ್ತು ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಇಲ್ಲಿನ ಜೇಸಿ ವೇದಿಕೆಯಲ್ಲಿ ನಡೆಯುತ್ತಿರುವ ರೈತರ ಚಳವಳಿ ೧೨ನೇ ದಿನ ಪೂರೈಸಿದ್ದು, ಈವರೆಗೆ ಯಾವೊಂದು ಬೇಡಿಕೆಯೂ ಈಡೇರಿಲ್ಲ.
ರೈತರ ೧೦ ಹೆಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸುವಂತೆ ಜಿಲ್ಲೆಯ ಶಾಸಕರುಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಮಂಜೂರಾತಿಗಾಗಿ ಕಡತ ಮಂಡಿಸುವAತೆ ಮುಖ್ಯಮಂತ್ರಿಗಳು ಸೂಚಿಸಿರುವುದನ್ನು ಹೊರತುಪಡಿಸಿದರೆ ಬೇರಿನ್ಯಾವ ಬೆಳವಣಿಗೆಯೂ ಆಗಿಲ್ಲ. ಉಚಿತ ವಿದ್ಯುತ್ ಒದಗಿಸುವ ಬಗ್ಗೆ ಸರ್ಕಾರದಿಂದ ಈವರೆಗೆ ಅಧಿಕೃತ ಆದೇಶವೂ ಬಂದಿಲ್ಲ.
ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕರ್ನಾಟಕ ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಭಾಗವಹಿಸಿದ್ದು, ಈಗಾಗಲೇ ಬೆಳಗಾವಿಯಲ್ಲಿಯೂ ರಾಜ್ಯ ರೈತ ಸಂಘದಿAದ ಪ್ರತಿಭಟನೆ ನಡೆದಿದ್ದು, ಮುಖ್ಯಮಂತ್ರಿಗಳಿಗೆ ರೈತರ ಸಮಸ್ಯೆ ಬಗೆಹರಿಸುವಂತೆ ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್ ಮೂಲಕ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳಿAದ ಸಮಸ್ಯೆ ಬಗೆಹರಿಯುವ ಭರವಸೆ ಸಿಕ್ಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಸಂಘಟಿಸಲಾಗುವುದು ಎಂದರು.
ಕೆಜಿಎಫ್ ರಾಜ್ಯ ಸಮಿತಿ ಸಂಚಾಲಕ ಟಿ.ಪಿ. ಸುರೇಂದ್ರ ಮಾತನಾಡಿ, ರೈತರಿಗೆ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕಳೆದ ೩-೪ ವರ್ಷಗಳಿಂದ ರೈತರು ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಆದರೆ, ಸೂಕ್ತ ಪರಿಹಾರ ಸಿಕ್ಕಿಲ್ಲ. ಇದರೊಂದಿಗೆ ಕೆಲವು ಪಟ್ಟಭದ್ರರ ಹಣದಾಸೆಗೆ ವಿಯೆಟ್ನಾಂನಿAದ ಕಳಪೆ ಗುಣಮಟ್ಟದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಸ್ಥಳೀಯ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಆಗುತ್ತಿದೆ. ಇದಕ್ಕೆ ಸರ್ಕಾರಗಳು ಕೈಜೋಡಿಸುತ್ತಿರುವುದು ದುರಂತ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಡಾ. ದುರ್ಗಾಪ್ರಸಾದ್, ಸಂಚಾಲಕ ಹನೀಫ್, ಕೆ.ಎಂ. ಬಾಪುಟ್ಟಿ, ಪ್ರಮುಖರಾದ ಲಿಂಗೇರಿ ರಾಜೇಶ್, ಲಕ್ಷö್ಮಣ್, ಎಸ್.ಬಿ. ರಾಜಪ್ಪ, ಕÀÄಶಾಲಪ್ಪ, ಐಗೂರಿನ ಡಿ.ಎಸ್. ಚಂಗಪ್ಪ, ಮಾಜಿ ಸೈನಿಕ ಸಿ.ಬಿ. ಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.