ಗೋಣಿಕೊಪ್ಪಲು, ಡಿ.೨೪: ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯು ಗೊಂದಲದ ಗೂಡಾಗಿ ಈ ವಿದ್ಯುತ್ ಲೈನ್ ಅನ್ನು ತೆರವುಗೊಳಿಸುವಂತೆ ಚೆಪ್ಪುಡೀರ ರಾಕೇಶ್ ಹಾಗೂ ಚೆಪ್ಪುಡೀರ ವಿವೇಕ್ ಒತ್ತಾಯಿಸಿದರು. ಸರ್ಕಾರ ಕೋಟ್ಯಂತರ ಹಣವನ್ನು ಜನರ ಉಪಯೋಗಕ್ಕೆ ನೀಡಿದರೆ .ಇದನ್ನು ಬಳಸಿಕೊಳ್ಳಲು ಇಲಾಖೆಯು ವಿಫಲವಾಗಿದೆ. ಹೀಗಾಗಿ ಲೈನ್‌ತೆಗೆಯುವಂತೆ ಆಗ್ರಹಿಸಿದರು. ಗ್ರಾಹಕರ ಮಾತಿಗೆ ಒಪ್ಪಿಗೆ ಸೂಚಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಒಂದು ವಾರದೊಳಗೆ ಈ ವಿದ್ಯುತ್ ಮಾರ್ಗದಲ್ಲಿರುವ ತಂತಿಗಳನ್ನು ತೆರವುಗೊಳಿಸ ಲಾಗುವುದು ಎಂದು ಭರವಸೆ ನೀಡಿದರು.
ಬಾಳೆಲೆ ವ್ಯಾಪ್ತಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಇಂಜಿನಿಯರ್ ಇಲ್ಲಿಯ ಗ್ರಾಹಕರಿಗೆ ಸ್ಪಂದಿಸಿರಲಿಲ್ಲ. ಇದರಿಂದ ಈ ಸಮಸ್ಯೆ ಇನ್ನು ಮುಂದುವರೆದಿದೆ. ಹಲವು ಮಂದಿಗೆ ಇನ್ನೂ ಕೂಡ ಮೀಟರ್ ನಂಬರ್ ಸಿಗಲಿಲ್ಲ. ಈ ಬಗ್ಗೆ ಕೂಡಲೇ ಕ್ರಮವಹಿಸಿ ಗ್ರಾಹಕರಿಗೆ ಆದ ಸಮಸ್ಯೆಯನ್ನು ನಿವಾರಿಸುವಂತೆ ಪಿ.ಜಿ.ಗೀತಾ ಹಾಗೂ ಆಶೀಕ್ ಒತ್ತಾಯಿಸಿದರು. ವಿದ್ಯುತ್ ಮೀಟರ್ ನಂಬರ್ ನೀಡಲು ಇಲ್ಲಿನ ಸಹಾಯಕ ಇಂಜಿನಿಯರ್ ಮನುರವರಿಗೆ ಹಿರಿಯ ಅಧಿಕಾರಿ ನಿರ್ದೇಶನ ನೀಡಿದರು. ಗ್ರಾಹಕರ ಹಾಗೂ ಅಧಿಕಾರಿಗಳ ನಡುವೆ ಮಾತಿನ ವಾಗ್ಯುದ್ಧ ನಡೆಯಿತು. ಗೋಣಿಕೊಪ್ಪಲು ಉಪ ವಿಭಾಗದ ಜವಾಬ್ದಾರಿ ವಹಿಸಿಕೊಂಡಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ನೀಲ್‌ಶೆಟ್ಟಿಯನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸುವಂತೆ ಗ್ರಾಹಕರು ಪಟ್ಟು ಹಿಡಿದ ಪ್ರಸಂಗ ಎದುರಾಯಿತು.
ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯ ಆವರಣದಲ್ಲಿ ಗ್ರಾಹಕರ ಕುಂದುಕೊರತೆಗಳ ಬಗ್ಗೆ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಗೆ ಕೊಡಗಿನ ಬಾಳೆಲೆ, ಕಿರುಗೂರು, ಶ್ರೀಮಂಗಲ, ಪೊನ್ನಂಪೇಟೆ, ಪೊನ್ನಪ್ಪಸಂತೆ ಮುಂತಾದ ಭಾಗದಿಂದ ರೈತರು ತಮ್ಮ ಸಮಸ್ಯೆಯನ್ನು ತೋಡಿಕೊಳ್ಳಲು ಆಗಮಿಸಿದ್ದರು. ನಿರಂತರ ವಿದ್ಯುತ್ ನಿಲುಗಡೆ, ಗ್ರಾಹಕರೊಂದಿಗೆ ಅನುಚಿತ ವರ್ತನೆ, ಮಿತಿಮೀರಿದ ಭ್ರಷ್ಟಚಾರ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಮಡಿಕೇರಿಯಿಂದ ಸಭೆಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಆಗಮಿಸಿ ಇಲ್ಲಿಯ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಗೋಣಿಕೊಪ್ಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಇಇ ನೀಲ್‌ಶೆಟ್ಟಿ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರ ವಹಿಸಿಕೊಂಡ ನಂತರ ವಿದ್ಯುತ್ ಸಮಸ್ಯೆ ಉಲ್ಬಣಗೊಂಡಿದೆ. ಕೇವಲ ನೆಪ ಹೇಳುತ್ತ ಸಮಯ ಕಳೆಯುತ್ತಿದ್ದಾರೆ.
ಇವರಿಂದ ಯಾವುದೇ ಕೆಲಸ ನಿರೀಕ್ಷಿಸಲು ಸಾಧ್ಯವಿಲ್ಲ. ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ನಡೆದುಕೊಳ್ಳುತ್ತಿಲ್ಲ. ಇವರನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸುವಂತೆ ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ರಾಕೇಶ್ ಅಧಿಕಾರಿಗಳ ಗಮನ ಸೆಳೆದರು. ಈ ವೇಳೆ ವಿವಿಧ ಭಾಗದಿಂದ ಆಗಮಿಸಿದ್ದ ರೈತರಾದ ಮಚ್ಚಮಾಡ ಕಾಶಿ,ತೀತಮಾಡ ಆಶಿಕ್ ಬೋಪಣ್ಣ, ಪೆಮ್ಮಂಡ ಮಧು, ಕೊಕ್ಕೆಂಗಡ ಸಚಿನ್, ಚೆಪ್ಪುಡೀರ ವಿವೇಕ್ ಸೇರಿದಂತೆ ಇನ್ನಿತರ ಪ್ರಮುಖರು ತಮಗೆ ಆದ ಅನ್ಯಾಯವನ್ನು ಎಳೆಎಳೆಯಾಗಿ ಹಿರಿಯ ಅಧಿಕಾರಿಗಳ ಮುಂದೆ ಮಂಡಿಸಿದರು. ಈ ವೇಳೆ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು ರೈತರ ತಾಳ್ಮೆಯ ಕಟ್ಟೆ ಒಡೆದಿತ್ತು.
ರೈತರು ತಮ್ಮ ಭತ್ತದ ಗದ್ದೆಯಲ್ಲಿ ಅಳವಡಿಸಿರುವ ಮೋಟರ್‌ಗೆ ವಿದ್ಯುತ್ ಇಲ್ಲಿಯ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಗೋಣಿಕೊಪ್ಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಇಇ ನೀಲ್‌ಶೆಟ್ಟಿ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರ ವಹಿಸಿಕೊಂಡ ನಂತರ ವಿದ್ಯುತ್ ಸಮಸ್ಯೆ ಉಲ್ಬಣಗೊಂಡಿದೆ. ಕೇವಲ ನೆಪ ಹೇಳುತ್ತ ಸಮಯ ಕಳೆಯುತ್ತಿದ್ದಾರೆ.
ಇವರಿಂದ ಯಾವುದೇ ಕೆಲಸ ನಿರೀಕ್ಷಿಸಲು ಸಾಧ್ಯವಿಲ್ಲ. ಗ್ರಾಹಕರೊಂದಿಗೆ ಸೌಜನ್ಯದೊಂದಿಗೆ ನಡೆದುಕೊಳ್ಳುತ್ತಿಲ್ಲ. ಇವರನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸುವಂತೆ ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ರಾಕೇಶ್ ಅಧಿಕಾರಿಗಳ ಗಮನ ಸೆಳೆದರು. ಈ ವೇಳೆ ವಿವಿಧ ಭಾಗದಿಂದ ಆಗಮಿಸಿದ್ದ ರೈತರಾದ ಮಚ್ಚಮಾಡ ಕಾಶಿ,ತೀತಮಾಡ ಆಶಿಕ್ ಬೋಪಣ್ಣ, ಪೆಮ್ಮಂಡ ಮಧು, ಕೊಕ್ಕೆಂಗಡ ಸಚಿನ್, ಚೆಪ್ಪುಡೀರ ವಿವೇಕ್ ಸೇರಿದಂತೆ ಇನ್ನಿತರ ಪ್ರಮುಖರು ತಮಗೆ ಆದ ಅನ್ಯಾಯವನ್ನು ಎಳೆಎಳೆಯಾಗಿ ಹಿರಿಯ ಅಧಿಕಾರಿಗಳ ಮುಂದೆ ಮಂಡಿಸಿದರು. ಈ ವೇಳೆ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು ರೈತರ ತಾಳ್ಮೆಯ ಕಟ್ಟೆ ಒಡೆದಿತ್ತು.
ರೈತರು ತಮ್ಮ ಭತ್ತದ ಗದ್ದೆಯಲ್ಲಿ ಅಳವಡಿಸಿರುವ ಮೋಟರ್‌ಗೆ ವಿದ್ಯುತ್ ವಾರದೊಳಗೆ ಈ ಭಾಗದ ರೈತರ ವಿದ್ಯುತ್ ಸಮಸ್ಯೆ ಬಗೆ ಹರಿಸುತ್ತೇನೆ. ಎಇಇ ವರ್ತನೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆಯುತ್ತೇನೆ. ಗ್ರಾಹಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು ಹಾಗೂ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳದಲ್ಲಿಯೇ ಎಇಇ ನೀಲ್‌ಶೆಟ್ಟಿಗೆ ನಿರ್ದೇಶನ ನೀಡಿದರು.ಇದಕ್ಕೆ ಸುಮ್ಮನಾಗದ ರೈತರು ಇವರು ಆಗಮಿಸಿದ ದಿನದಿಂದಲೂ ಇಲ್ಲಿಯ ಸಮಸ್ಯೆ ಹೇಳತೀರದಾಗಿದೆ. ಹಾಗಾಗಿ ಇವರ ವರ್ಗಾವಣೆ ಅನಿವಾರ್ಯ ವಾಗಿದೆ. ಕೂಡಲೇ ಬೇರೆ ಅಧಿಕಾರಿಗೆ ಜವಾಬ್ದಾರಿ ನೀಡಬೇಕೆಂದು ಪಟ್ಟು ಹಿಡಿದರು. ಗ್ರಾಹಕರ ಮಾತಿಗೆಕಟ್ಟು ಬಿದ್ದ ಹಿರಿಯ ಅಧಿಕಾರಿ ಅಶೋಕ್ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಎಕ್ಸ್ಪ್ರೆಸ್‌ಲೈನ್ ಬೇಡ
ಕಿರುಗೂರು, ಬಾಳೆಲೆ ಮಾರ್ಗದಲ್ಲಿ ಅಳವಡಿಸಿರುವ ವಿದ್ಯುತ್‌ಎಕ್ಸ್ಪ್ರೆಸ್ ಲೈನ್‌ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೋಟ್ಯಂತರ ಹಣವನ್ನು ಈ ವಿದ್ಯುತ್ ಲೈನ್‌ಗೆ ಬಳಸಲಾಗಿದೆ. ರಸ್ತೆ ಉದ್ದಕ್ಕೂ ವಿದ್ಯುತ್ ಲೈನ್ ಜೋತು ಬಿದ್ದಿದೆ. ಇದರಿಂದಾಗಿ ರಸ್ತೆ ಕಾಮಗಾರಿ ನಡೆಸಲು ಅಡ್ಡಿಯಾಗಿದೆ. ಕೂಡಲೇ ಕೆಲವೇ ದಿನಗಳಲ್ಲಿ ಇಂತಹ ಸಮಸ್ಯೆಗಳಿಗೆ ತೆರೆ ಎಳೆಯಲಾಗುವುದು. ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಹಕರ ಸಭೆಯನ್ನು ವಿದ್ಯುತ್ ಇಲಾಖೆ ವತಿಯಿಂದ ಹೋಬಳಿ ವಾರು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳುವಂತೆ ವಿವೇಕ್ ಒತ್ತಾಯಿಸಿದರು. ರೈತರು ಡಿಸಂಬರ್‌ನಿAದ ಮಾರ್ಚ್ ತಿಂಗಳಿನವರೆಗೆ ತಮ್ಮ ಕೃಷಿ ಚಟುವಟಿಕೆಯಲ್ಲಿ ಬಿಡುವಿಲ್ಲದಂತೆ ಕೆಲಸ ನಿರ್ವಹಿಸುತ್ತಾರೆ. ಈ ವೇಳೆ ಗ್ರಾಹಕರ ಸಭೆ ಕರೆದು ಸಮಯ ವ್ಯರ್ಥ ಮಾಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯ ಬಗ್ಗೆ ಪರಿಹಾರ ಕಲ್ಪಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಗ್ರಾಮ ಸಭೆಗೆ ತಪ್ಪದೆ ಎಇಇ ಭಾಗವಹಿಸುವಂತೆ ಕ್ರಮಕೈಗೊಳ್ಳಲು ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಸುಖೇಶ್ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಅಧಿಕಾರಿಗೆ ಸಭೆಯಲ್ಲಿ ಭಾಗವಹಿಸಲು ಸೂಚನೆ ನೀಡುವುದಾಗಿ ತಿಳಿಸಿದರು. ಬಾಳೆಲೆಯ ಹಿರಿಯ ನಾಗರಿಕರಾದ ಮಚ್ಚಮಾಡ ಕಾಶಿ ಇಲಾಖೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಹಿರಿಯ ನಾಗರಿಕರಾದ ಚೆರಿಯಪಂಡ ಮಣಿ ಉತ್ತಪ್ಪ, ಚೆಕ್ಕೇರ ವಾಸು ಕುಟ್ಟಪ್ಪ, ಪಿ.ಎಂ.ಅಶ್ವತ್, ಚೆಪ್ಪುಡೀರ ತಿಮ್ಮಯ್ಯ, ಪೆಮ್ಮಂಡ ಮಧು, ಕೀರ್ತಿ ಭಾಗವಹಿಸಿದ್ದರು. ಚೆಸ್ಕಾಂನ ಮಡಿಕೇರಿ ಭಾಗದ ಎಇಇ ದೇವಯ್ಯ, ಗೋಣಿಕೊಪ್ಪಲುವಿನ ಇಂಜಿನಿಯರ್ ಕೃಷ್ಣಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
-ಹೆಚ್.ಕೆ.ಜಗದೀಶ್