ಕುಶಾಲನಗರ, ಡಿ.೨೪ :ಕುಶಾಲನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಅಂಚಿನಲ್ಲಿ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮಹಾ ಯೋಜನೆ (ಮಾಸ್ಟರ್ ಪ್ಲಾನ್) ನಕ್ಷೆಯಲ್ಲಿ ಅಳವಡಿಸುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ತಿಳಿಸಿದ್ದಾರೆ.
ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಈಗಾಗಲೇ ಪ್ರಾಧಿಕಾರ ತಾತ್ಕಾಲಿಕ ಮಹಾಯೋಜನೆಯನ್ನು ಅನುಮೋದಿಸಿದ ಅಭಿವೃದ್ಧಿಯನ್ನು ನಿಯಂತ್ರಿಸುವ ಉದ್ದೇಶದಿಂದ ನದಿಯಂಚಿನಲ್ಲಿ ೩೦ ಮೀಟರ್ ಅಂತರಕ್ಕೆ ಜಾಗ ಕಾಯ್ದಿರಿಸಿ ಕ್ರಮಕೈಗೊಳ್ಳಲಾಗುವುದು.
ಕಳೆದ ಮೂರು ವರ್ಷಗಳಿಂದ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಕುಶಾಲನಗರ ಯೋಜನಾ ಪ್ರಾಧಿಕಾರದ ದಕ್ಷಿಣ ಹಾಗೂ ಪೂರ್ವ ಗಡಿಯಲ್ಲಿರುವ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಪ್ರದೇಶ ಮಾಸ್ಟರ್ ಪ್ಲಾನ್ ನಕ್ಷೆಯಲ್ಲಿರುವ ೩೦ ಮೀಟರ್ ಪ್ರದೇಶವನ್ನು ಒಳಗೊಂಡಿರುವುದು ಕಂಡುಬAದಿದೆ. ಕಾವೇರಿ ನದಿಯ ಪ್ರವಾಹದಿಂದ ಹಲವು ವಸತಿ ಬಡಾವಣೆ ಜಮೀನುಗಳು ಕಟ್ಟಡಗಳು ನೀರಿನಲ್ಲಿ ಮುಳುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಆಸ್ತಿಪಾಸ್ತಿ ನಷ್ಟ ಆಗುವುದನ್ನು ತಪ್ಪಿಸಲು ಮುಳುಗಡೆ ಪ್ರದೇಶಕ್ಕೆ ಸಂಬAಧಪಟ್ಟ ಇಲಾಖೆಯ ಸಹಯೋಗದೊಂದಿಗೆ ನಕ್ಷೆ ಸಿದ್ಧಪಡಿಸಿ ನಕ್ಷೆಯನ್ನು ಮಾಸ್ಟರ್ ಪ್ಲಾನ್ ನಕ್ಷೆಯಲ್ಲಿ ಅಳವಡಿಸಲು ಮತ್ತು ಮುಳುಗಡೆ ಪ್ರದೇಶದಲ್ಲಿ ಅಭಿವೃದ್ಧಿ ನಿಯಂತ್ರಿಸಲು ಸೂಕ್ತವಾದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಚರಣ್ ಮಾಹಿತಿ ನೀಡಿದ್ದಾರೆ.
ಜಲಾವೃತ್ತಗೊಳ್ಳುತ್ತಿರುವ ಪ್ರದೇಶದ ನಕ್ಷೆಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಸಹಯೋಗದೊಂದಿಗೆ ಚರ್ಚಿಸಿ ಮಾಸ್ಟರ್ ಪ್ಲಾನ್ ಅಳವಡಿಸಿಕೊಳ್ಳಲಾಗುವುದು ಈ ಹಿನ್ನೆಲೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣೆ ಜಂಟಿಯಾಗಿ ಕ್ಷೇತ್ರ ಭೇಟಿ ಮಾಡಿ ಜಿಪಿಎಸ್ ಮೂಲಕ ಪ್ರದೇಶ ಗುರುತಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಸಮರ್ಪಕವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್, ಈಗಾಗಲೇ ನದಿ ತಟದಲ್ಲಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುವ ಕಟ್ಟಡಕ್ಕೆ ಸಂಬAಧಿಸಿದAತೆ ನೆಲ ಅಂತಸ್ತು ಹೊರತುಪಡಿಸಿ ಮೇಲಂತಸ್ತುಗಳಲ್ಲಿ ಮಾತ್ರ ವಸತಿ ಪ್ರದೇಶಕ್ಕೆ ಉದ್ದೇಶಕ್ಕೆ ಅನುಮತಿ ನೀಡಲಿದೆ. ಸರ್ಕಾರದಿಂದ ನೀಡಿರುವ ನಿಯಮಾನುಸಾರ ಮಾರ್ಗಸೂಚಿಯಂತೆ ಯೋಜನಾ ದೃಷ್ಟಿಯಿಂದ ವಲಯ ನಿರ್ಮಾಣ ನಿಯಮಾವಳಿಯಲ್ಲಿ ಕೆಲವು ತಿದ್ದುಪಡಿ ತರಲಾಗುವುದು.
ಕಾವೇರಿ ನದಿಯ ಅಂಚಿನಲ್ಲಿ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮಹಾ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ೪೬ನೇ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ವಿ.ಡಿ ಪುಂಡರಿಕಾಕ್ಷ, ವೈಶಾಖ್, ಮಧುಸೂದನ್ , ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಅಮೃತರಾಜ್ ,ಪಟ್ಟಣ ಪಂಚಾಯಿತಿ ಅಧಿಕಾರಿ ಶಕೀಲ್ ಅಹಮದ್ ಇದ್ದರು.