ವೀರಾಜಪೇಟೆ, ಡಿ. ೨೩: ಇಲ್ಲಿಗೆ ಸಮೀಪದ ವಿ. ಬಾಡಗ ಶ್ರೀ ಮಹಾವಿಷ್ಣು ದೇವಸ್ಥಾನದ ೯ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ತಾ.೩೦ರಂದು ನಡೆಯಲಿದೆ.

ಅಂದು ಪೂರ್ವಾಹ್ನ ೯ ಗಂಟೆಯಿAದ ಗಣಪತಿ ಹೋಮ, ಮಹಾಪೂಜೆ, ಅಲಂಕಾರ ಪೂಜೆ, ರಂಗ ಪೂಜೆ ಹೀಗೆ ವಿವಿಧ ಪೂಜಾ ಕೈಂಕರ್ಯಗಳು ರಾತ್ರಿ ೮ ಗಂಟೆಯವರೆಗೆ ನಡೆಯಲಿದೆ.

ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.