ಕೊಡ್ಲಿಪೇಟೆ, ಡಿ. ೨೩: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ನಲ್ಲಿ ಮಾಹಿತಿ ಕಣಜ ವಿಶೇಷ ಗ್ರಾಮ ಸಭೆ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಮಾಹಿತಿ ಕಣಜ ಇ ಆಡಳಿತದ ನೂತನ ಪ್ರಯೋಗವಾಗಿದ್ದು , ಯಾವುದೇ ಲಾಗಿನ್ ವ್ಯವಸ್ಥೆ ಇಲ್ಲದೆ ನೇರವಾಗಿ ಮಾಹಿತಿ ಪಡೆಯಬಹುದು. ಅಂತರ್ಜಾಲದಲ್ಲಿ ಮಾಹಿತಿ ಕಣಜ ಎಂದು ನಮೂದಿಸಿದರೆ ಸಂಬAಧಿಸಿದ ಪೋರ್ಟಲ್ ಪೇಜ್ ತೆರೆದುಕೊಳ್ಳುತ್ತದೆ. ಇದರಲ್ಲಿ ಗ್ರಾಮ ಪಂಚಾಯತ್ , ಚೆಸ್ಕಾಂ, ರೈಲ್ವೆ, ಆರೋಗ್ಯ ಇಲಾಖೆ ಸೇರಿದಂತೆ ೬೦ ಇಲಾಖೆಗಳ ೧೬೦ ಸೇವೆಗಳನ್ನು ನಾಗರಿಕರು ಪಡೆದುಕೊಳ್ಳಬಹುದಾಗಿದೆ. ಇದನ್ನು ಸದುಪಯೋಗ ಪಡೆಸಿಕೊಳ್ಳುವಂತೆ ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ವಿನೋದಾ ಆನಂದ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರುಗಳಾದ ದಿನೇಶ್ ಕುಮಾರ್ , ಲೀನಾ ಪರಮೇಶ್ , ರೇಣುಕಾ ಮೇದಪ್ಪ , ಕಾರ್ಯದರ್ಶಿ ದೇವರಾಜ್ ,ಸಿಬ್ಬಂದಿಗಳಾದ ರಾಜೇಶ್ ,ಸಚಿನ್ ,ಧರ್ಮಪ್ಪ ಹಾಗೂ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.