ಮಡಿಕೇರಿ, ಡಿ.೨೪ : ಭಾಗಮಂಡಲನಾಡು ಗೌಡ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಸುಮಾರು ೨ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಮುಕ್ಕಾಟಿ ಮನೋಜ್ ಕುಮಾರ್ ಅವರ ವಾಸ್ತುಶಿಲ್ಪದಲ್ಲಿ ಮೂರ್ನಾಡು ಭಗವಾನ್ ಬಿಲ್ಡರ್ಸ್ ನ ಸುರೇಶ್ ಮುತ್ತಪ್ಪ ಅವರು ಕಟ್ಟಡ ನಿರ್ಮಾಣ ಮಾಡಲಿದ್ದಾರೆ. ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಿ.ಪಳಂಗಪ್ಪ, ಉಪಾಧ್ಯಕ್ಷ ನಿಡ್ಯಮಲೆ ವಿ.ದಾಮೋದರ, ಕಾರ್ಯದರ್ಶಿ ನಿಡ್ಯಮಲೆ ಎಂ.ರವಿ ಸೇರಿದಂತೆ ನಿರ್ದೇಶಕರು ಹಾಗೂ ಗುತ್ತಿಗೆದಾರರು ಭೂಮಿಪೂಜೆ ಸಂದರ್ಭ ಹಾಜರಿದ್ದರು.