ಗೋಣಿಕೊಪ್ಪಲು, ಡಿ. ೨೪: ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ವಿವಿಧ ವಾರ್ಡ್ಗಳ ಸಭೆಯನ್ನು ಆಯೋಜಿಸಲಾಗಿದ್ದು, ೧ ಹಾಗೂ ೨ನೇ ವಾರ್ಡ್ ಸಭೆಯು ತಾ. ೨೭ರಂದು ೧೦.೩೦ ಗಂಟೆಗೆ ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ನಡೆಯಲಿದೆ. ೪ನೇ ವಾರ್ಡ್ ಸಭೆಯನ್ನು ಮಧ್ಯಾಹ್ನ ೧೨ ಗಂಟೆಗೆ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ೩ನೇ ವಾರ್ಡ್ ಸಭೆಯು ೩ ಗಂಟೆಗೆ ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ನಡೆಯಲಿದೆ. ೫ನೇ ವಾರ್ಡ್ ಸಭೆಯು ತಾ. ೨೮ ಬೆಳಿಗ್ಗೆ ೧೦ ಗಂಟೆಗೆ ಹರಿಶ್ಚಂದ್ರಪುರದ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ೬ನೇ ವಾರ್ಡ್ ಸಭೆಯು ಮಧ್ಯಾಹ್ನ ೧೨ ಗಂಟೆಗೆ ವಿಜಯನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ೭ನೇ ಹಾಗೂ ೮ನೇ ವಾರ್ಡ್ ಸಭೆಯು ಮಧ್ಯಾಹ್ನ ೩ ಗಂಟೆಗೆ ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.