ವೀರಾಜಪೇಟೆ, ಡಿ. ೨೪: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ವಿವರ ಬಯಸಿ ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಲಾದ ಗ್ರಾಮಸ್ಥರ ಮೇಲೆ ಪಂಚಾಯಿತಿ ಬಿಲ್ ಕಲೆಕ್ಟರ್ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಿಲ್ ಕಲೆಕ್ಟರಾಗಿ ಸೇವೆ ಸಲ್ಲಿಸುತ್ತಿರುವ ಜಿ. ಮಾಚಯ್ಯ ಅವರ ಮೇಲೆ ದೂರು ದಾಖಲಾಗಿದೆ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಗ್ರಾಮದ ನಿವಾಸಿ ಬಲ್ಲಡಿಚಂಡ ಯು. ಲೋಕನಾಥ್ ಅವರು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರ ಪಡೆಯಲು ಒಂದು ತಿಂಗಳ ಹಿಂದೆ ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತಿಂಗಳು ಕಳೆದು ನೀಡಿರುವ ಮಾಹಿತಿ ನಕಲು ಪ್ರತಿಗಳು ಸ್ಪಷ್ಟವಾಗಿ ಗೋಚರಿಸುವಂತೆ ಮುದ್ರಣಗೊಂಡಿರುವುದಿಲ್ಲ ಹಾಗೂ ನೀಡಿರುವ ಪ್ರತಿಗಳಲ್ಲಿ ಒಂದೇ ಕಾಮಗಾರಿಯ ಬಗ್ಗೆ ಮೂರು ಪ್ರತಿಗಳನ್ನು ನೀಡಲಾಗಿದೆ.

ನೀಡಿರುವ ಪ್ರತಿಗಳ ಬಗ್ಗೆ ಮತ್ತೊಮ್ಮೆ ನಕಲು ಪ್ರತಿಗಳನ್ನು ನೀಡಬೇಕು ಎಂದು ತಾ. ೧೬ ರಂದು ಕಚೇರಿಗೆ ತೆರಳಿದ್ದಾರೆ. ಗ್ರಾಮ ಪಂಚಾಯಿತಿಯ ಸದಸ್ಯರ ಮುಂದೆ ಲೋಕನಾಥ್ ಅರ್ಜಿ ಸಲ್ಲಿಸಿದರು. ಏಕಾಎಕಿ ಅರ್ಜಿ ನೀಡಲು ಬಂದ ಲೋಕನಾಥ್ ಮೇಲೆ ಬಿಲ್ ಕಲೆಕ್ಟರ್ ಅವರು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಕಚೇರಿಯಿಂದ ಹೊರ ನಡೆಯಲು ತಿಳಿಸಿದ್ದಾರೆ. ಅರ್ಜಿದಾರರಾದ ಲೋಕನಾಥ್ ಅವರು ತಾ. ೨೩ ರಂದು ಕಚೇರಿಯ ವೇಳೆಯಲ್ಲಿ ಬಿಲ್ ಕಲೆಕ್ಟರ್ ವಿರುದ್ಧ ಪಿ.ಡಿ.ಓ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಬಳಿ ದೂರು ಸಲ್ಲಿಸಲು ತೆರಳಿದ್ದ ಸಂರ್ಭದಲ್ಲಿ ಮಾನಸಿಕವಾಗಿ ನೋವಾಗುವಂತೆ ನಿಂದಿಸಿ ಮಾಚಯ್ಯ ಅವರು ಹಲ್ಲೆಗೆ ಮುಂದಾಗಿದ್ದಾರೆ.

ಘಟನೆಗೆ ಸಂಬAಧಿಸಿದAತೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಲ್ಲಡಿಚಂಡ ಯು ಲೋಕನಾಥ್ ಅವರು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಜಿ. ಮಾಚಯ್ಯ ಅವರ ಮೇಲೆ ದೂರು ದಾಖಲು ಮಾಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.