ಮಡಿಕೇರಿ, ಡಿ.೨೩: ಪ್ರಸಕ್ತ (೨೦೨೧-೨೨) ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಸಂಬAಧ ಈ ಹಿಂದೆ ಸಣ್ಣ ಹಾಗೂ ಅತೀ ಸಣ್ಣ ರೈತರು ಮಾತ್ರ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿತ್ತು. ಇದೀಗ ಸರ್ಕಾರವು ದೊಡ್ಡ ಭೂ ಹಿಡುವಳಿದಾರರಿಗೆ (ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರು) ಕೂಡ ಸರ್ಕಾರ ಅವಕಾಶ ನೀಡಿದ್ದು, ಗರಿಷ್ಟ ೪೦ ಕ್ವಿಂಟಾಲ್‌ವರೆಗೆ ಭತ್ತ ನೀಡಬಹುದಾಗಿದೆ. ಆದ್ದರಿಂದ ಎಲ್ಲಾ ರೈತರು ಖರೀದಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.