ರಾಜ್ಯದಲ್ಲಿ ಓಮಿಕ್ರಾನ್ ಸ್ಫೋಟ: ಒಂದೇ ದಿನ ೧೨ ಮಂದಿಗೆ ಸೋಂಕು

ಬೆಂಗಳೂರು, ಡಿ. ೨೩: ರಾಜ್ಯದಲ್ಲಿ ದಿನ ಕಳೆದಂತೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಒಂದೇ ದಿನ ೧೨ ಮಂದಿಗೆ ಓಮಿಕ್ರಾನ್ ವಕ್ಕರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ ೩೧ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸೋಂಕು ಪತ್ತೆಯಾಗಿದೆ. ೧೦ ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ೨೦ ವರ್ಷದ ಯುವತಿ, ೫೬ ವರ್ಷದ ವ್ಯಕ್ತಿ, ೫೪ ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಇನ್ನುಳಿದಂತೆ ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ೩೧ ವರ್ಷದ ಪುರುಷ, ೪೨ ವರ್ಷದ ಪುರುಷ, ೨೧ ವರ್ಷದ ಯುವಕ, ೧೮ ವರ್ಷದ ಯುವತಿ, ೧೧ ವರ್ಷದ ಬಾಲಕಿ, ನೈಜಿರಿಯಾದಿಂದ ಬಂದಿದ್ದ ೫೯ ವರ್ಷದ ಮಹಿಳೆ ಹಾಗೂ ಡೆನ್ಮಾರ್ಕ್ ನಿಂದ ಬಂದಿದ್ದ ೪೯ ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿದೆ. ಗಾನಾದಿಂದ ಮಂಗಳೂರಿಗೆ ಆಗಮಿಸಿರುವ ೨೭ ವರ್ಷ ಯುವಕ ಹಾಗೂ ಸ್ವಿಜರ್ಲ್ಯಾಂಡ್ ನಿಂದ ಮೈಸೂರಿಗೆ ಆಗಮಿಸಿದ್ದ ೯ ವರ್ಷದ ಬಾಲಕಿಗೆ ಓಮಿಕ್ರಾನ್ ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ೩೧ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ೧೮, ದಕ್ಷಿಣ ಕನ್ನಡದಲ್ಲಿ ೭, ಉಡುಪಿ ೨, ಧಾರವಾಡ, ಬೆಳಗಾವಿ, ಶಿವಮೊಗ್ಗ, ಮೈಸೂರಿನಲ್ಲಿ ತಲಾ ೧ ಪ್ರಕರಣ ಪತ್ತೆಯಾಗಿವೆ.

ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’: ಪ್ರಧಾನಿ ಮೋದಿ

ವಾರಾಣಾಸಿ, ಡಿ. ೨೩: ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’.. ಹಸುಗಳು, ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಅವುಗಳಿಂದ ಬರುತ್ತಿರುವ ಕೋಟಿಗಟ್ಟಲೇ ಜೀವನೋಪಾಯವನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ತಮ್ಮ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ೨೦೯೫ ಕೋಟಿ ರೂ.ಗಳ ೨೭ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ವಾರಣಾಸಿಯ ಯುಪಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಆಹಾರ ಪಾರ್ಕ್ನಲ್ಲಿ ಬನಾಸ್ ಡೈರಿ ಸಂಕುಲ್‌ಗೆ ಶಂಕುಸ್ಥಾಪನೆ ನೆರವೇರಿಸಿ ಬನಾಸ್ ಡೈರಿಗೆ ಸಂಬAಧಿಸಿದ ೧.೭ ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ರೂ ೩೫-ಕೋಟಿ ಬೋನಸ್‌ಗಳನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ರಾಮನಗರದ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಪ್ಲಾಂಟಿನ ಜೈವಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ಮಾಡಿದರು. ಭೂ ಮಾಲೀಕತ್ವದ ಸಮಸ್ಯೆಗಳನ್ನು ಕಡಿಮೆ ಮಾಡಲು, ಪ್ರಧಾನಮಂತ್ರಿ ವಾಸ್ತವಿಕವಾಗಿ ೨೦ ಲಕ್ಷಕ್ಕೂ ಹೆಚ್ಚು ಜನರಿಗೆ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ ‘ಘರೌನಿ’ ವಿತರಿಸಿದರು. ೧೦ ದಿನಗಳಲ್ಲಿ ತಮ್ಮ ಕ್ಷೇತ್ರಕ್ಕೆ ಮೋದಿಯವರ ಎರಡನೇ ಭೇಟಿ ಇದಾಗಿದೆ.

ಬಿಎಸ್‌ಎಫ್ ಕಾರ್ಯಾಚರಣೆ: ಜಾನುವಾರು ಕಳ್ಳಸಾಗಣೆದಾರ ಹತ

ಗುವಾಹತಿ, ಡಿ. ೨೩: ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಗಡಿ ರಕ್ಷಣಾ ಪಡೆ ಯೋಧರು ಕಾರ್ಯಾಚರಣೆ ನಡೆಸಿ ಓರ್ವ ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಗುರುವಾರ ಮುಂಜಾನೆ ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಬಿಎಸ್‌ಎಫ್ ಗುಂಡಿಕ್ಕಿ ಕೊಂದಿದೆ. ಭದ್ರತಾ ಸಿಬ್ಬಂದಿಯಿAದ ಐಎನ್‌ಎಸ್‌ಎಎಸ್ ರೈಫಲ್‌ಗಳನ್ನು ಕಸಿದುಕೊಳ್ಳಲು ಯತ್ನಿಸಿದ ನಂತರ, ೧೫-೨೦ ಶಂಕಿತ ಜಾನುವಾರು ಕಳ್ಳಸಾಗಣೆದಾರರ ಗುಂಪಿನ ಮೇಲೆ ಬಿಎಸ್‌ಎಫ್ ಗುಂಡು ಹಾರಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಕಳ್ಳಸಾಗಾಣಿಕೆದಾರನ ಮೇಲೆ ಗುಂಡು ಹಾರಿಸಲಾಯಿತು, ಆತನಿಗೆ ಬುಲೆಟ್ ತಗುಲಿದ್ದರಿಂದ ಗಾಯವಾಗಿದ್ದು, ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಗುವಾಹಟಿಯಲ್ಲಿನ ಬಿಎಸ್‌ಎಫ್ ವಕ್ತಾರರು ಹೇಳಿದ್ದಾರೆ. ಈ ಪ್ರದೇಶವು ಬಿಎಸ್‌ಎಫ್ ಗುವಾಹಟಿ ಫ್ರಾಂಟಿಯರ್‌ನ ವ್ಯಾಪ್ತಿಯಲ್ಲಿದ್ದು, ಗುಂಡು ಹಾರಿಸಿದ್ದರಿಂದ ಗಿಟಾಲ್ದಾಹಾ ಬ್ಲಾಕ್ ನಿವಾಸಿ ಲುತ್ಪರ್ ರೆಹಮಾನ್ ಗಾಯಗೊಂಡರು. ಅವರನ್ನು ಬಿಎಸ್‌ಎಫ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದರು. ರೆಹಮಾನ್ ಈ ಪ್ರದೇಶದ ಜಾನುವಾರು ಕಳ್ಳಸಾಗಣೆದಾರನಾಗಿದ್ದ. ಘರ್ಷಣೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಕೂಚ್‌ಬೆಹಾರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪ್ರಾಪ್ತರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಗುಂಡು

ಗುವಾಹಟಿ, ಡಿ. ೨೩: ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಂಬAಧ ೫೦ ವರ್ಷದ ವ್ಯಕ್ತಿಯನ್ನು ಬಂಧಿಸಲು ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಆರೋಪಿ ರಜನಿ ಕಾಂತಾ ಡೈಮರಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ಸಮಯದಲ್ಲಿ ಆತನನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯ ಕಾಲಿಗೆ ಬುಲೆಟ್ ಗಾಯಗಳಾಗಿದ್ದು, ಗುವಾಹಟಿಯ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬAಧಿಸಿದAತೆ ಈ ಹಿಂದೆ ಪ್ರಕರಣ ದಾಖಲಾಗಿದ್ದು, ಸಂತ್ರಸ್ತರನ್ನು ಪರೀಕ್ಷಿಸಿದಾಗ ನಾಲ್ಕನೇ ಸಂತ್ರಸ್ತೆ ಇರುವುದು ಬೆಳಕಿಗೆ ಬಂದಿದೆ ಎಂದು ಮೊರಿಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಎನ್ ಹೇಳಿದ್ದಾರೆ. ನಾಲ್ಕನೇ ಸಂತ್ರಸ್ತೆ ಬಗ್ಗೆ ತನ್ನ ವಿಚಾರಣೆಯ ಸಮಯದಲ್ಲಿ, ಆರೋಪಿ ಸಂತ್ರಸ್ತೆಯ ಒಳಉಡುಪನ್ನು ತನ್ನ ಮನೆಯಲ್ಲಿ ಇಟ್ಟಿದ್ದಾಗಿ ತಿಳಿಸಿದನು. ಅದನ್ನು ಮರುಪಡೆಯಲು, ಪೊಲೀಸರ ತಂಡವು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ಯುತ್ತಿದ್ದರು ಎಂದು ಅಪರ್ಣಾ ಹೇಳಿದರು. ಇದಕ್ಕೂ ಮೊದಲು, ಮೂವರು ಸಂತ್ರಸ್ತರ ಕುಟುಂಬಗಳು ಎಫ್‌ಐಆರ್ ದಾಖಲಿಸಿದ ನಂತರ, ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬAಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.